ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳಿಗೆ US Embassy ವಾರ್ನಿಂಗ್! ಯಾಕೆ?

ಶಾಲೆಗೆ ತಿಳಿಸದೆಯೇ ತರಗತಿಗೆ ಚಕ್ಕರ್ ಹೊಡೆದರೆ, ಬಿಟ್ಟು ಬಿಟ್ಟರೆ ಅಥವಾ ವ್ಯಾಸಂಗ ಮಾಡುತ್ತಿರುವ ಕೋರ್ಸ್ ನ್ನು ತ್ಯಜಿಸಿದರೆ ಅಂತಹಗಳ ವಿದ್ಯಾರ್ಥಿಗಳ ವೀಸಾವನ್ನು ಹಿಂಪಡೆಯಬಹುದು
Casual Images
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳು ಶಾಲೆಗೆ ತಿಳಿಸದೆ ತರಗತಿಗೆ ಚಕ್ಕರ್ ಹೊಡೆದರೆ, ಬಿಟ್ಟು ಬಿಟ್ಟರೆ ಅಥವಾ ತೆಗೆದುಕೊಂಡ ಕೋರ್ಸ್ ನ್ನು ತ್ಯಜಿಸಿದರೆ ಅವರ ವಿದ್ಯಾರ್ಥಿ ವೀಸಾಗಳನ್ನು ರದ್ದುಗೊಳಿಸಬೇಕಾಗುತ್ತದೆ ಎಂದು ಭಾರತದಲ್ಲಿನ ಯುಎಸ್ ರಾಯಭಾರ ಕಚೇರಿ ಮಂಗಳವಾರ ಎಚ್ಚರಿಕೆ ನೀಡಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ರಾಯಭಾರ ಕಚೇರಿ, ವೀಸಾ ನಿಯಮಗಳಿಗೆ ಬದ್ಧವಾಗಿರಲು ಮತ್ತು ಯಾವುದೇ ಸಮಸ್ಯೆಗಳು ಎದುರಾಗದಂತೆ 'ವಿದ್ಯಾರ್ಥಿ ಸ್ಥಾನಮಾನವನ್ನು ಕಾಪಾಡಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಒತ್ತಾಯಿಸಿದೆ.

ಶಾಲೆಗೆ ತಿಳಿಸದೆಯೇ ತರಗತಿಗೆ ಚಕ್ಕರ್ ಹೊಡೆದರೆ, ಬಿಟ್ಟು ಬಿಟ್ಟರೆ ಅಥವಾ ವ್ಯಾಸಂಗ ಮಾಡುತ್ತಿರುವ ಕೋರ್ಸ್ ನ್ನು ತ್ಯಜಿಸಿದರೆ ಅಂತಹಗಳ ವಿದ್ಯಾರ್ಥಿಗಳ ವೀಸಾವನ್ನು ಹಿಂಪಡೆಯಬಹುದು. ಅಲ್ಲದೇ ಭವಿಷ್ಯದ US ವೀಸಾಗಳಿಗೆ ಅರ್ಹತೆಯನ್ನು ಕಳೆದುಕೊಳ್ಳಬಹುದು. ಯಾವಾಗಲೂ ವೀಸಾದ ನಿಯಮಗಳಿಗೆ ಬದ್ಧರಾಗಿರಿ ಎಂದು ಹೇಳಿದೆ.

ಅಮೆರಿಕದ ವಿಶ್ವವಿದ್ಯಾನಿಲಯಗಳು ಹೆಚ್ಚಿನ ಸಂಖ್ಯೆಯ ಭಾರತೀಯ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತವೆ. 2023 ರಲ್ಲಿ ಭಾರತದಲ್ಲಿನ ರಾಯಭಾರ ಕಚೇರಿಯು 1,40,000 ವಿದ್ಯಾರ್ಥಿ ವೀಸಾಗಳನ್ನು ನೀಡಿತ್ತು. ಇದು ಇತರ ರಾಷ್ಟ್ರಗಳಿಂತ ಹೆಚ್ಚಾಗಿದ್ದು, ಸತತ ಮೂರನೇ ವರ್ಷ ದಾಖಲೆ ನಿರ್ಮಿಸಿದೆ. ಇದೇ ವೇಳೆ ಭಾರತದಲ್ಲಿನ US ಮಿಷನ್ ದಾಖಲೆಯ 1.4 ಮಿಲಿಯನ್ ವೀಸಾಗಳನ್ನು ನೀಡಿತ್ತು.

Casual Images
ಭಾರತೀಯ ವಿದ್ಯಾರ್ಥಿಗಳ ಅಮೆರಿಕನ್ ವೀಸಾ ರದ್ದತಿ ಬಗ್ಗೆ ಅಮೆರಿಕ ಜೊತೆ ವಿದೇಶಾಂಗ ಇಲಾಖೆ ಚರ್ಚಿಸಿದೆಯೇ: ಕಾಂಗ್ರೆಸ್ ಪ್ರಶ್ನೆ

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com