
ಚೆನ್ನೈ: 'ಕನ್ನಡ ತಮಿಳಿನಿಂದ ಹುಟ್ಟಿತು' ಎಂಬ ವಿವಾದಾತ್ಮಾಕ ಹೇಳಿಕೆ ನೀಡುವ ಮೂಲಕ ಕನ್ನಡಿಗರ ಆಕ್ರೋಶಕ್ಕೆ ತುತ್ತಾಗಿರುವ ತಮಿಳಿನ ಮೆಗಾಸ್ಟಾರ್ ಕಮಲ್ ಹಾಸನ್ ಬುಧವಾರ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಸ್ಪಷ್ಟೀಕರಣವನ್ನು ವಿವರಣೆ ಎಂದು ಕರೆದಿದ್ದು, ಉತ್ತರ ಅಲ್ಲ ಎಂದಿದ್ದಾರೆ.
ಕನ್ನಡ ತಮಿಳಿನಿಂದ ಹುಟ್ಟಿದೆ" ಎಂಬ ಹೇಳಿಕೆಯನ್ನು ವಿವಾದವನ್ನಾಗಿ ಮಾಡಿದವರು, ಕನ್ನಡ ವಿಷಯವನ್ನು ಗೊಂದಲಗೊಳಿಸುತ್ತಿದ್ದಾರೆ ಎಂದು ಥಗ್ ಲೈಫ್ ನಟ- ಕಮ್ ರಾಜಕಾರಣಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕಮಲ್ ಹಾಸನ್, "ನಾನು ಪ್ರೀತಿಯಿಂದ ಹೇಳಿದ್ದೇನೆ. ಬಹಳಷ್ಟು ಇತಿಹಾಸಕಾರರು ನನಗೆ ಭಾಷಾ ಇತಿಹಾಸವನ್ನು ಕಲಿಸಿದ್ದಾರೆ. ನಾನು ಬೇರೆನೂ ಹೇಳಿಲ್ಲ ಎಂದು ಸಮರ್ಥಿಸಿಕೊಂಡರು.
ತಮಿಳುನಾಡು ಎಲ್ಲರಿಗೂ ಆಶ್ರಯ ನೀಡುವ ಅಪರೂಪದ ರಾಜ್ಯವಾಗಿದೆ.‘ತಮಿಳುನಾಡಿನಲ್ಲಿ ಮೆನನ್ ಮುಖ್ಯಮಂತ್ರಿ ಆಗಿದ್ದರು. ರೆಡ್ಡಿ ಒಬ್ಬರು ಮುಖ್ಯಮಂತ್ರಿ ಆಗಿದ್ದಾರೆ. ತಮಿಳರೊಬ್ಬರು ಸಿಎಂ ಆಗಿದ್ದು, ಕನ್ನಡಿಗ ಅಯ್ಯಂಗಾರ್ ಒಬ್ಬರು ಮುಖ್ಯಮಂತ್ರಿಯಾಗಿದ್ದಾರೆ ಎಂದು ತಿಳಿಸಿದರು.
ಪ್ರೀತಿ ಎಂದಿಗೂ ಕ್ಷಮೆ ಕೇಳುವುದಿಲ್ಲ: 'ಥಗ್ ಲೈಫ್' ಬ್ಯಾನ್ ಕುರಿತ ಕರೆಗೆ ಪ್ರತಿಕ್ರಿಯಿಸಿದ ಕಮಲ್ ಹಾಸನ್, ಕರ್ನಾಟಕದ ಜನರು ನನ್ನನ್ನು ಮತ್ತು ನನ್ನ ಸಿನಿಮಾ ನೋಡಿಕೊಳ್ಳುತ್ತಾರೆ ಎಂಬ ಭರವಸೆ ವ್ಯಕ್ತಪಡಿಸಿದರು.
ಕರ್ನಾಟಕದಿಂದ ಬಂದ ಮುಖ್ಯಮಂತ್ರಿಯೊಬ್ಬರಿಂದ (ಜಯಲಲಿತಾ) ಸಮಸ್ಯೆ ಎದುರಾದಾಗ ನನಗೆ ಬೆಂಬಲ ನೀಡಿದ್ದು ಕರ್ನಾಟಕ. ಇಲ್ಲಿಗೆ ಬಾ, ಮನೆ ಕೊಡುತ್ತೇವೆ, ಎಲ್ಲೂ ಹೋಗಬೇಡಿ ಎಂದು ಕನ್ನಡಿಗರು ಬೆಂಬಲಿಸಿದ್ದರು. ಹೀಗಾಗಿ ಥಗ್ ಲೈಫ್, ಕಮಲ್ ಹಾಸನ್ ಅವರನ್ನು ಜನರೇ ನೋಡಿಕೊಳ್ಳುತ್ತಾರೆ ಎಂದರು.
"ಇದು ಉತ್ತರ ಅಲ್ಲ. ವಿವರಣೆ. ಪ್ರೀತಿ ಎಂದಿಗೂ ಕ್ಷಮೆ ಕೇಳುವುದಿಲ್ಲ ಎಂದು ಅವರು ಹೇಳಿದರು.
ಥಗ್ ಲೈಫ್ ಸಿನಿಮಾವನ್ನು ನಿಷೇಧಿಸುವಂತೆ ಪ್ರತಿಪಕ್ಷ ಬಿಜೆಪಿ ಸೇರಿದಂತೆ ಹಲವು ಕನ್ನಡಪರ ಸಂಘಟನೆಗಳು ಕರೆ ನೀಡಿರುವಂತೆಯೇ, ಕಮಲ್ ಹಾಸನ್ ಸಾರ್ವಜನಿಕವಾಗಿ ಕ್ಷಮೆಯಾಚಿಸದಿದ್ದರೆ ಚಿತ್ರವನ್ನು ನಿಷೇಧಿಸುವುದಾಗಿ ಬೆದರಿಕೆ ಹಾಕಿದ್ದಾರೆ.
Advertisement