
ನವದೆಹಲಿ: ಇತ್ತೀಚಿನ ಗಡಿಯಾಚೆಗಿನ ಭಾರತದ ದಾಳಿಯನ್ನು ಹೊಗಳಿರುವ ಶಶಿ ತರೂರ್ ಅವರಿಗೆ ಕಾಂಗ್ರೆಸ್ ನಾಯಕ ಪವನ್ ಖೇರಾ ಗುರುವಾರ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. 2018ರಲ್ಲಿ ಶಶಿ ತರೂರ್ ಅವರೇ ಬರೆದಿರುವ 'The Paradoxical Prime Minister'ಪುಸ್ತಕದಿಂದ ಆಯ್ದ ಭಾಗವೊಂದನ್ನು ಪ್ರಮುಖವಾಗಿ ಪ್ರಸ್ತಾಪಿಸುವ ಮೂಲಕ ಅವರ ನಡೆಯನ್ನು ಟೀಕಿಸಿದ್ದಾರೆ.
ಇದರಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ರಾಜಕೀಯಗೊಳಿಸುವುದಕ್ಕೆ ಬಿಜೆಪಿ ವಿರುದ್ಧ ಶಶಿ ತರೂರ್ ವಾಗ್ದಾಳಿ ನಡೆಸಿದ್ದಾರೆ. ಮೋದಿ ಸರ್ಕಾರದಡಿ ಭಾರತದ ಭಯೋತ್ಪಾದನಾ ವಿರೋಧಿ ಕ್ರಮವನ್ನು ಶ್ಲಾಘಿಸಿದ್ದರಿಂದ ಎದುರಾದ ಟೀಕೆ, ಟ್ರೋಲ್ ಗಳನ್ನು ಪನಾಮಾದಲ್ಲಿ ಶಶಿ ತರೂರ್ ಪ್ರಶ್ನಿಸುತ್ತಿದ್ದಂತೆಯೇ ಪವನ್ ಖೇರಾ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಶಶಿ ತರೂರ್ ಅವರ ಪುಸ್ತಕದಿಂದ ಆಯ್ದು ಪುಟವೊಂದನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿರುವ ಪವನ್ ಖೇರಾ, ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಶಶಿ ತರೂರ್ 2018ರಲ್ಲಿ ಬರೆದಿರುವುದನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಇದರಲ್ಲಿ 2016ರ ಸರ್ಜಿಕಲ್ ಸ್ಟ್ರೈಕ್' ಕುರಿತು ಶಶಿ ತರೂರ್ ಬರೆದಿದ್ದು, ಮಿಲಿಟರಿ ಕಾರ್ಯಾಚರಣೆಯನ್ನು ರಾಜಕೀಯಗೊಳಿಸುತ್ತಿರುವುದಕ್ಕೆ ಬಿಜೆಪಿ ವಿರುದ್ಧ ತೀವ್ರ ಟೀಕಾ ಪ್ರಹಾರ ನಡೆಸಿದ್ದಾರೆ. ಪಾಕಿಸ್ತಾನದೊಂದಿಗಿನ ಗಡಿ ನಿಯಂತ್ರಣ ರೇಖೆ ಮತ್ತು ಮ್ಯಾನ್ಮಾರ್‌ನಲ್ಲಿ ಬಂಡುಕೋರರನ್ನು ಹತ್ತಿಕ್ಕಲು 2016ರಲ್ಲಿ ನಡೆಸಿದ ಸರ್ಜಿಕಲ್ ಸ್ಟ್ರೈಕ್ ನಾಚಿಕೆಗೇಡಿತನದು. ಈ ಹಿಂದೆ ಕಾಂಗ್ರೆಸ್ ಇಂತಹ ಹಲವಾರು ದಾಳಿಗಳನ್ನು ನಡೆಸಿದ್ದರೂ ಪಕ್ಷದ ಚುನಾವಣಾ ಸಾಧನವಾಗಿ ಬಳಸಿಕೊಂಡಿರಲಿಲ್ಲ ಎಂದು ಹೇಳಿದ್ದಾರೆ.
ಪನಾಮಾ ಭೇಟಿ ವೇಳೆಯಲ್ಲಿ ಶಶಿ ತರೂರ್ ಹೇಳಿಕೆ ಬೆನ್ನಲ್ಲೇ ಪ್ರವೀಣ್ ಖೇರಾ ಸಾಮಾಜಿಕ ಜಾಲತಾಣದಲ್ಲಿ ಸರಣಿ ಫೋಸ್ಟ್ ಮೂಲಕ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ. ಶಶಿ ತರೂರ್ ಹೇಳಿಕೆ ಕುರಿತು ಕಿಡಿಕಾರಿರುವ ಕಾಂಗ್ರೆಸ್ ನಾಯಕ ಉದಿತ್ ರಾಜ್ ಶಶಿ ತರೂರ್ ಬಿಜೆಪಿಯ 'ಸೂಪರ್ ವಕ್ತಾರ' ಆಗಿದ್ದಾರೆ ಎಂದು ಆರೋಪಿಸಿದ್ದಾರೆ.
Advertisement