ಪಂಜಾಬ್: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಐವರು ಕಾರ್ಮಿಕರು ಸಾವು, 27 ಮಂದಿ ಗಾಯ

ಶ್ರೀ ಮುಕ್ತ್ಸರ್ ಸಾಹಿಬ್ ಜಿಲ್ಲೆಯ ಸಿಂಘಾವಲಿ-ಕೋಟ್ಲಿ ರಸ್ತೆಯಲ್ಲಿರುವ ಎರಡು ಅಂತಸ್ತಿನ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದೆ.
Police personnel and others stand at a firecracker manufacturing and packaging unit
ಪಂಜಾಬ್‌ನ ಶ್ರೀ ಮುಕ್ತಸರ್ ಸಾಹಿಬ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ ಐದು ವಲಸೆ ಕಾರ್ಮಿಕರು ಮೃತಪಟ್ಟು , 27 ಮಂದಿಗೆ ಗಾಯವಾಗಿದ್ದು, ಪೊಲೀಸ್ ಸಿಬ್ಬಂದಿ ಮತ್ತು ಇತರರು ಪಟಾಕಿ ತಯಾರಿಕೆ ಮತ್ತು ಪ್ಯಾಕೇಜಿಂಗ್ ಘಟಕದಲ್ಲಿ ನಿಂತಿರುವುದು
Updated on

ಚಂಡೀಗಢ: ಪಂಜಾಬ್‌ನ ಮುಕ್ತಸರ್ ಜಿಲ್ಲೆಯ ಫತುಹಿವಾಲಾ ಗ್ರಾಮದ ಪಟಾಕಿ ಉತ್ಪಾದನಾ ಘಟಕದಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದ ಸ್ಫೋಟದಲ್ಲಿ ಐವರು ಮೃತಪಟ್ಟು, 27 ಜನರು ಗಾಯಗೊಂಡಿದ್ದಾರೆ.

ಮೂಲಗಳ ಪ್ರಕಾರ, ಇಂದು ನಸುಕಿನ ಜಾವ ಸುಮಾರು 1 ಗಂಟೆ ಸುಮಾರಿಗೆ ಸ್ಫೋಟ ಸಂಭವಿಸಿದೆ. ಆ ಸಮಯದಲ್ಲಿ ಸುಮಾರು 40 ಕಾರ್ಮಿಕರು, ಅವರಲ್ಲಿ ಹೆಚ್ಚಿನವರು ವಲಸೆ ಕಾರ್ಮಿಕರು, ಘಟಕದಲ್ಲಿದ್ದರು.

ಸ್ಫೋಟದಿಂದಾಗಿ ಕಾರ್ಖಾನೆಯ ರಚನೆ ಸಂಪೂರ್ಣವಾಗಿ ಕುಸಿದುಬಿತ್ತು. ಆ ಸಮಯದಲ್ಲಿ ಕಾರ್ಮಿಕರು ಪಟಾಕಿಗಳ ಉತ್ಪಾದನೆ ಮತ್ತು ಪ್ಯಾಕೇಜಿಂಗ್‌ನಲ್ಲಿ ತೊಡಗಿದ್ದರು.

ರಾತ್ರಿ ಪಾಳಿ ಮುಗಿಸಿದ ನಂತರ ಹೆಚ್ಚಿನವರು ವಿಶ್ರಾಂತಿ ಪಡೆಯುತ್ತಿದ್ದಾಗ ಹಠಾತ್ ಜೋರಾದ ಸ್ಫೋಟ ಸಂಭವಿಸಿ, ಹಲವರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡರು ಎಂದು ಒಬ್ಬ ಕಾರ್ಮಿಕ ಹೇಳಿದರು.

ಈವರೆಗೆ ಅವಶೇಷಗಳಿಂದ ನಾಲ್ಕು ಶವಗಳನ್ನು ಹೊರತೆಗೆದಿದ್ದು, 27 ಗಾಯಾಳುಗಳನ್ನು ಚಿಕಿತ್ಸೆಗಾಗಿ ಬಟಿಂಡಾದ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾರ್ಖಾನೆ ಪರವಾನಗಿ ಪಡೆದಿದ್ದು, ವಸತಿ ಪ್ರದೇಶಗಳಿಂದ ದೂರದಲ್ಲಿರುವ ಕೃಷಿ ಹೊಲಗಳಲ್ಲಿದೆ ಎಂದು ಅವರು ಹೇಳಿದರು. ಪ್ರಕರಣವನ್ನು ಕೂಲಂಕಷವಾಗಿ ತನಿಖೆ ಮಾಡಲಾಗುತ್ತದೆ ಎಂದರು.

ಸ್ಫೋಟ ನಂತರದ ಅವಶೇಷಗಳು
ಸ್ಫೋಟ ನಂತರದ ಅವಶೇಷಗಳು

ಅನಿರ್ದಿಷ್ಟ ಸ್ಫೋಟದಿಂದಾಗಿ ಕಟ್ಟಡ ಕುಸಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ನಂತರ ತುರ್ತು ಸೇವೆಗಳು ಮತ್ತು ರಕ್ಷಣಾ ತಂಡಗಳು ಗಂಟೆಗಳ ಕಾಲ ಸ್ಥಳದಲ್ಲಿಯೇ ಇದ್ದು, ಅವಶೇಷಗಳನ್ನು ತೆರವುಗೊಳಿಸುವುದನ್ನು ಮತ್ತು ಇನ್ನೂ ಸಿಕ್ಕಿಹಾಕಿಕೊಂಡಿರುವ ವ್ಯಕ್ತಿಗಳಿಗಾಗಿ ಹುಡುಕಾಟ ನಡೆಸುವುದನ್ನು ಮುಂದುವರೆಸಿದವು.

ಮುಕ್ತ್ಸರ್‌ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಖಿಲ್ ಚೌಧರಿ, ಕಾರ್ಖಾನೆಯ ಪಟಾಕಿ ಉತ್ಪಾದನಾ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆ ಎಂದು ಆರಂಭಿಕ ಮಾಹಿತಿ ಹೇಳುತ್ತದೆ. ಸ್ಫೋಟದಿಂದಾಗಿ, ಕಟ್ಟಡ ಕುಸಿದಿದೆ. ಪ್ರಾಥಮಿಕವಾಗಿ, ಬೆಂಕಿಗಿಂತ ರಚನಾತ್ಮಕ ಹಾನಿಯಿಂದ ಸಾವುಗಳು ಸಂಭವಿಸಿವೆ ಎಂದು ತೋರುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com