
ನವದೆಹಲಿ: ಆಪರೇಷನ್ ಸಿಂಧೂರ್ ವೇಳೆ ಪಾಕಿಸ್ತಾನ ಎಷ್ಟು ರಫೆಲ್ ವಿಮಾನಗಳನ್ನು ಹೊಡೆದುರುಳಿಸಿದೆ ಎಂಬ ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ವಿರುದ್ಧ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರಾಷ್ಟ್ರ ರಾಜಧಾನಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಬಿತ್ ಪಾತ್ರ, ಕಾಂಗ್ರೆಸ್ ನವರು ಪಾಕಿಸ್ತಾನಕ್ಕೆ ಬಬ್ಬರ್, ಹಿಂದೂಸ್ತಾನಕ್ಕೆ ಗಬ್ಬರ್ ಎಂದು ಬಣ್ಣಿಸಿದರು.
ಎಷ್ಟು ವಾಯುನೆಲೆಗಳು ನಾಶವಾದವು ಅಥವಾ ಎಷ್ಟು ಉಗ್ರರನ್ನು ಹತ್ಯೆಗೈಯಲಾಯಿತು ಎಂಬುದನ್ನು ರಾಹುಲ್ ಗಾಂಧಿ, ರೇವಂತ್ ರೆಡ್ಡಿ ಮತ್ತು ಜೈರಾಮ್ ರಮೇಶ್ ಪಾಕಿಸ್ತಾನವನ್ನು ಯಾಕೆ ಕೇಳಲಿಲ್ಲ ಎಂದು ಪ್ರಶ್ನಿಸಿದರು.
ಪ್ರಸ್ತುತ ಕಾಂಗ್ರೆಸ್ ನಲ್ಲಿ ಎರಡು ಬಣಗಳಿಗೆ ಅವುಗಳಲ್ಲಿ ಒಂದು ಪಾಕಿಸ್ತಾನಕ್ಕೆ ಬೆಂಬಲಿಸುತ್ತಿದ್ದರೆ ಮತ್ತೊಂದು ಧ್ವನಿ ಎತ್ತಲು ಬಯಸುತ್ತದೆ ಆದರೆ ರಾಹುಲ್ ಗಾಂಧಿ ಕಾರಣದಿಂದ ಅದನ್ನು ಮಾಡುತ್ತಿಲ್ಲ. ಕಾಂಗ್ರೆಸ್ ನ ಜೈ ಹಿಂದ್ ಯಾತ್ರೆ ಪಾಕಿಸ್ತಾನದ ಹಿಂದ್ ಯಾತ್ರೆಯಂತೆ ಕಾಣುತ್ತಿದೆ. ಕೂಡಲೇ ಈ ಯಾತ್ರೆಯನ್ನು ನಿಲ್ಲಿಸಿ, ಪಾಕಿಸ್ತಾನದೊಂದಿಗೆ ಜಂಟಿ ಸುದ್ದಿಗೋಷ್ಠಿ ಮಾಡಿ ಎಂದು ಸಂಬಿತ್ ಪಾತ್ರ ಹೇಳಿದರು.
ಸರ್ವ ಪಕ್ಷ ನಿಯೋಗದ ಕುರಿತು ಜೈರಾಂ ರಮೇಶ್ ಹೇಳಿಕೆ ವಿರುದ್ಧ ಹರಿಹಾಯ್ದ ಸಂಬಿತ್ ಪಾತ್ರ, ಸರ್ವ ಪಕ್ಷದ ಸಂಸದರೊಂದಿಗೆ ಉಗ್ರರನ್ನು ಹೋಲಿಸುತ್ತಿದ್ದಾರೆ. ಸಂಸದರು ಟೂರ್ ಗೆ ಹೋಗಿಲ್ಲ. ಇಡೀ ವಿಶ್ವದ ಎದುರು ಪ್ರಬಲವಾಗಿ ಭಾರತವನ್ನು ಪ್ರತಿನಿಧಿಸಲು ಅವರು ತೆರಳಿದ್ದಾರೆ. ಜೈರಾಂ ರಮೇಶ್ ಗಾಂಧಿ ಕುಟುಂಬದ ಬಲಗೈ ಭಂಟನಾಗಿದ್ದಾರೆ ಎಂದು ಆರೋಪಿಸಿದರು.
Advertisement