

ಅರಾರಿ: ಬಿಹಾರ ವಿಧಾನಸಭೆ ಚುನಾವಣೆಯ ಪ್ರಚಾರದ ಸಮಯದಲ್ಲಿ ಗುರುವಾರ ಅರಾರಿಯಾದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಮದುವೆಯ ಪ್ಲಾನ್ ಬಹಿರಂಗಪಡಿಸಿದ್ದಾರೆ.
ರಾಹುಲ್ ಗಾಂಧಿ ಮತ್ತು ಬಿಹಾರ ಹುಡುಗನ ನಡುವೆ ನಡೆದ ಚುಟುಕು ಸಂಭಾಷಣೆಯಲ್ಲಿ ರಾಹುಲ್ ಗಾಂಧಿ ತಮ್ಮ ಮದುವೆ ಬಗ್ಗೆ ಪ್ರತಿಕ್ರಿಯಿಸಿದ್ದು, ಅದರ ವಿಡಿಯೋ ವೈರಲ್ ಆಗಿದೆ.
ವೈರಲ್ ಆಗಿರುವ ಈ ಸಂವಾದದ ವಿಡಿಯೋದಲ್ಲಿ, ನಗುತ್ತಿರುವ ಹುಡುಗ, ರಾಹುಲ್ ಗಾಂಧಿಯವರ ಬಳಿಗೆ ಬರುತ್ತಿರುವುದನ್ನು ತೋರಿಸಲಾಗಿದೆ. ಈ ವೇಳೆ ಹುಡುಗ, ರಾಹುಲ್ ಗಾಂಧಿಗೆ ನಿಮ್ಮ ಮದುವೆ ಯಾವಗ ಎಂದು ಪ್ರಶ್ನಿಸಿದ್ದಾರೆ.
ವಿಡಿಯೋ ಕ್ಲಿಪ್ ಸ್ಪಷ್ಟವಾಗಿಲ್ಲದಿದ್ದರೂ, ರಾಹುಲ್ ಗಾಂಧಿಯವರು, ಹುಡುಗನ ಕೈ ಕುಲುಕುತ್ತಾ, ಸಂಭಾಷಣೆಯನ್ನು ಹಂಚಿಕೊಳ್ಳುತ್ತಾ ಮತ್ತು ಜನಸಮೂಹದೊಂದಿಗೆ ಮುಂದೆ ಸಾಗುವ ಮೊದಲು ಹುಡುಗನನ್ನು ಪ್ರೀತಿಯಿಂದ ತಟ್ಟುತ್ತಿರುವುದು ಕಂಡುಬಂದಿದೆ.
ನಂತರ ಪಿಟಿಐ-ವಿಡಿಯೋ ಜೊತೆ ಮಾತನಾಡಿದ ಹುಡುಗ, "ನಾನು ರಾಹುಲ್ ಗಾಂಧಿ ಅವರಿಗೆ ಯಾವಾಗ ಮದುವೆಯಾಗುತ್ತೀರಿ ಎಂದು ಕೇಳಿದೆ, ಅವರು ತಮ್ಮ ಕೆಲಸ ಮುಗಿದ ನಂತರ ಮದುವೆಯಾಗುವುದಾಗಿ ಉತ್ತರಿಸಿದರು" ಎಂದು ಹೇಳಿದ್ದಾರೆ.
Advertisement