

ಪಾಟ್ನಾ: ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಬಿಹಾರ ವಿಧಾನಸಭೆಯ ಮೊದಲ ಹಂತದ ಚುನಾವಣೆ ಪ್ರಗತಿಯಲ್ಲಿದ್ದು, ಕೇಂದ್ರ ಚುನಾವಣಾ ಹಂಚಿಕೊಂಡ ಮಾಹಿತಿ ಪ್ರಕಾರ ಮಧ್ಯಾಹ್ನ 5 ಗಂಟೆಯವರೆಗೂ ಶೇ.60. 13 ರಷ್ಟು ಮತದಾನವಾಗಿದೆ.
18 ಜಿಲ್ಲೆಗಳ ಪೈಕಿ ಬೆಗುಸಾರೈನಲ್ಲಿ ದಾಖಲೆಯ ಶೇ. 67.32 ರಷ್ಟು ಮತದಾನವಾಗಿದೆ. ನಂತರ ಗೋಪಾಲ್ ಗಂಜ್ ನಲ್ಲಿ ಶೇ.64.96 ರಷ್ಟು, ಬಕ್ಸರ್ ನಲ್ಲಿ ಶೇ. 55.10 ರಷ್ಟು ಮತದಾನವಾಗಿರುವ ಬಗ್ಗೆ ವರದಿಯಾಗಿದೆ.
ಎಲ್ಲಾ ಜಿಲ್ಲೆಗಳಿಗಿಂತ ಪಾಟ್ನಾದಲ್ಲಿ ಶೇ.48.69 ರಷ್ಟು ಅತ್ಯಂತ ಕಡಿಮೆ ಮತದಾನವಾಗಿದೆ. ಲಖಿಸಾರೈ ಜಿಲ್ಲೆಯಲ್ಲಿ ಶೇ. 57.39, ಮದೇಪುರದಲ್ಲಿ ಶೇ.55.96 ರಷ್ಟು ಮತದಾನವಾಗಿದೆ.
ಸಂಜೆ 5 ಗಂಟೆಯವರೆಗೂ ದರ್ಬಾಂಗ್ ನಲ್ಲಿ ಶೇ. 58.38, ಪಾಟ್ನಾದಲ್ಲಿ ಶೇ. 55.02, ಶೈಕ್ ಪುರದಲ್ಲಿ ಶೇ.52.36, ವೈಶಾಲಿಯಲ್ಲಿ ಶೇ. 59.45 ರಷ್ಟು ಮತದಾನವಾಗಿದೆ.
ಮೊದಲ ಹಂತದಲ್ಲಿ ಆರ್ ಜೆಡಿಯ ತೇಜಸ್ವಿ ಪ್ರಸಾದ್ ಯಾದವ್, ಬಿಜೆಪಿ ನಾಯಕರಾದ ಸಾಮ್ರಾಟ್ ಚೌದರಿ, ಮಂಗಲ್ ಪಾಂಡೆ, ಜೆಡಿಯುನ ಶ್ರವಣ್ ಕುಮಾರ್, ವಿಜಯ್ ಕುಮಾರ್ ಚೌದರಿ, ತೇಜ್ ಪ್ರತಾಪ್ ಯಾದವ್ ಸೇರಿದಂತೆ ಹಲವು ನಾಯಕರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.
Advertisement