

ತಿರುವನಂತಪುರಂ: ಸಂಶೋಧನಾ ವಿದ್ಯಾರ್ಥಿಯ ವಿರುದ್ಧ ಜಾತಿ ನಿಂದನೆ ಹೇಳಿಕೆ ನೀಡಿದ ಆರೋಪದ ಮೇಲೆ ಕೇರಳ ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗದ ಮುಖ್ಯಸ್ಥರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಕಾರ್ಯವಟ್ಟಂ ಕ್ಯಾಂಪಸ್‌ನ ಓರಿಯೆಂಟಲ್ ಸ್ಟಡೀಸ್ ಫ್ಯಾಕಲ್ಟಿಯ ವಿಭಾಗದ ಮುಖ್ಯಸ್ಥೆ ಮತ್ತು ಡೀನ್ ಆಗಿರುವ ಸಿ ಎನ್ ವಿಜಯಕುಮಾರಿ ಅವರ ವಿರುದ್ಧ ಶ್ರೀಕಾರ್ಯಂ ಪೊಲೀಸರು ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಎಂಫಿಲ್ ಗೆ ಸೇರಿದಾಗಿನಿಂದ ಪ್ರಾಧ್ಯಾಪಕರು ತಮ್ಮ ವಿರುದ್ಧ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ವಿಪಿನ್ ವಿಜಯನ್ ಅವರು ನೀಡಿದ ದೂರಿನ ಆಧಾರದ ಮೇಲೆ ಶನಿವಾರ ಎಫ್‌ಐಆರ್ ದಾಖಲಿಸಲಾಗಿದೆ.
ತಮ್ಮ ಜಾತಿ ತಿಳಿದ ನಂತರ ಪ್ರಾಧ್ಯಾಪಕರು ತನ್ನ ಪ್ರಬಂಧಕ್ಕೆ ಸಹಿ ಹಾಕಲು ನಿರಾಕರಿಸಿದ್ದರು. ಪಿಎಚ್‌ಡಿ ಪೂರ್ಣಗೊಳಿಸಲು ಸಹಿ ಅಗತ್ಯವಿದ್ದ ಕಾರಣ, ವಿಪಿನ್ ಅವರನ್ನು ಮತ್ತೆ ಸಂಪರ್ಕಿಸಿದಾಗ, ಅವರು ಜಾತಿ ನಿಂದನೆ ಮಾಡಿದ್ದಾರೆ ಎಂದು ದೂರಿನಲ್ಲಿ ಅವರು ಉಲ್ಲೇಖಿಸಿದ್ದಾರೆ. 2015 ರಲ್ಲಿ ವಿಜಯಕುಮಾರಿ ಅವರು ಎಂಫಿಲ್ ಗೆ ಸೇರಿದಾಗಿನಿಂದ ಅವರು ಜಾತಿ ಅವಮಾನವನ್ನು ಎದುರಿಸುತ್ತಿರುವುದಾಗಿ ಅವರು ಹೇಳಿದ್ದಾರೆ.
ಈ ಹಿಂದೆ ಆರೋಪವನ್ನು ನಿರಾಕರಿಸಿದ್ದ ವಿಜಯಲಕ್ಷ್ಮಿ, ವಿಪಿನ್ ಅವರಿಗೆ ಸಂಸ್ಕೃತದಲ್ಲಿ ಪ್ರಾವೀಣ್ಯತೆ ಇಲ್ಲದ ಕಾರಣ ಅವರ ಪ್ರಬಂಧಕ್ಕೆ ಸಹಿ ಹಾಕಲು ನಿರಾಕರಿಸಿದ್ದು, ಅವರ ಪ್ರಬಂಧ ತಪ್ಪುಗಳಿಂದ ಕೂಡಿರುವುದಾಗಿ ಹೇಳಿದ್ದರು. ಕಾರ್ಯವಟ್ಟಂ ಕ್ಯಾಂಪಸ್‌ನ SFI ನಾಯಕರಾಗಿರುವ ವಿಪಿನ್, ಆಧ್ಯಾತ್ಮಿಕ ನಾಯಕ ಚಟ್ಟಂಬಿ ಸ್ವಾಮಿಕಲ್ ಅವರ ಕುರಿತು ತಮ್ಮ ಪ್ರಬಂಧವನ್ನು ಬರೆದಿದ್ದಾರೆ.
ಪರೀಕ್ಷಾ ಮಂಡಳಿಯ ಅಧ್ಯಕ್ಷರು ಅಭ್ಯರ್ಥಿಗೆ ಪಿಎಚ್‌ಡಿ ನೀಡಲು ಶಿಫಾರಸು ಮಾಡಿದಿದ್ದರು. ಆದರೆ ವಿಜಯಕುಮಾರಿ ಆಕ್ಷೇಪಣೆಗಳನ್ನು ಎತ್ತುವ ಮೂಲಕ ಉಪ ಕುಲಪತಿ ಡಾ. ಮೋಹನನ್ ಕುನ್ನುಮಲ್ ಅವರಿಗೆ ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ.
Advertisement