

ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಸೇರಿದಂತೆ ಪ್ರಮುಖ ದೇವಾಲಯಗಳನ್ನು ನಿರ್ವಹಿಸುವ ತಿರುವಾಂಕೂರು ದೇವಸ್ವಂ ಮಂಡಳಿ(ಟಿಡಿಬಿ)ಯ ಹೊಸ ಅಧ್ಯಕ್ಷರನ್ನಾಗಿ ಮಾಜಿ ಮುಖ್ಯ ಕಾರ್ಯದರ್ಶಿ ಕೆ. ಜಯಕುಮಾರ್ ಅವರನ್ನು ಕೇರಳ ಸರ್ಕಾರ ಸೋಮವಾರ ನೇಮಕ ಮಾಡಿದೆ.
ಇಂದು ಹೊರಡಿಸಲಾದ ಗೆಜೆಟ್ ಅಧಿಸೂಚನೆಯ ಪ್ರಕಾರ, ನಿರ್ಗಮಿತ ತಿರುವಾಂಕೂರು ದೇವಸ್ವಂ ಮಂಡಳಿಯ ಅಧ್ಯಕ್ಷ ಪಿ.ಎಸ್. ಪ್ರಶಾಂತ್ ಅವರ ಅಧಿಕಾರಾವಧಿ ನವೆಂಬರ್ 13 ರಂದು ಮುಕ್ತಾಯಗೊಳ್ಳಲಿದೆ.
"ನಿವೃತ್ತ ಐಎಎಸ್ ಅಧಿಕಾರಿ ಕೆ. ಜಯಕುಮಾರ್ ಅವರನ್ನು ನವೆಂಬರ್ 14 ರಿಂದ ಜಾರಿಗೆ ಬರುವಂತೆ ಟಿಡಿಬಿ ಅಧ್ಯಕ್ಷರನ್ನಾಗಿ ಸಚಿವರ ಮಂಡಳಿ ನಾಮನಿರ್ದೇಶನ ಮಾಡಿದೆ" ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಜಯಕುಮಾರ್ ಅವರು ನವೆಂಬರ್ 14, 2025 ರಿಂದ ಎರಡು ವರ್ಷಗಳ ಅವಧಿಗೆ ಟಿಡಿಬಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಲಿದ್ದಾರೆ.
ಜಯಕುಮಾರ್ ಅವರು ಸರ್ಕಾರಿ ಸೇವೆಯಲ್ಲಿದ್ದಾಗ ಶಬರಿಮಲೆಯಲ್ಲಿ ದೇವಸ್ವಂ ವಿಶೇಷ ಆಯುಕ್ತರಾಗಿ ಒಂದು ವರ್ಷ ಸೇವೆ ಸಲ್ಲಿಸಿದ್ದರು.
ಶಬರಿಮಲೆ ದೇವಸ್ಥಾನದಲ್ಲಿ ಚಿನ್ನ ಕಳ್ಳತನದ ಬಗ್ಗೆ ರಾಜಕೀಯ ವಿವಾದದ ನಡುವೆ ಕೇರಳ ಸರ್ಕಾರ ಮಾಜಿ ಮುಖ್ಯ ಕಾರ್ಯದರ್ಶಿಯನ್ನು ದೇವಾಲಯದ ಉನ್ನತ ಹುದ್ದೆಗೆ ನೇಮಿಸಿದೆ.
Advertisement