

ಬೆಂಗಳೂರು: ದೆಹಲಿಯಲ್ಲಿ ನಡೆದ ಸ್ಫೋಟವನ್ನು ಕೇಂದ್ರ 'ಸರ್ಕಾರದ ವೈಫಲ್ಯ' ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದು, ಭಯೋತ್ಪಾದಕ ಕೃತ್ಯದ ಅಪರಾಧಿಗಳಿಗೆ ಕಠಿಣ ಶಿಕ್ಷೆಯನ್ನು ಕೊಡಬೇಕು. ಆಗ ಮಾತ್ರ ಉಗ್ರತ್ವವನ್ನು ತಡೆಗಟ್ಟಲು ಸಾಧ್ಯ ಎಂದು ಒತ್ತಾಯಿಸಿದರು.
ದೇಶದ ಭದ್ರತೆಗೆ ಸಂಬಂಧಿಸಿದಂತೆ NIA, RAWದಂತ ಉನ್ನತ ಸಂಸ್ಥೆಗಳು ಕಾರ್ಯನಿರ್ವಹಿಸುವ ರಾಷ್ಟ್ರ ರಾಜಧಾನಿಯಲ್ಲಿ ಇಂತಹ ಘಟನೆ ನಡೆದಿರುವುದು ದುರದೃಷ್ಟಕರ. ದೆಹಲಿಯಲ್ಲಿ ಅಂತಹ ಎಲ್ಲಾ ಸಂಸ್ಥೆಗಳು ಇದ್ದರೂ, ಸರ್ಕಾರ ವಿಫಲವಾಗಿದೆ ಎಂದು ಖರ್ಗೆ ಆರೋಪಿಸಿದ್ದು, ತಮ್ಮ ಪಕ್ಷವು ಸಂಪೂರ್ಣ ವರದಿಗಾಗಿ ಕಾಯುತ್ತದೆ ಎಂದು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಖರ್ಗೆ, ಸ್ಫೋಟದ ಬಗ್ಗೆ ಕಾಂಗ್ರೆಸ್ ಪಕ್ಷವು ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸುತ್ತದೆ. ಸ್ಫೋಟದ ಹಿಂದೆ ಇರುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು, ಇದರಿಂದ ಇತರರು ಹಾಗೆ ಮಾಡಲು ಹೆದರಬೇಕು ಎಂದು ಅವರು ಹೇಳಿದರು. ಮುಂದಿನ ತಿಂಗಳು ಚಳಿಗಾಲದ ಅಧಿವೇಶನದಲ್ಲಿ ತಮ್ಮ ಪಕ್ಷವು ಸಂಸತ್ತಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಿದೆ ಎಂದು ಖರ್ಗೆ ಹೇಳಿದರು.
ಈಗ ಕೇಂದ್ರ ಸರ್ಕಾರ ಪ್ರಕರಣವನ್ನು ರಾಷ್ಟ್ರೀಯ ಗುಪ್ತಚರ ಸಂಸ್ಥೆಗೆ ಹಸ್ತಾಂತರಿಸಿದ್ದಾರೆ. ತನಿಖಾ ವರದಿ ಹೊರಬರಲಿ. ಡಿಸೆಂಬರ್ 1ರಿಂದ ಸಂಸತ್ತಿನ ಅಧಿವೇಶನ ಪ್ರಾರಂಭವಾಗಲಿದೆ. ಅದರ ನಂತರ ನೋಡೋಣ" ಎಂದು ಖರ್ಗೆ ಹೇಳಿದರು.
ಬಿಹಾರ ಚುನಾವಣೆಯ ಬಗ್ಗೆ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷರು, ಮತದಾನೋತ್ತರ ಸಮೀಕ್ಷೆಗಳು ಬಿಹಾರದಲ್ಲಿ ಎನ್‌ಡಿಎ ಮುನ್ನಡೆಯಲ್ಲಿದೆ. ಮಹಾಘಟಬಂಧನ್‌ಗೆ ಫಲಿತಾಂಶವು ಪರವಾಗಿಲ್ಲ. ಆದರೆ ಮತದಾನೋತ್ತರ ಸಮೀಕ್ಷೆಗಳು ಹರಿಯಾಣದಲ್ಲಿ ಕಾಂಗ್ರೆಸ್ ಮುನ್ನಡೆಯಲ್ಲಿದೆ ಎಂದು ಹೇಳಿದ್ದವು, ಆದರೆ ಫಲಿತಾಂಶಗಳು ಇದಕ್ಕೆ ವಿರುದ್ಧವಾಗಿ ಬಂದಿತ್ತು. ಹೀಗಾಗಿ ಫಲಿತಾಂಶಗಳು ಹೊರಬರುವ ನವೆಂಬರ್ 14ರವರೆಗೆ ಕಾಯೋಣ ಎಂದು ಅವರು ಹೇಳಿದರು.
Advertisement