

ನವದೆಹಲಿ: ದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಕನಿಷ್ಠ 12 ಜನರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ ಎಂದು ಹಿರಿಯ ಗುಪ್ತಚರ ಬ್ಯೂರೋ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಶ್ವಸಂಸ್ಥೆ ಗುರುತಿಸಿರುವ ಜಾಗತಿಕ ಮಟ್ಟದ ಭಯೋತ್ಪಾದಕ ಮೌಲಾನಾ ಮಸೂದ್ ಅಜರ್ ನಿರ್ದೇಶನದ ಮೇರೆಗೆ ಜೈಶ್-ಎ-ಮೊಹಮ್ಮದ್ (JeM) ಈ ಪ್ರಬಲ ಸ್ಫೋಟವನ್ನು ನಡೆಸಿದೆ ಎಂದು ಆರೋಪಿಸಲಾಗಿದೆ.
ಪಾಕಿಸ್ತಾನ ಮೂಲದ ಜೈ ಎ ಮೊಹಮ್ಮದ್ ಸಂಘಟನೆ ದೆಹಲಿಯಲ್ಲಿ ಕಳೆದ ಏಪ್ರಿಲ್ ತಿಂಗಳ ಪುಲ್ವಾಮಾ ದಾಳಿ ಶೈಲಿಯಲ್ಲಿ ವಾಹನಗಳ ಮೂಲಕ ಆತ್ಮಹತ್ಯಾ ದಾಳಿಗಳನ್ನು ಯೋಜಿಸಲು ತೀವ್ರಗಾಮಿ ವೈದ್ಯರ ಜಾಲವನ್ನು ಬೆಳೆಸಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಮೊನ್ನೆಯ ದೆಹಲಿ ಸ್ಫೋಟವು 2006 ರ ಮುಂಬೈ ರೈಲು ಬಾಂಬ್ ದಾಳಿಗೆ ಹೋಲುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, 209 ಜನರ ಸಾವಿಗೆ ಕಾರಣವಾದ ಸಂಘಟಿತ ದಾಳಿಗೆ ಅಂದು ಅಲ್ಲಿ ಸ್ಥಳೀಯವಾಗಿ ತೀವ್ರಗಾಮಿ ವ್ಯಕ್ತಿಗಳನ್ನು ಬಳಸಲಾಗಿತ್ತು.
ದೆಹಲಿ ಸ್ಫೋಟ, ವೈದ್ಯರು ಭಾಗಿ ಶಂಕೆ
ಮೊನ್ನೆ ದೆಹಲಿಯ ಕೆಂಪು ಕೋಟೆ ಬಳಿ ದೊಡ್ಡ ಮಟ್ಟದಲ್ಲಿ ದಾಳಿ ಮಾಡಲು ಉದ್ದೇಶಿಸಲಾಗಿದ್ದು, ಬಿಳಿ ಹುಂಡೈ ಐ 20 ಕಾರಿನಲ್ಲಿ ಅಳವಡಿಸಲಾದ ಐಇಡಿಯಿಂದ ಸ್ಫೋಟ ಸಂಭವಿಸಿದೆ. ಡಾ. ಉಮರ್ ಮೊಹಮ್ಮದ್ ನಬಿ ಎಂದು ಶಂಕಿಸಲಾದ ಚಾಲಕ, ಕಾಶ್ಮೀರದಲ್ಲಿ ಜೆಇಎಂ ಕಾರ್ಯಕರ್ತರೊಂದಿಗೆ ಸಂಪರ್ಕ ಹೊಂದಿದ್ದಾನೆಂದು ಹೇಳಲಾದ ವೈದ್ಯರನ್ನು ಒಳಗೊಂಡ "ವೈಟ್-ಕಾಲರ್" ಭಯೋತ್ಪಾದಕ ಮಾಡ್ಯೂಲ್‌ನ ಭಾಗವಾಗಿದ್ದ.
ಶ್ರೀನಗರದ ಹೊರವಲಯದಲ್ಲಿ ಕಾಣಿಸಿಕೊಂಡ ಜೆಇಎಂ ಪೋಸ್ಟರ್‌ಗಳ ತನಿಖೆಯ ಸಮಯದಲ್ಲಿ ಈ ಜಾಲ ಪತ್ತೆಯಾಗಿದೆ. ತಾಂತ್ರಿಕ ಕಣ್ಗಾವಲಿನ ಮೂಲಕ, ಜಮ್ಮು-ಕಾಶ್ಮೀರ, ಉತ್ತರ ಪ್ರದೇಶ ಮತ್ತು ಹರಿಯಾಣದ ಪೊಲೀಸ್ ತಂಡಗಳು ಕೇಂದ್ರ ಸಂಸ್ಥೆಗಳ ನೆರವಿನೊಂದಿಗೆ ಬಹು ರಾಜ್ಯ ದಾಳಿಗಳನ್ನು ನಡೆಸಿದವು.
ಮಹತ್ವದ ಸುಳಿವು ಪತ್ತೆ
ಫರಿದಾಬಾದ್‌ನ ಡಾ. ಮುಜಮ್ಮಿಲ್ ಅಹ್ಮದ್ ಗನೈ (35ವ) ಬಂಧನದೊಂದಿಗೆ ಒಂದು ಮಹತ್ವದ ಬೆಳವಣಿಗೆ ಕಂಡುಬಂದಿದೆ. ಪುಲ್ವಾಮಾ ಮೂಲದವನಾಗಿರುವ ಅಲ್ ಫಲಾಹ್ ಆಸ್ಪತ್ರೆಯ ಉದ್ಯೋಗಿಯೂ ಆಗಿರುವ ಗನೈ, ಎರಡು ಬಾಡಿಗೆ ಮನೆಗಳಿಂದ ವಶಪಡಿಸಿಕೊಂಡ 2,900 ಕೆಜಿ ಸ್ಫೋಟಕಗಳನ್ನು ಅಮೋನಿಯಂ ನೈಟ್ರೇಟ್ ಎಂದು ಶಂಕಿಸಲಾಗಿದ್ದು, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಹೊಂದಿದ್ದನು ಎಂದು ಹೇಳಲಾಗಿದೆ. ಆತನ ವಿಚಾರಣೆಯ ನಂತರ ಕುಲ್ಗಾಮ್‌ನ ಡಾ. ಅದೀಲ್ ಮಜೀದ್ ರಾಥರ್ ಮತ್ತು ಅಲ್ ಫಲಾಹ್ ವಿಶ್ವವಿದ್ಯಾಲಯದೊಂದಿಗೆ ಸಂಬಂಧ ಹೊಂದಿರುವ ಲಕ್ನೋ ಮೂಲದ ವೈದ್ಯಕೀಯ ವೃತ್ತಿಪರೆ ಡಾ. ಶಾಹೀನ್ ಸಯೀದ್ ನನ್ನು ಬಂಧಿಸಲಾಯಿತು.
ವಿದ್ಯಾವಂತರೇ ಟಾರ್ಗೆಟ್
ವಿದ್ಯಾವಂತ ವೃತ್ತಿಪರರನ್ನು ಭಯೋತ್ಪಾದಕ ಕೃತ್ಯಕ್ಕೆ ಸೇರಿಸಿಕೊಳ್ಳುವ ಗುರಿಯನ್ನು ಹೊಂದಿರುವ ಜೆಇಎಂನ ಮಹಿಳಾ ನೇಮಕಾತಿ ವಿಭಾಗವಾದ ಜಮಾತ್-ಉಲ್-ಮೊಮಿನಾತ್ ನ್ನು ಸ್ಥಾಪಿಸಲು ಸಯೀದ್ ಸಹಾಯ ಮಾಡುತ್ತಿದ್ದಳು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ವಿಚಾರಣೆಗಾಗಿ ಶ್ರೀನಗರಕ್ಕೆ ಕರೆದೊಯ್ಯುವ ಮೊದಲು ಆಕೆಯ ವಾಹನದಿಂದ ಒಂದು ಅಸಾಲ್ಟ್ ರೈಫಲ್ ನ್ನು ವಶಪಡಿಸಿಕೊಳ್ಳಲಾಯಿತು.
ಪುಲ್ವಾಮಾದವನಾದ ಮತ್ತು ಅಲ್ ಫಲಾಹ್ ವಿಶ್ವವಿದ್ಯಾಲಯದ ವೈದ್ಯಕೀಯ ಅಧ್ಯಾಪಕರೊಂದಿಗೆ ಸಂಬಂಧ ಹೊಂದಿರುವ ಡಾ. ಉಮರ್ ಮೊಹಮ್ಮದ್ ಐಇಡಿ ತುಂಬಿದ ಕಾರಿನ ಹಿಂದೆ ಇದ್ದರು ಎಂದು ಪೊಲೀಸರು ಶಂಕಿಸಿದ್ದಾರೆ. ಆತನ ಗುರುತನ್ನು ದೃಢೀಕರಿಸಲು ಡಿಎನ್‌ಎ ಪರೀಕ್ಷೆಗಳು ನಡೆಯುತ್ತಿವೆ.
ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಈಗ ತನಿಖೆಯನ್ನು ವಹಿಸಿಕೊಂಡಿದೆ. ದೆಹಲಿ ಪೊಲೀಸರ ವಿಶೇಷ ಘಟಕ ಮತ್ತು ಕೇಂದ್ರೀಯ ಸಂಸ್ಥೆಗಳು ಫರಿದಾಬಾದ್‌ನಿಂದ ಕೆಂಪು ಕೋಟೆಗೆ ವಾಹನದ 11 ಗಂಟೆಗಳ ಮಾರ್ಗವನ್ನು ಪತ್ತೆಹಚ್ಚಿವೆ, ಸಂಜೆ 6:52 ಕ್ಕೆ ಸ್ಫೋಟ ಸಂಭವಿಸುವ ಮೊದಲು ಸುಮಾರು ಮೂರು ಗಂಟೆಗಳ ಕಾಲ ಅದು ಅಲ್ಲಿಯೇ ನಿಂತಿತ್ತು.
ಉದ್ದೇಶಿತ ಗುರಿ ಕೇಂದ್ರ ದೆಹಲಿಯಲ್ಲಿ ಎಲ್ಲಿಯಾದರೂ ಇರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ, ಇದು ದೊಡ್ಡ ದಾಳಿಯ ಯೋಜನೆಯನ್ನು ಸೂಚಿಸುತ್ತದೆ.
Advertisement