

ಚಂಡಿಗಢ: ಪಂಜಾಬ್ ನಲ್ಲಿ ಗ್ರೆನೇಡ್ ದಾಳಿ ನಡೆಸಲು ಸಂಚು ಹಾಕಿದ್ದ ಪಾಕಿಸ್ತಾದ ಗುಪ್ತಚರ ಸಂಸ್ಥೆ (ISI)ನೊಂದಿಗೆ ಸಂಪರ್ಕದಲ್ಲಿದ್ದ ವಿದೇಶಿ ಮೂಲದ 10 ಹ್ಯಾಂಡ್ಲರ್ ಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಮಲೇಷ್ಯಾ ಮತ್ತು ಪಾಕ್ ಮೂಲದ ಹ್ಯಾಂಡ್ಲರ್ ಗಳೊಂದಿಗೆ ಸಂಪರ್ಕದಲ್ಲಿದ್ದರು. ಅಲ್ಲದೇ ದಾಳಿ ನಡೆಸಲು ಹ್ಯಾಂಡ್ ಗ್ರೆನೇಡ್ ಸಂಗ್ರಹ ಮತ್ತು ವಿತರಣೆಯಲ್ಲಿ ನಿರತರಾಗಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪಂಜಾಬ್ ಡಿಜಿಪಿ ಗೌರವ್ ಯಾದವ್, ಪಂಜಾಬ್ ನಲ್ಲಿ ಶಾಂತಿ ಮತ್ತು ಭದ್ರತೆ ಖಾತ್ರಿಗೆ ಮತ್ತು ಗಡಿಯಾಚನೆಗಿನ ಭಯೋತ್ಪಾದನಾ ಜಾಲಗಳನ್ನು ಪತ್ತೆ ಹಚ್ಚಿ ನಾಶಪಡಿಸಲು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.
ಸೋಮವಾರ ಸಂಜೆ ದೆಹಲಿಯ ಐತಿಹಾಸಿಕ ಕೆಂಪು ಕೋಟೆ ಬಳಿ ಸಂಭವಿಸಿದ ಕಾರು ಬಾಂಬ್ ಸ್ಪೋಟದಲ್ಲಿ 12 ಮಂದಿ ಮೃತಪಟ್ಟಿದ್ದರು. ಈ ಘಟನೆಯನ್ನು ಉಗ್ರರ ಕೃತ್ಯ ಎಂದು ಕರೆದಿರುವ ಕೇಂದ್ರ ಸರ್ಕಾರ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ. ಈ ನಡುವೆ ಪಂಜಾಬ್ ನಲ್ಲಿ ಪಾಕಿಸ್ತಾನದ ISI ಸಂಪರ್ಕದಲ್ಲಿದ್ದ 10 ಹ್ಯಾಂಡ್ಲರ್ ಗಳ ಬಂಧನ ನಡೆದಿದೆ.
Advertisement