

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶದ ಈಗಿನ ಟ್ರೆಂಡ್ ನೋಡಿದಾಗ ಪ್ರಶಾಂತ್ ಕಿಶೋರ್ ನೇತೃತ್ವದ ಜನ್ ಸುರಾಜ್ ಪಕ್ಷಕ್ಕೆ (JSP) ಹೊಸ ಮ್ಯಾಜಿಕ್ ಮಾಡುವಲ್ಲಿ ವಿಫಲವಾಗಿದೆ. ಜನರ ಮತಗಳನ್ನು ಗಳಿಸುವಲ್ಲಿ ವಿಫಲರಾಗಿದ್ದಾರೆ.
ಜೆಡಿಯು 25 ಸ್ಥಾನಗಳ ಗಡಿಯನ್ನು ಎಂದಿಗೂ ದಾಟುವುದಿಲ್ಲ - 25 ನ್ನು ದಾಟಿದರೆ ತಾವು ರಾಜೀನಾಮೆ ನೀಡುವುದಾಗಿ ಪ್ರಶಾಂತ್ ಕಿಶೋರ್ ಪ್ರಚಾರ ಸಂದರ್ಭದಲ್ಲಿ ಘೋಷಿಸಿದ್ದರು. ಅವರ ಹೇಳಿಕೆಗಳು ಅವರಿಗೇ ಮುಳುವಾದಂತೆ ತೋರುತ್ತಿದೆ.
ಜೆಡಿಯು ಬೆಂಬಲಿಗರನ್ನು ಹುರಿದುಂಬಿಸಿ ಚುನಾವಣೆಯ ಸಮಯದಲ್ಲಿ ಹೆಚ್ಚು ಆಕ್ರಮಣಕಾರಿಯಾಗಿ ಮತ ಚಲಾಯಿಸುವಂತೆ ಮತ್ತು ಸಾಮೂಹಿಕವಾಗಿ ಜೆಎಸ್‌ಪಿಯನ್ನು ತಿರಸ್ಕರಿಸುವಂತೆ ಮಾಡಿತು.
ಅನೇಕ ಪಕ್ಷಗಳನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿ ದೇಶಮಟ್ಟದಲ್ಲಿ ಗಮನ ಸೆಳೆದಿದ್ದ ಪ್ರಶಾಂತ್ ಕಿಶೋರ್, ಒಂದು ವರ್ಷ ಬಿಹಾರ ರಾಜ್ಯ ಪ್ರವಾಸ ಮಾಡಿದ್ದರು. ಆರಂಭದಲ್ಲಿ ಸಾರ್ವಜನಿಕ ಗಮನ ಸೆಳೆಯುವ ಘೋಷಣೆಗಳನ್ನು ಪ್ರಾರಂಭಿಸಿದರು. ಅವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂದು ಹಲವರು ನಿರೀಕ್ಷಿಸಿದ್ದರೂ, ಅವರು ಕ್ಷೇತ್ರದಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದಾಗ ವ್ಯಾಪಕ ಟೀಕೆಗೆ ಗುರಿಯಾದರು.
ಭರವಸೆ ಹುಟ್ಟಿಸಿದ್ದ ಜೆಎಸ್ ಪಿ
ಇಂದು ಮತ ಎಣಿಕೆ ಆರಂಭದಲ್ಲಿ, ಜೆಎಸ್‌ಪಿ ಕೆಲವು ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿರುವಂತೆ ಕಂಡುಬಂದಿತು. ಆದರೆ ಎಣಿಕೆ ಮುಂದಕ್ಕೆ ಸಾಗುತ್ತಿದ್ದಂತೆ, ಅಭ್ಯರ್ಥಿಗಳು ಹಿನ್ನಡೆ ಅನುಭವಿಸಲು ಪ್ರಾರಂಭಿಸಿದರು. ಜೆಡಿಯು ಪಕ್ಷ ಮುನ್ನಡೆ ಸಾಧಿಸುತ್ತಿದ್ದಂತೆ, ಜೆಡಿಯು ಬಗ್ಗೆ ಪ್ರಶಾಂತ್ ಕಿಶೋರ್ ಅವರ ಹೇಳಿಕೆಗಳು "ಸೂರ್ಯ ಉದಯಿಸಲು ಪ್ರಾರಂಭಿಸಿದ ಕೂಡಲೇ ಕತ್ತಲೆಯಂತೆ ಮಾಯವಾಯಿತು" ಎಂದು ಜೆಡಿಯು ನಾಯಕರೊಬ್ಬರು ಹೇಳಿದ್ದಾರೆ.
ಮಧ್ಯಾಹ್ನದವರೆಗೆ ಆರ್‌ಜೆಡಿ ಶೇ. 28–29 ಸ್ಟ್ರೈಕ್ ರೇಟ್ ಕಾಯ್ದುಕೊಂಡಿತು, ಆದರೆ ಎನ್‌ಡಿಎಯೊಳಗಿನ ಬಿಜೆಪಿ ಶೇ. 80 ಕ್ಕಿಂತ ಹೆಚ್ಚು ದಾಖಲಿಸಿ ಮುನ್ನಡೆ ಸಾಧಿಸಿತು.
Advertisement