ಬಿಹಾರ ಚುನಾವಣೆಯಲ್ಲಿ NDA ಗೆಲುವು ECI ಪ್ರಾಯೋಜಿತ 'ಹಗರಣ': ಸಾಮ್ನಾ ಸಂಪಾದಕೀಯ

ಮುಖ್ಯಮಂತ್ರಿ ನಿತೀಶ್ ಕುಮಾರ್ ಸ್ಮರಣಶಕ್ತಿ ಕಳೆದುಕೊಳ್ಳುತ್ತಿದ್ದು, ಅಂತಹ ಸಮಸ್ಯೆಗಳನ್ನು ಹೊಂದಿರುವ ನಾಯಕ ಬಿಹಾರವನ್ನು ಹೇಗೆ ಮುನ್ನಡೆಸಬಹುದು ಎಂದು ಶಿವಸೇನೆ(ಯುಬಿಟಿ) ಪ್ರಶ್ನಿಸಿದೆ.
In Saamna editorial, Shiv Sena (UBT) calls NDA win in Bihar elections a ‘scam’ facilitated by ECI
ಉದ್ಧವ್ ಠಾಕ್ರೆ
Updated on

ಮುಂಬೈ: ಬಿಹಾರ ವಿಧಾಸಭೆ ಚುನಾವಣೆಯ ಫಲಿತಾಂಶ ಚುನಾವಣಾ ಆಯೋಗವು ಮಾಡಿದ ಮಹಾ ವಂಚನೆ ಎಂದು ಶಿವಸೇನೆ(ಯುಬಿಟಿ) ಶನಿವಾರ ಟೀಕಿಸಿದ್ದು, ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಮತ ಕಳ್ಳತನದ ಮೂಲಕ ಗೆಲುವು ಸಾಧಿಸಿದೆ ಎಂದು ಆರೋಪಿಸಿದೆ.

ಚುನಾವಣೆಯಲ್ಲಿ ಆಡಳಿತಾರೂಢ ಎನ್‌ಡಿಎ ಅದ್ಭುತ ಗೆಲುವು ಸಾಧಿಸಿದ ಒಂದು ದಿನದ ನಂತರ, ಉದ್ಧವ್ ಠಾಕ್ರೆ ನೇತೃತ್ವದ ಪಕ್ಷವು, ಬಿಹಾರ ಮುಖ್ಯಮಂತ್ರಿ ಹುದ್ದೆಗಾಗಿ ಜೆಡಿಯು ಮೇಲೆ ಹಿಡಿತ ಸಾಧಿಸಲು ಬಿಜೆಪಿ ಹಿಂಜರಿಯುವುದಿಲ್ಲ ಎಂದು ಹೇಳಿದೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ಸ್ಮರಣಶಕ್ತಿ ಕಳೆದುಕೊಳ್ಳುತ್ತಿದ್ದು, ಅಂತಹ ಸಮಸ್ಯೆಗಳನ್ನು ಹೊಂದಿರುವ ನಾಯಕ ಬಿಹಾರವನ್ನು ಹೇಗೆ ಮುನ್ನಡೆಸಬಹುದು ಎಂದು ಶಿವಸೇನೆ(ಯುಬಿಟಿ) ಪ್ರಶ್ನಿಸಿದೆ.ಬಿಹಾರ

In Saamna editorial, Shiv Sena (UBT) calls NDA win in Bihar elections a ‘scam’ facilitated by ECI
ಸೋಲಲ್ಲೂ ಸಿದ್ದುಗೆ ಗೆಲುವು? ಬಿಹಾರ ಫಲಿತಾಂಶ ಬೆನ್ನಲ್ಲೇ ಸಿಎಂ ಕುರ್ಚಿ ಮತ್ತಷ್ಟು ಗಟ್ಟಿ; ನಾಯಕತ್ವ ಬದಲಾವಣೆ ಅನುಮಾನ!

ಪಕ್ಷದ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಶಿವಸೇನೆ(ಯುಬಿಟಿ), ಮಹಾರಾಷ್ಟ್ರದಂತೆಯೇ ಬಿಹಾರದಲ್ಲಿಯೂ ಬಿಜೆಪಿಯ ಗೆಲುವಿನ ಸೂತ್ರವನ್ನು ನಿರ್ಧರಿಸಲಾಗಿದೆ. ಅಲ್ಲಿ ವಿರೋಧ ಪಕ್ಷವಾದ ಮಹಾ ವಿಕಾಸ್ ಅಘಾಡಿ 50 ಸ್ಥಾನಗಳನ್ನು ಗೆಲ್ಲಲು ಅವಕಾಶ ನೀಡಿಲ್ಲ ಎಂದು ಹೇಳಿದೆ.

ಬಿಹಾರ ಚುನಾವಣೆಯ ಫಲಿತಾಂಶವು ಆಶ್ಚರ್ಯಕರವಲ್ಲ, ಚುನಾವಣಾ ಆಯೋಗ ಮತ್ತು ಬಿಜೆಪಿ ತಾವು ಬಯಸಿದ ಫಲಿತಾಂಶ ಪಡೆಯಲು ಒಟ್ಟಾಗಿ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದೆ.

"ಬಿಹಾರ ಚುನಾವಣೆ ಭಾರತೀಯ ಪ್ರಜಾಪ್ರಭುತ್ವದಲ್ಲಿ ನಡೆದ ಒಂದು ದೊಡ್ಡ ಹಗರಣ. ಇದಕ್ಕೆ ಚುನಾವಣಾ ಆಯೋಗ ಸಹಕಾರ ನೀಡಿದೆ" ಎಂದು ಸಂಪಾದಕೀಯ ಟೀಕಿಸಿದೆ.

"ಮತಗಳನ್ನು ಮತ್ತೆ ಕದಿಯಲಾಯಿತು. ಅದರ ಆಧಾರದ ಮೇಲೆ ಬಿಜೆಪಿ ಮತ್ತು (ಬಿಹಾರ ಮುಖ್ಯಮಂತ್ರಿ) ನಿತೀಶ್ ಕುಮಾರ್ ಚುನಾವಣೆಯಲ್ಲಿ ಗೆದ್ದರು" ಎಂದು ಉದ್ಧವ್ ನೇತೃತ್ವದ ಪಕ್ಷ ಆರೋಪಿಸಿದೆ.

ಚುನಾವಣಾ ಪ್ರಕ್ರಿಯೆಯ ದ್ವಾರಪಾಲಕನಾಗಿರುವ ಚುನಾವಣಾ ಆಯೋಗವೇ ಕಳ್ಳರಿಗೆ ಸಹಾಯ ಮಾಡಿದರೆ ಜನರು ಯಾರನ್ನು ನಂಬುತ್ತಾರೆ ಎಂದು ಶಿವಸೇನೆ ಪ್ರಶ್ನಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com