

ವೆಲ್ಲೂರು: ತಮಿಳುನಾಡಿನ ವೆಲ್ಲೂರಿನ ಮದರಸಾವೊಂದರಲ್ಲಿ ದೈಹಿಕ ದೌರ್ಜನ್ಯದ ನಡೆದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಕುರಾನ್ ಶಿಕ್ಷಕನೊಬ್ಬ ಹಲವಾರು ವಿದ್ಯಾರ್ಥಿಗಳನ್ನು ಥಳಿಸುತ್ತಿರುವ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗತೊಡಗಿವೆ.
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿರುವ ಈ ವೀಡಿಯೊದಲ್ಲಿ, ಶಿಕ್ಷಕ ತರಗತಿಯೊಳಗೆ ಯುವ ವಿದ್ಯಾರ್ಥಿಗಳನ್ನು ಪದೇ ಪದೇ ಹೊಡೆಯುತ್ತಿರುವುದನ್ನು ತೋರಿಸಲಾಗಿದೆ. ಶಿಕ್ಷಕರು ಹಲ್ಲೆ ಮುಂದುವರಿಸುತ್ತಿದ್ದಂತೆ ಮಕ್ಕಳು ಹಿಂದೆ ಸರಿದು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ಸೆರೆಯಾಗಿದೆ.
ಪೋಷಕರ ಆಕ್ರೋಶ ಮತ್ತು ಔಪಚಾರಿಕ ದೂರಿನ ನಂತರ, ಮದರಸಾ ಆಡಳಿತವು ಶಿಕ್ಷಕನನ್ನು ತಕ್ಷಣವೇ ವಜಾಗೊಳಿಸಿದೆ. ಅಧಿಕಾರಿಗಳು ಈಗ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಮತ್ತು ತನಿಖೆಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement