

ಫರಿದಾಬಾದ್: 12 ಜನರು ಮೃತಪಟ್ಟ ಕೆಂಪು ಕೋಟೆ ಬಳಿಯ ದೆಹಲಿ ಸ್ಫೋಟ ಕುರಿತು ತನಿಖೆ ಮುಂದುವರೆಸಿರುವ ಭದ್ರತಾ ಸಂಸ್ಥೆಗಳು, "ವೈಟ್ ಕಾಲರ್ ಭಯೋತ್ಪಾದಕ ಮಾಡ್ಯೂಲ್" ಗೆ ಬೇರೆ ಯಾರಾದರೂ ಸಂಪರ್ಕದಲ್ಲಿದ್ದಾರೆಯೇ ಎಂಬುದನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿವೆ.
ಫರಿದಾಬಾದ್ ಪೊಲೀಸರು ಸೋಮವಾರ ಫರಿದಾಬಾದ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಜಮ್ಮು ಕಾಶ್ಮೀರದ ಪ್ರಜೆಗಳು ಹಾಗೂ ಹಲವಾರು ವಿದ್ಯಾರ್ಥಿಗಳನ್ನು ವಿಚಾರಣೆ ನಡೆಸಿದ್ದಾರೆ.
ನಗರದಲ್ಲಿ ವಾಸಿಸುತ್ತಿರುವ ಕನಿಷ್ಠ 2,000 ಬಾಡಿಗೆದಾರರು ಮತ್ತು ವಿದ್ಯಾರ್ಥಿಗಳನ್ನು ಇಲ್ಲಿಯವರೆಗೆ ಪ್ರಶ್ನಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಂಪು ಕೋಟೆ ಬಳಿಯ ಸ್ಫೋಟದ ನಂತರ ಕಾಶ್ಮೀರಿ ವಿದ್ಯಾರ್ಥಿಗಳು ಮತ್ತು ಫರಿದಾಬಾದ್‌ನಲ್ಲಿ ಬಾಡಿಗೆಗೆ ವಾಸಿಸುತ್ತಿರುವ ಬಾಡಿಗೆದಾರರ ವಿಚಾರಣೆ ನಡೆಸಲಾಗಿದೆ. ಇಲ್ಲಿಯವರೆಗೆ 2,000 ಕ್ಕೂ ಹೆಚ್ಚು ಬಾಡಿಗೆದಾರರ ವಿಚಾರಣೆ ನಡೆದಿದ್ದು, ಮತ್ತಷ್ಟು ವಿವರ ಕಲೆಹಾಕಲಾಗಿದೆ ಎಂದು ಫರಿದಾಬಾದ್ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಫರಿದಾಬಾದ್‌ನಲ್ಲಿ ಶಸ್ತ್ರಾಸ್ತ್ರಗಳು, ಸ್ಫೋಟಕಗಳು, ಅಮೋನಿಯಂ ನೈಟ್ರೇಟ್ ಮತ್ತಿತರ ವಸ್ತುಗಳ ಸಂಗ್ರಹ ದೊರೆತ ನಂತರ ಅಲ್ ಫಲಾಹ್ ವಿಶ್ವವಿದ್ಯಾಲಯ ವೈಟ್ ಕಾಲರ್ ಭಯೋತ್ಪಾದಕ ಮಾಡೆಲ್ ನೊಂದಿಗೆ ಸಂಪರ್ಕ ಹೊಂದಿರುವುದನ್ನು ಅಧಿಕಾರಿಗಳು ಬಯಲುಮಾಡಿದ್ದರು.
ಸ್ಪೋಟದ ನಂತರ ತನಿಖಾ ಸಂಸ್ಥೆ ಸ್ಫೋಟ ಮತ್ತು ಘಟಕದ ಸದಸ್ಯರಿಗೆ ಸಂಬಂಧಿಸಿದ ಸಂಪರ್ಕಗಳನ್ನು ಕಂಡುಹಿಡಿಯಲು ಅಂತರ್ ರಾಜ್ಯ ರಾಜ್ಯ ತನಿಖೆಯನ್ನು ಪ್ರಾರಂಭಿಸಿವೆ, ದೆಹಲಿ, ಫರಿದಾಬಾದ್ (ಹರಿಯಾಣ) ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ತನಿಖೆ ನಡೆಯುತ್ತಿದೆ.
Advertisement