

ಪಾಟ್ನಾ: ತಾನು ತನ್ನ ತಂದೆಗೆ ಕೊಳಕು ಮೂತ್ರಪಿಂಡ ನೀಡಿದ್ದೇನೆ ಎನ್ನುವವರೊಂದಿಗೆ ಮುಕ್ತ ಚರ್ಚೆಗೆ ಸಿದ್ಧವಿರುವುದಾಗಿ ಆರ್ ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ಮಂಗಳವಾರ ಹೇಳಿದ್ದಾರೆ.
ಇಂತಹವರು organ ಅಗತ್ಯವಿರುವ ಲಕ್ಷಾಂತರ ಜನರಿಗೆ ಲಾಲು ಪ್ರಸಾದ್ ಅವರ ಹೆಸರಿನಲ್ಲಿ ತಮ್ಮ ಕಿಡ್ನಿಗಳನ್ನು ದಾನ ಮಾಡಲಿ ಎಂದಿದ್ದಾರೆ.
ಆರ್‌ಜೆಡಿಯ ಚುನಾವಣಾ ಸೋಲಿನ ನಂತರ, ಆಚಾರ್ಯ ತಮ್ಮ ಅನಾರೋಗ್ಯ ಪೀಡಿತ ತಂದೆಗೆ ನೀಡಿದ ಕೊಳಕು ಮೂತ್ರಪಿಂಡ"ಕ್ಕೆ ಬದಲಾಗಿ ಪಕ್ಷದ ಟಿಕೆಟ್" ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ತನ್ನ ಕಿರಿಯ ಸಹೋದರ ತೇಜಸ್ವಿ ಯಾದವ್ ಅವರ ಸಹಚರರು ನನ್ನನ್ನು ಮನೆಯಿಂದ ಹೊರಹಾಕಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರೋಹಿಣಿ ಆಚಾರ್ಯ, "ಲಾಲು ಜಿ ಹೆಸರಿನಲ್ಲಿ ಏನೋ ಮಾಡಲು ಬಯಸುವ ಜನರು, ಕಪಟತನ ಆಡುವುದನ್ನು ನಿಲ್ಲಿಸಬೇಕು. ಆಸ್ಪತ್ರೆಗಳಲ್ಲಿ ಕೊನೆಯುಸಿರೆಳೆದಿರುವ ಮತ್ತು ಮೂತ್ರಪಿಂಡಗಳ ಅಗತ್ಯವಿರುವ ಲಕ್ಷಾಂತರ ಬಡವರಿಗೆ ತಮ್ಮ ಮೂತ್ರಪಿಂಡಗಳನ್ನು ದಾನ ಮಾಡಲು ಅವರು ಮುಂದೆ ಬರಬೇಕು, ಲಾಲು ಪ್ರಸಾದ್ ಹೆಸರಿನಲ್ಲಿ ತಮ್ಮ ಮೂತ್ರಪಿಂಡಗಳನ್ನು ದಾನ ಮಾಡಿ ಎಂದು ಬರೆದುಕೊಂಡಿದ್ದಾರೆ.
ತನ್ನ ತಂದೆಗೆ ವಿವಾಹಿತ ಮಗಳು ಮೂತ್ರ ಪಿಂಡ ದಾನ ಮಾಡಿದ್ದು ತಪ್ಪು ಎಂದು ಹೇಳುವವರು ಆ ಮಗಳೊಂದಿಗೆ ಮುಕ್ತ ವೇದಿಕೆಯಲ್ಲಿ ಮುಕ್ತ ಚರ್ಚೆಗೆ ಬರಬೇಕು. ಮಗಳ ಮೂತ್ರಪಿಂಡವನ್ನು ಕೊಳಕು ಎಂದು ಕರೆಯುವವರು ಮೊದಲು ನಿರ್ಗತಿಕರಿಗೆ ಮೂತ್ರಪಿಂಡಗಳನ್ನು ದಾನ ಮಾಡುವ ಮಹಾನ್ ಕಾರ್ಯವನ್ನು ಪ್ರಾರಂಭಿಸಬೇಕು ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
Advertisement