

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಬಳಿಕ ಕಾಂಗ್ರೆಸ್ ಮೈತ್ರಿ ಕೂಟದೊಂದಿಗೆ ಸ್ಪರ್ಧಿಸದೆ ಏಕಾಂಗಿ ಹೋರಾಟ ನಡೆಸಲು ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್‌ನ ರಾಹುಲ್ ಗಾಂಧಿ ಮತ್ತು ರಾಷ್ಟ್ರೀಯ ಜನತಾ ದಳದ ತೇಜಸ್ವಿ ಯಾದವ್ ನೇತೃತ್ವದಲ್ಲಿ ಒಕ್ಕೂಟಕ್ಕೆ ಬಿಹಾರದಲ್ಲಿ ಅಭೂತ ಪೂರ್ವ ಗೆಲುವು ಸಿಗಲಿದೆ ಭಾವಿಸಲಾಗಿತ್ತು. ಆದರೆ ಚುನಾವಣಾ ಫಲಿತಾಂಶ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿತ್ತು. ಚುನಾವಣೆಯಲ್ಲಿ ಒಕ್ಕೂಟ ಕೆಟ್ಟ ಪ್ರದರ್ಶನ ನೀಡಿ ಹೀನಾಯ ಸೋಲು ಅನುಭವಿಸಿತ್ತು.
ಮಹಾಘಟಬಂಧನ್‌ಗೆ ತೇಜಸ್ವಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಆರ್‌ಜೆಡಿ 26 ಸ್ಥಾನಗಳನ್ನು ಗಳಿಸಿತು, ಆದರೆ ಕಾಂಗ್ರೆಸ್ 6 ಸ್ಥಾನಗಳನ್ನು ಗಳಿಸಿ ಮುಜುಗರ ಅನುಭವಿಸಿತ್ತು. ನಿತೀಶ್-ಮೋದಿ ಬಿರುಗಾಳಿಗೆ ಮಹಾಘಟಬಂಧನ್ ಮಣ್ಣು ಮುಕ್ಕಿದೆ. ಹೀಗಾಗಿ ಇಂಡಿಯಾ ಒಕ್ಕೂಟ ಮೈತ್ರಿ ಇತಿಹಾಸದ ಪುಟ ಸೇರುತ್ತಾ ಅನ್ನೋ ಚರ್ಚೆ ಶುರುವಾಗಿದೆ.
ಮೈತ್ರಿ ಮುಂದುರಿಸದಿರಲು ಕಾಂಗ್ರೆಸ್ ಮುಂದಾಗಿದೆ. ರಾಹುಲ್ ಗಾಂಧಿ ಕೂಡ ಇಂಡಿ ಮೈತ್ರಿಕೂಟಕ್ಕೆ ಅಂತ್ಯ ಹಾಡಲು ಒಪ್ಪಿಗೆ ಸೂಚಿಸಿದ್ದಾರೆ ಅಂತ ಹೇಳಲಾಗುತ್ತಿದೆ. ರಾಷ್ಟ್ರಮಟ್ಟದಲ್ಲಿ ಇಂಡಿ ಒಕ್ಕೂಟ ಅಗತ್ಯ ಇಲ್ಲ. ಅಗತ್ಯ ಇದ್ರೆ ರಾಜ್ಯಮಟ್ಟದಲ್ಲಿ ಮೈತ್ರಿ ಮಾಡಿಕೊಳ್ಳೋಣ. ಮುಂದಿನ ಚುನಾವಣೆಗಳಲ್ಲಿ ಏಕಾಂಗಿಯಾಗಿ ಸ್ಪರ್ಧೆಗೆ ಕಾಂಗ್ರೆಸ್ ಮುಂದಾಗಿದೆ ಅಂತ ಹೇಳಲಾಗ್ತಿದೆ.
ಇತ್ತೀಚೆಗೆ ಮುಕ್ತಾಯಗೊಂಡ ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್-ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್ ಮೈತ್ರಿಕೂಟ ಗೆಲುವಿನ ವಿಶ್ವಾಸದಲ್ಲಿತ್ತು. ಆದರೆ ಆರ್‌ಜೆಡಿ 26 ಸ್ಥಾನ ಗಳಿಸಿದ್ರೆ, ಕಾಂಗ್ರೆಸ್ 6 ಸ್ಥಾನ ಗೆದ್ದು ಮುಖಭಂಗ ಅನುಭವಿಸಿತು. ರಾಹುಲ್ ಗಾಂಧಿ ಅವರು ಫಲ ಕೊಡಬಹುದೆಂದು ನಿರೀಕ್ಷಿಸಿದ್ದ ಮತ ಅಧಿಕಾರ ಯಾತ್ರೆ ಹಾಗೂ ವೋಟ್ ಚೋರಿ ಆರೋಪ ಕೈಕೊಟ್ಟಿತು.
Advertisement