

ನವದೆಹಲಿ: ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಬರಹಗಳು ಕೇವಲ ಇತಿಹಾಸವಲ್ಲ, ಅವು ವಿಕಸನ ಭಾರತದ ಆತ್ಮಸಾಕ್ಷಿಯ ದಾಖಲೆಗಳು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ.
ರಾಷ್ಟ್ರದ ಪ್ರಜಾಪ್ರಭುತ್ವದ ಪ್ರಯಾಣವನ್ನು ಅರ್ಥಮಾಡಿಕೊಳ್ಳ ಬಯಸುವವರಿಗೆ ಅವರ ಮಾತುಗಳು ಪ್ರಬಲ ದಿಕ್ಸೂಚಿಯಾಗಿ ಉಳಿದಿವೆ ಎಂದು ಅವರು ಪ್ರತಿಪಾದಿಸಿದ್ದಾರೆ
'ಜವಾಹರಲಾಲ್ ನೆಹರು ಅವರ ಆಯ್ದ ಕೃತಿಗಳ ಡಿಜಿಟಲೀಕರಣ ಪೂರ್ಣಗೊಂಡ ನಂತರ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ. ದೇಶದ ಮೊದಲ ಪ್ರಧಾನಿಗೆ ಸಂಬಂಧಿಸಿದ ಸುಮಾರು 35,000 ದಾಖಲೆಗಳು ಮತ್ತು 3,000 ವಿವರಣೆಗಳಿರುವ 100 ಸಂಪುಟಗಳ 'Selected Works of Jawaharlal Nehru'ಈಗ ಆನ್ ಲೈನ್ ನಲ್ಲಿ ಲಭ್ಯವಿದೆ. ಇದನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರ ಲಾಲ್ ನೆಹರು ಅವರ ಸಮಗ್ರ ಬರಹಗಳನ್ನು ಒಳಗೊಂಡ ನೆಹರು ಆರ್ಕೈವ್ ಗೆ (nehruarchive.in)ಚಾಲನೆ ಸಿಕ್ಕಿರುವುದಕ್ಕೆ ಸಂತಸವಾಗಿದೆ. ನೆಹರು ಅವರ ಬರಹಗಳ - ಪತ್ರಗಳು, ಭಾಷಣಗಳು, ಟಿಪ್ಪಣಿಗಳು ಸುಲಭವಾಗಿ ಮುಕ್ತವಾಗಿ ಲಭ್ಯವಿದೆ. ಅವರ ಬರಹಗಳು ಕೇವಲ ಇತಿಹಾಸವಲ್ಲ, ಅವರು ವಿಕಸನ ಭಾರತದ ಆತ್ಮಸಾಕ್ಷಿಯ ದಾಖಲೆಯಾಗಿದೆ. "ನಮ್ಮ ರಾಷ್ಟ್ರದ ಪ್ರಜಾಪ್ರಭುತ್ವದ ಪ್ರಯಾಣವನ್ನು ಅರ್ಥಮಾಡಿಕೊಳ್ಳಲು ಬಯಸುವವರಿಗೆ ಅವರ ಮಾತುಗಳು ಪ್ರಬಲ ದಿಕ್ಸೂಚಿಯಾಗಿ ಉಳಿದಿವೆ" ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.
ಈ ಬೆಳವಣಿಗೆ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡಾ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ವಾಸ್ತವ, ವಾಸ್ತವವೇ, ನೀವು ಇಷ್ಟಪಡುವಂತೆ ಅವುಗಳು ಕಣ್ಮರೆಯಾಗಲ್ಲ. ಪಂಡಿತ್ ನೆಹರು ಮತ್ತು ಭಾರತಕ್ಕಾಗಿ ಅವರ ಅಗಾಧ ಸಾಧನೆಗಳ ಬಗ್ಗೆ ಉದ್ದೇಶಪೂರ್ವಕ ವಿರೂಪ, ತಪ್ಪು ಮಾಹಿತಿಯ ಯುಗದಲ್ಲಿ ಸತ್ಯ ಮತ್ತು ಭವಿಷ್ಯದ ಪೀಳಿಗೆಗಾಗಿ ಅವರ ಬರಹಗಳನ್ನು ಡಿಜಿಟಲೀಕರಣಗೊಳಿಸುವುದು ಯೋಗ್ಯವಾಗಿದೆ ಎಂದು ಹೇಳಿದ್ದಾರೆ.
ಮತ್ತೊಂದೆಡೆ ನಮ್ಮ ರಾಷ್ಟ್ರದ ಬಗ್ಗೆ ಸರಿಯಾದ ಮಾಹಿತಿ ಪಡೆಯಲು ಪ್ರತಿಯೊಬ್ಬರು ನೆಹರು ಆರ್ಕೈವ್ ಗೆ ಭೇಟಿ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
Advertisement