ನೂತನ CJI ಸೂರ್ಯಕಾಂತ್ ಗೆ ತಮ್ಮ ಸರ್ಕಾರಿ ಕಾರು ಬಿಟ್ಟುಕೊಟ್ಟ ಮಾಜಿ CJI ಗವಾಯಿ

ನವೆಂಬರ್ 23 ರಂದು ನಿವೃತ್ತರಾದ ನ್ಯಾಯಮೂರ್ತಿ ಗವಾಯಿ ಅವರು ಇಂದು ಅಧಿಕೃತ ಸರ್ಕಾರಿ ಕಾರಿನಲ್ಲಿ ರಾಷ್ಟ್ರಪತಿ ಭವನ ತಲುಪಿದರು.
Ex-CJI Gavai leaves official car for successor Surya Kant at Rashtrapati Bhavan
ಮಾಜಿ CJI ಗವಾಯಿ - ನೂತನ CJI ಸೂರ್ಯಕಾಂತ್
Updated on

ನವದೆಹಲಿ: ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಸೋಮವಾರ ರಾಷ್ಟ್ರಪತಿ ಭವನದಲ್ಲಿ ತಮ್ಮ ಉತ್ತರಾಧಿಕಾರಿ ಸೂರ್ಯಕಾಂತ್ ಅವರಿಗೆ ಅಧಿಕೃತ ಮರ್ಸಿಡಿಸ್-ಬೆನ್ಜ್ ಕಾರನ್ನು ಬಿಟ್ಟು ಇತರರಿಗೆ ಮಾದರಿಯಾದರು.

ನವೆಂಬರ್ 23 ರಂದು ನಿವೃತ್ತರಾದ ನ್ಯಾಯಮೂರ್ತಿ ಗವಾಯಿ ಅವರು ಇಂದು ಅಧಿಕೃತ ಸರ್ಕಾರಿ ಕಾರಿನಲ್ಲಿ ರಾಷ್ಟ್ರಪತಿ ಭವನ ತಲುಪಿದರು. ಆದರೆ ಸಮಾರಂಭದ ನಂತರ ಸರ್ಕಾರಿ ಕಾರನ್ನು ನೂತನ CJIಗೆ ಬಿಟ್ಟುಕೊಟ್ಟು ತಾವು ತಮ್ಮ ವೈಯಕ್ತಿಕ ವಾಹನದಲ್ಲಿ ನಿವಾಸಕ್ಕೆ ತೆರಳಿದರು.

"ಪ್ರಮಾಣವಚನ ಸಮಾರಂಭದ ನಂತರ, ನ್ಯಾಯಮೂರ್ತಿ ಗವಾಯಿ ಅವರು, ಮುಖ್ಯ ನ್ಯಾಯಮೂರ್ತಿಗಾಗಿ ಗೊತ್ತುಪಡಿಸಿದ ಅಧಿಕೃತ ವಾಹನವನ್ನು ಬಿಟ್ಟು ರಾಷ್ಟ್ರಪತಿ ಭವನದಿಂದ ಪರ್ಯಾಯ ವಾಹನದಲ್ಲಿ ಮರಳಿದರು. ನೂತನ ಸಿಜೆಐ, ಸುಪ್ರೀಂ ಕೋರ್ಟ್‌ಗೆ ಹೋಗಲು ಅಧಿಕೃತ ಕಾರು ಲಭ್ಯವಾಗುವಂತೆ ನೋಡಿಕೊಂಡಿದ್ದಾರೆ" ಎಂದು ಗವಾಯಿ ಅವರ ಆಪ್ತರು ತಿಳಿಸಿದ್ದಾರೆ.

Ex-CJI Gavai leaves official car for successor Surya Kant at Rashtrapati Bhavan
370ನೇ ವಿಧಿ ರದ್ದತಿ, SIR ಬಗ್ಗೆ ತೀರ್ಪು: 53ನೇ ಸಿಜೆಐ ಆಗಿ ನ್ಯಾಯಮೂರ್ತಿ ಸೂರ್ಯಕಾಂತ್ ಪ್ರಮಾಣ ವಚನ ಸ್ವೀಕಾರ!

ಸೋಮವಾರ ಬೆಳಗ್ಗೆ ನಡೆದ ಸಂಕ್ಷಿಪ್ತ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 53ನೇ ಸಿಜೆಐ ಆಗಿ ನ್ಯಾಯಮೂರ್ತಿ ಸೂರ್ಯಕಾಂತ್ ಅವರಿಗೆ ಪ್ರಮಾಣವಚನ ಬೋಧಿಸಿದರು. ದೇವರ ಹೆಸರಿನಲ್ಲಿ ಹಿಂದಿಯಲ್ಲಿ ಅವರು ಪ್ರಮಾಣವಚನ ಸ್ವೀಕರಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com