ಪಶ್ಚಿಮ ಬಂಗಾಳದಲ್ಲಿ ವಿವಾದಿತ SIR ಕುರಿತು ಮಾತುಕತೆಗೆ ಟಿಎಂಸಿಗೆ ಚುನಾವಣಾ ಆಯೋಗ ಆಹ್ವಾನ

ಆಯೋಗವು "ರಚನಾತ್ಮಕ ಸಂವಾದಕ್ಕಾಗಿ ರಾಜಕೀಯ ಪಕ್ಷಗಳೊಂದಿಗೆ ನಿಯಮಿತ ಚರ್ಚೆಯನ್ನು ಯಾವಾಗಲೂ ಸ್ವಾಗತಿಸುತ್ತದೆ" ಎಂದು ಪತ್ರದಲ್ಲಿ ಒತ್ತಿ ಹೇಳಲಾಗಿದೆ.
Election Commission (file pic)
ಚುನಾವಣಾ ಆಯೋಗ (ಸಂಗ್ರಹ ಚಿತ್ರ)online desk
Updated on

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ವಿವಾದಿತ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ತೀವ್ರ ಆಕ್ಷೇಪಣೆಗಳ ನಡುವೆ, ಅವರ ಪಕ್ಷದ ಕುಂದುಕೊರತೆಗಳನ್ನು ಆಲಿಸಲು ನವೆಂಬರ್ 28 ರಂದು ನಿರ್ವಚನ ಸದನದಲ್ಲಿ ಸಭೆ ನಡೆಸಲು ತೃಣಮೂಲ ಕಾಂಗ್ರೆಸ್ ನಿಯೋಗವನ್ನು ಭಾರತೀಯ ಚುನಾವಣಾ ಆಯೋಗ ಆಹ್ವಾನಿಸಿದೆ.

ಟಿಎಂಸಿ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ, ಟಿಎಂಸಿ ಸಂಸದೀಯ ನಾಯಕ ಡೆರೆಕ್ ಒ'ಬ್ರೇನ್ ಅವರು ಸಂಸದರ ನಿಯೋಗಕ್ಕೆ ಅಪಾಯಿಂಟ್ಮೆಂಟ್ ಕೋರಿದ್ದಾರೆ ಎಂದು ಇಸಿಐ ಗಮನಿಸಿದೆ. ನಿಮ್ಮ ವಿನಂತಿಯನ್ನು ಪರಿಗಣಿಸಿದ ನಂತರ, ಆಯೋಗವು ನವೆಂಬರ್ 28 ರಂದು ಬೆಳಗ್ಗೆ 11 ಗಂಟೆಗೆ ನವದೆಹಲಿಯ ಅಶೋಕ ರಸ್ತೆಯಲ್ಲಿರುವ ಪ್ರಧಾನ ಕಚೇರಿಯಲ್ಲಿ ನಾಲ್ಕು ಹೆಚ್ಚುವರಿ ಪಕ್ಷದ ಸದಸ್ಯರೊಂದಿಗೆ ಅಧಿಕೃತ ಪ್ರತಿನಿಧಿಗಳನ್ನು ಭೇಟಿ ಮಾಡಲು ಒಪ್ಪಿಕೊಂಡಿದೆ.

ವ್ಯವಸ್ಥೆಗಳನ್ನು ಸುಗಮಗೊಳಿಸಲು ನಿಯೋಗದ ಸದಸ್ಯರ ಹೆಸರುಗಳು ಮತ್ತು ಅವರ ವಾಹನದ ವಿವರಗಳನ್ನು election@eci.gov.in ಇಮೇಲ್‌ನಲ್ಲಿ ಒದಗಿಸುವಂತೆ ಚುನಾವಣಾ ಆಯೋಗ, ಟಿಎಂಸಿಗೆ ಸೂಚಿಸಿದೆ. ಆಯೋಗವು "ರಚನಾತ್ಮಕ ಸಂವಾದಕ್ಕಾಗಿ ರಾಜಕೀಯ ಪಕ್ಷಗಳೊಂದಿಗೆ ನಿಯಮಿತ ಚರ್ಚೆಯನ್ನು ಯಾವಾಗಲೂ ಸ್ವಾಗತಿಸುತ್ತದೆ" ಎಂದು ಪತ್ರದಲ್ಲಿ ಒತ್ತಿ ಹೇಳಲಾಗಿದೆ.

Election Commission (file pic)
ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

ಪಶ್ಚಿಮ ಬಂಗಾಳದಲ್ಲಿ SIR ಪ್ರಕ್ರಿಯೆಯನ್ನು ಟಿಎಂಸಿ ತೀವ್ರವಾಗಿ ಟೀಕಿಸಿದೆ. ಇದು 2026 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಮತದಾರರ ಪಟ್ಟಿಯನ್ನು ಕುಶಲತೆಯಿಂದ ಬದಲಾಯಿಸುವ ಗುರಿಯನ್ನು ಹೊಂದಿರುವ ಬಿಜೆಪಿ ಮತ್ತು ಇಸಿಐನ ರಾಜಕೀಯ ಪ್ರೇರಿತ ನಡೆ ಎಂದು ಆರೋಪಿಸಿದೆ.

ಮತಾ ಬ್ಯಾನರ್ಜಿ ಮತ್ತು ಅಭಿಷೇಕ್ ಬ್ಯಾನರ್ಜಿ ಈ ಉಪಕ್ರಮವನ್ನು "ಸೈಲೆಂಟ್ ಇನ್ವಿಸಿಬಲ್ ರಿಗ್ಗಿಂಗ್(SIR)" ಎಂದು ಟೀಕಿಸಿದ್ದಾರೆ. ಇದು ನಿಜವಾದ ಮತದಾರರನ್ನು, ವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯಗಳು ಮತ್ತು ಬಂಗಾಳಿ ವಲಸಿಗರನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com