

ಚಂಡೀಗಢ: ದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಡಾ. ಉಮರ್-ಉನ್ ನಬಿಗೆ ಆಶ್ರಯ ನೀಡಿದ ಮತ್ತು ಲಾಜಿಸ್ಟಿಕ್ ಬೆಂಬಲ ನೀಡಿದ ಆರೋಪದ ಮೇಲೆ ಫರಿದಾಬಾದ್‌ನ ಅಲ್ ಫಲಾಹ್ ವಿಶ್ವವಿದ್ಯಾಲಯದ ಬಳಿ ಇರುವ ಧೌಜ್ ನಿವಾಸಿ ಸೋಯಾಬ್‌ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಬಂಧಿಸಿದೆ.
ಇದರೊಂದಿಗೆ ನವೆಂಬರ್ 10 ರಂದು ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.
ಸೋಯಾಬ್, ದಾಳಿಗೆ ಸ್ವಲ್ಪ ಮೊದಲು ಉಮರ್‌ಗೆ ಆಶ್ರಯ ನೀಡಿದ್ದರು ಮತ್ತು ಅವರ ಚಲನವಲನಗಳನ್ನು ಸುಗಮಗೊಳಿಸಲು ಸಹಾಯ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ.
"ಆತ್ಮಹತ್ಯಾ ಬಾಂಬ್ ದಾಳಿಗೆ ಸಂಬಂಧಿಸಿದಂತೆ ಎನ್ಐಎ ವಿವಿಧ ಸುಳಿವುಗಳನ್ನು ಹುಡುಕುತ್ತಲೇ ಇದೆ ಮತ್ತು ಭೀಕರ ದಾಳಿಯಲ್ಲಿ ಭಾಗಿಯಾಗಿರುವ ಇತರರನ್ನು ಗುರುತಿಸಲು ಮತ್ತು ಪತ್ತೆಹಚ್ಚಲು ಆಯಾ ಪೊಲೀಸ್ ಪಡೆಗಳೊಂದಿಗೆ ಹಲವು ರಾಜ್ಯಗಳಾದ್ಯಂತ ಶೋಧ ನಡೆಸುತ್ತಿದೆ" ಎಂದು ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೋಯಾಬ್‌ನನ್ನು ಈ ಹಿಂದೆ ಬಂಧಿಸಲಾದ ಆರೋಪಿಗಳೊಂದಿಗೆ ತನಿಖೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.
Advertisement