
ಅಮರಾವತಿ: ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ನೇತೃತ್ವದ ಸಚಿವ ಸಂಪುಟ ಶುಕ್ರವಾರ ಅರ್ಹ ಆಟೋರಿಕ್ಷಾ ಮತ್ತು ಕ್ಯಾಬ್ ಚಾಲಕರಿಗೆ ವಾರ್ಷಿತ 15,000 ರೂ. ಆರ್ಥಿಕ ನೆರವು ನೀಡಲು ಅನುಮೋದಿಸಿದೆ ಎಂದು ಆಂಧ್ರ ಪ್ರದೇಶ ಸಚಿವ ಕೆ ಪಾರ್ಥಸಾರಥಿ ಅವರು ತಿಳಿಸಿದ್ದಾರೆ.
ಆಟೋ ಡ್ರೈವರ್ ಸೆವಾಲೋ - ಯೋಜನೆಯಡಿಯಲ್ಲಿ 2.9 ಲಕ್ಷಕ್ಕೂ ಹೆಚ್ಚು ಆಟೋ ಮತ್ತು ಕ್ಯಾಬ್ ಚಾಲಕರು ವಾರ್ಷಿಕ 15 ಸಾವಿರ ರೂಪಾಯಿ ಪಡೆಯಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಸಂಬಂಧ 2025-26ರ ಆರ್ಥಿಕ ವರ್ಷಕ್ಕೆ 436 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ. ಈ ಯೋಜನೆಯನ್ನು ಅಕ್ಟೋಬರ್ 4 ರಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಉದ್ಘಾಟಿಸಲಿದ್ದಾರೆ.
"ಆಟೋ ಮತ್ತು ಕ್ಯಾಬ್ ಚಾಲಕರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು 2025-26ರ ಆರ್ಥಿಕ ವರ್ಷಕ್ಕೆ ಆಟೋರಿಕ್ಷಾ, ಮೋಟಾರ್ ಕ್ಯಾಬ್ ಮತ್ತು ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ 15,000 ರೂ. ಆರ್ಥಿಕ ನೆರವು ವಿಸ್ತರಿಸಲು ಹೊರಡಿಸಲಾದ ಸರ್ಕಾರಿ ಆದೇಶಕ್ಕೆ ಸಚಿವ ಸಂಪುಟ ಅನುಮೋದಿಸಿದೆ" ಎಂದು ಪಾರ್ಥಸಾರಥಿ ಸಚಿವಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
Advertisement