
ನವದೆಹಲಿ: ಮಧ್ಯಪ್ರದೇಶ ಮತ್ತು ರಾಜಸ್ತಾನದಲ್ಲಿ ಮಕ್ಕಳ ಸಾವಿಗೆ ಕಾರಣವಾದ ವಿವಾದಾತ್ಮಕ ಕೆಮ್ಮಿನ ಸಿರಪ್ ಕೋಲ್ಡ್ರಿಫ್‌ನಲ್ಲಿ ಕೈಗಾರಿಕಾ ರಾಸಾಯನಿಕ ಡೈಥಿಲೀನ್ ಗ್ಲೈಕಾಲ್ (DEG) ಇಲ್ಲ ಎಂದು ನಿರಾಕರಿಸಿದ ಕೆಲವೇ ಗಂಟೆಗಳ ನಂತರ, ಕೇಂದ್ರ ಆರೋಗ್ಯ ಸಚಿವಾಲಯವು ಯೂ-ಟರ್ನ್ ಹೊಡೆದಿದೆ. ತಮಿಳುನಾಡಿನ ಆಹಾರ ಮತ್ತು ಔಷಧ ಆಡಳಿತ ಇಲಾಖೆಯ ವರದಿಯ ಆಧಾರದ ಮೇಲೆ ಡೈಥಿಲೀನ್ ಗ್ಲೈಕಾಲ್ ಇದೆ ಎಂದು ಹೇಳಿದೆ.
ಮಧ್ಯಪ್ರದೇಶದ ಆಹಾರ ಮತ್ತು ಔಷಧ ಆಡಳಿತ (FDA) ಯಿಂದ ಅನುಮೋದನೆ ಪಡೆದ ನಂತರ ಕೇಂದ್ರ ಆರೋಗ್ಯ ಸಚಿವಾಲಯ ಸಿರಪ್‌ನಲ್ಲಿ ಯಾವುದೇ DEG ಕಂಡುಬಂದಿಲ್ಲ ಎಂದು ಹೇಳಿತ್ತು. ನಿನ್ನೆ ದೃಢೀಕರಣ ನಂತರ ತಮಿಳುನಾಡು ಮೊದಲು ಸಿರಪ್ ನ್ನು ನಿಷೇಧಿಸಿತು, ನಂತರ ಮಧ್ಯಪ್ರದೇಶ ಮತ್ತು ಕೇರಳ ರಾಜ್ಯಗಳು ದೃಢಪಡಿಸಿವೆ.
ಕೋಲ್ಡ್ರಿಫ್ ಕೆಮ್ಮಿನ ಸಿರಪ್ ನ್ನು ಶ್ರೀಸನ್ ಫಾರ್ಮಾದ ಕಾಂಚೀಪುರಂ ಘಟಕದಲ್ಲಿ ತಯಾರಿಸಲಾಗುತ್ತಿತ್ತು. ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯಲ್ಲಿ ಒಂಬತ್ತು ಮಕ್ಕಳು ಮೃತಪಟ್ಟಿದ್ದಾರೆ. ಏಳು ಮಕ್ಕಳು ಕೆಮ್ಮಿನ ಸಿರಪ್‌ನಿಂದ ಮೃತಪಟ್ಟಿದ್ದರು. ರಾಜಸ್ತಾನದಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದರು. ಕೆಮ್ಮು ಸಿರಪ್ ದಾಸ್ತಾನುಗಳನ್ನು ತಮಿಳುನಾಡು, ಮಧ್ಯಪ್ರದೇಶ ಮತ್ತು ರಾಜಸ್ತಾನಗಳಿಗೆ ವಿತರಿಸಲಾಯಿತು.
ಮಧ್ಯಪ್ರದೇಶ ಸರ್ಕಾರದ ಕೋರಿಕೆಯ ಮೇರೆಗೆ, ತಮಿಳುನಾಡು ಎಫ್‌ಡಿಎ ಕಾಂಚೀಪುರಂನಲ್ಲಿರುವ ಮೆಸರ್ಸ್ ಸ್ರೆಸನ್ ಫಾರ್ಮಾ ಉತ್ಪಾದನಾ ಆವರಣದಿಂದ ಕೋಲ್ಡ್ರಿಫ್ ಕೆಫ್ ಸಿರಪ್‌ನ ಮಾದರಿಗಳನ್ನು ತೆಗೆದುಕೊಂಡಿದೆ.
ಮಾದರಿಗಳನ್ನು ಪರೀಕ್ಷಿಸಿದ ಫಲಿತಾಂಶಗಳನ್ನು ಮೊನ್ನೆ 3ರಂದು ತಡವಾಗಿ ಹಂಚಿಕೊಳ್ಳಲಾಗಿದೆ. ಅವುಗಳಲ್ಲಿ ಅನುಮತಿಯ ಮಿತಿಗಿಂತ ಹೆಚ್ಚಿನ ಡಿಇಜಿ ಇತ್ತು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಮಾದರಿಗಳು ಡಿಇಜಿಯೊಂದಿಗೆ ಕಲಬೆರಕೆ ಎಂದು ಕಂಡುಬಂದ ನಂತರ ತಮಿಳುನಾಡು ಔಷಧ ನಿಯಂತ್ರಣ ಇಲಾಖೆ ಶುಕ್ರವಾರ ಕೋಲ್ಡ್ರಿಫ್ ತಯಾರಕರಿಗೆ ತಕ್ಷಣದ ಉತ್ಪಾದನೆಯನ್ನು ನಿಲ್ಲಿಸುವ ಆದೇಶ ನೀಡಿದೆ.
Advertisement