ಬಿಹಾರ ಮತದಾರರ ಪಟ್ಟಿಯಿಂದ ದಲಿತ, ಮುಸ್ಲಿಂ ಮಹಿಳೆಯರ ಹೆಸರು ತೆಗೆದುಹಾಕಲಾಗಿದೆ: ಕಾಂಗ್ರೆಸ್

"ಬಿಹಾರದಲ್ಲಿ ಸುಮಾರು 3.5 ಕೋಟಿ ಮಹಿಳಾ ಮತದಾರರಿದ್ದಾರೆ. ಆದರೆ ಸುಮಾರು 23 ಲಕ್ಷ ಮಹಿಳೆಯರ (22.7 ಲಕ್ಷ) ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ".
Congress alleges targeted removal of Dalit, Muslim women's names from voter list in Bihar
ಅಲ್ಕಾ ಲಂಬಾ
Updated on

ನವದೆಹಲಿ: ಬಿಹಾರದಲ್ಲಿ ಎಸ್‌ಐಆರ್ ಅಡಿಯಲ್ಲಿ ಸುಮಾರು 23 ಲಕ್ಷ ಮಹಿಳೆಯರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಕಾಂಗ್ರೆಸ್ ಭಾನುವಾರ ಆರೋಪಿಸಿದ್ದು, ಅವರಲ್ಲಿ ಹೆಚ್ಚಿನವರು 2020ರ ಚುನಾವಣೆಯಲ್ಲಿ "ತೀವ್ರ ಸ್ಪರ್ಧೆ" ಕಂಡ 59 ವಿಧಾನಸಭಾ ಕ್ಷೇತ್ರಕ್ಕೆ ಸೇರಿದ್ದಾರೆ ಎಂದು ಹೇಳಿದೆ.

ತನ್ನ "ಮತ ಚೋರಿ" ಆರೋಪವನ್ನು ಪುನರುಚ್ಚರಿಸಿದ ಕಾಂಗ್ರೆಸ್, ಚುನಾವಣಾ ಆಯೋಗವು ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಸಮಯದಲ್ಲಿ "ಯೋಜಿತ ಪಿತೂರಿಯ" ಭಾಗವಾಗಿ ಪಟ್ಟಿಯಿಂದ ದಲಿತ ಮತ್ತು ಮುಸ್ಲಿಂ ಮಹಿಳಾ ಮತದಾರರನ್ನು "ಕೈಬಿಟ್ಟಿದೆ" ಎಂದು ಆರೋಪಿಸಿದೆ.

ಕಳೆದ ವರ್ಷ ಲೋಕಸಭಾ ಚುನಾವಣೆಯಲ್ಲಿ ಈ ಮಹಿಳೆಯರು ಮತ ಚಲಾಯಿಸಿದಾಗ, ಈ ಮತಗಳು "ಮೋಸದ" ಮತ್ತು "ನಕಲಿ ಮತಗಳಾಗಿದ್ದರೆ", ಅವರಿಂದ ಆಯ್ಕೆಯಾದ ಸಂಸದರು ಸರ್ಕಾರ ರಚಿಸಲು ಸಹಾಯ ಮಾಡಿದ್ದಾರೆಯೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

Congress alleges targeted removal of Dalit, Muslim women's names from voter list in Bihar
22 ವರ್ಷಗಳ ನಂತರ ಬಿಹಾರ ಮತದಾರರ ಪಟ್ಟಿ 'ಶುದ್ಧೀಕರಿಸಲಾಗಿದೆ'; ದೇಶಾದ್ಯಂತ ವಿಸ್ತರಣೆ: CEC

ಇಂದಿರಾ ಭವನದಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಲ್ಕಾ ಲಂಬಾ, "ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಆದೇಶದ ಮೇರೆಗೆ" ಚುನಾವಣಾ ಆಯೋಗವು ಬಿಹಾರದಲ್ಲಿ ಎಸ್‌ಐಆರ್ ಹೆಸರಿನಲ್ಲಿ "ಭಾರಿ ವಂಚನೆ" ಮಾಡುತ್ತಿದೆ ಎಂದು ಆರೋಪಿಸಿದರು.

"ಬಿಹಾರದಲ್ಲಿ ಸುಮಾರು 3.5 ಕೋಟಿ ಮಹಿಳಾ ಮತದಾರರಿದ್ದಾರೆ. ಆದರೆ ಸುಮಾರು 23 ಲಕ್ಷ ಮಹಿಳೆಯರ (22.7 ಲಕ್ಷ) ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ" ಎಂದು ಅವರು ಹೇಳಿದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಈ ಮಹಿಳೆಯರು ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ ಮತ್ತು "ಈ ನಿರ್ಧಾರ ಸಂವಿಧಾನಕ್ಕೆ ವಿರುದ್ಧವಾಗಿದೆ" ಎಂದು ಲಂಬಾ ವಾಗ್ದಾಳಿ ನಡೆಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com