ಗಾಯಕ ಜುಬೀನ್ ಜತೆ ದೋಣಿಯಲ್ಲಿದ್ದವರು ತನಿಖೆಗೆ ಗೈರಾದರೆ ಕಠಿಣ ಕ್ರಮ: ಅಸ್ಸಾಂ ಸಿಎಂ

"ಅವರು ಸೋಮವಾರದೊಳಗೆ ಹಿಂತಿರುಗದಿದ್ದರೆ, ನಾವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ನಾವು ಅವರನ್ನು ನಿರ್ದಿಷ್ಟ ಪ್ರಕ್ರಿಯೆಯ ಮೂಲಕ ಮರಳಿ ಕರೆತರಬೇಕಾಗುತ್ತದೆ" ಎಂದು ಶರ್ಮಾ ಎಚ್ಚರಿಕೆ ನೀಡಿದ್ದಾರೆ.
Strict action if Zubeen's companions skip probe: Assam CM
ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ
Updated on

ಕೊಕ್ರಝಾರ್‌: ಸಿಂಗಾಪುರದಲ್ಲಿ ಗಾಯಕ ಜುಬೀನ್ ಗಾರ್ಗ್ ಅವರ ಜತೆ ಕೊನೆ ಕ್ಷಣದಲ್ಲಿ ದೋಣಿಯಲ್ಲಿದ್ದ ವ್ಯಕ್ತಿಗಳ ವಾಪಸಾತಿ 'ಸಂಪೂರ್ಣವಾಗಿ ಅವರ ಮೇಲೆ ಅವಲಂಬಿತವಾಗಿದೆ'. ಆದರೆ ಅವರು ಅಕ್ಟೋಬರ್ 6 ರ ಗಡುವಿನೊಳಗೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಮುಂದೆ ಹಾಜರಾಗದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಭಾನುವಾರ ಹೇಳಿದ್ದಾರೆ.

ಇಂದು ಕೊಕ್ರಝಾರ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಸ್ಸಾಂ ಸಿಎಂ, "ಅವರ ವಾಪಸಾತಿ ಸಂಪೂರ್ಣವಾಗಿ ಅವರ ಮೇಲೆ ಅವಲಂಬಿತವಾಗಿರುತ್ತದೆ. ಅಸ್ಸಾಂ ಸರ್ಕಾರ ಅವರನ್ನು ಸಿಂಗಾಪುರದಿಂದ ಕರೆತರಲು ಸಾಧ್ಯವಿಲ್ಲ. ಆದರೆ ತನಿಖೆಗೆ ಮರಳುವಂತೆ ಕೇಳಿಕೊಳ್ಳಲು ನಾವು ಅವರ ಪೋಷಕರೊಂದಿಗೆ ಮಾತನಾಡಬಹುದು" ಎಂದಿದ್ದಾರೆ.

ಜುಬೀನ್ ಅವರು ಸಮುದ್ರದಲ್ಲಿ ಈಜುವಾಗ ಸಾವನ್ನಪ್ಪಿದ್ದು, ಅವರ ಕೊನೆಯ ಕ್ಷಣಗಳಲ್ಲಿ ಅವರೊಂದಿಗಿದ್ದ ಎಲ್ಲರಿಗೂ ಅಕ್ಟೋಬರ್ 6ರೊಳಗೆ ವಿಚಾರಣೆಗೆ ಹಾಜರಾಗುವಂತೆ ಈಗಾಗಲೇ ಸೂಚಿಸಲಾಗಿದೆ ಎಂದು ಅವರು ಹೇಳಿದರು.

Strict action if Zubeen's companions skip probe: Assam CM
ಜುಬೀನ್ ಗರ್ಗ್ ಸಾವು ಪ್ರಕರಣಕ್ಕೆ 'ಬಿಗ್ ಟ್ವಿಸ್ಟ್': ಸ್ಪೋಟಕ ಮಾಹಿತಿ ಹೊರಹಾಕಿದ Bandmate ಶೇಖರ್ ಜ್ಯೋತಿ ಗೋ ಸ್ವಾಮಿ!

"ಅವರು ಸೋಮವಾರದೊಳಗೆ ಹಿಂತಿರುಗದಿದ್ದರೆ, ನಾವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ನಾವು ಅವರನ್ನು ನಿರ್ದಿಷ್ಟ ಪ್ರಕ್ರಿಯೆಯ ಮೂಲಕ ಮರಳಿ ಕರೆತರಬೇಕಾಗುತ್ತದೆ" ಎಂದು ಶರ್ಮಾ ಎಚ್ಚರಿಕೆ ನೀಡಿದ್ದಾರೆ.

ವಿಹಾರ ನೌಕೆಯಲ್ಲಿ ಗಾಯಕನ ಜೊತೆಗಿದ್ದ ಜನ, ತನಿಖಾ ಸಂಸ್ಥೆಯ ಮುಂದೆ ತಮ್ಮ ಹೇಳಿಕೆಯನ್ನು ದಾಖಲಿಸದ ಹೊರತು ವಿಚಾರಣೆ ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಈ ಹಿಂದೆ ಹೇಳಿದ್ದರು.

ಏತನ್ಮಧ್ಯೆ, ಗಾರ್ಗ್ ಸಾವಿನಲ್ಲಿ ಅಸ್ಸಾಂ ಅಸೋಸಿಯೇಷನ್ ​​ಆಫ್ ಸಿಂಗಾಪುರದ 11 ಸದಸ್ಯರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ವೈದ್ಯರೊಬ್ಬರು ಲತಾಸಿಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com