ಶಿಕ್ಷಕಿ ಬರೆದ ಚೆಕ್ ಸಾರ್ವಜನಿಕರ ಅವಹೇಳನಕ್ಕೆ ಗುರಿ; ಅಮಾನತು!

ರೋಹ್ನಾಟ್‌ನಲ್ಲಿರುವ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯ ಚಿತ್ರಕಲಾ ಶಿಕ್ಷಕ ಅಟ್ಟರ್ ಸಿಂಗ್ ವಿರುದ್ಧ ಶಾಲಾ ಶಿಕ್ಷಣ ನಿರ್ದೇಶನಾಲಯ ಈ ಕ್ರಮ ಕೈಗೊಂಡಿದೆ.
Representational image
ಸಾಂದರ್ಭಿಕ ಚಿತ್ರ
Updated on

ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ ಸರ್ಕಾರಿ ಶಾಲಾ ಶಿಕ್ಷಕರೊಬ್ಬರು ನೀಡಿದ ಚೆಕ್‌ನ ಫೋಟೋ ವೈರಲ್ ಆಗತೊಡಗಿದ್ದು, ಅದರಲ್ಲಿ ಕಂಡುಬಂದ ಕಾಗುಣಿತ ದೋಷಗಳ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗತೊಡಗಿದೆ.

ಚೆಕ್ ನ ಫೋಟೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ಕೆಲವು ದಿನಗಳ ನಂತರ ಅವರನ್ನು ಅಮಾನತುಗೊಳಿಸಲಾಗಿದೆ, ಇದು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟದ ಬಗ್ಗೆ ಕಳವಳವನ್ನುಂಟುಮಾಡಿದೆ.

ರೋಹ್ನಾಟ್‌ನಲ್ಲಿರುವ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯ ಚಿತ್ರಕಲಾ ಶಿಕ್ಷಕ ಅಟ್ಟರ್ ಸಿಂಗ್ ವಿರುದ್ಧ ಶಾಲಾ ಶಿಕ್ಷಣ ನಿರ್ದೇಶನಾಲಯ ಈ ಕ್ರಮ ಕೈಗೊಂಡಿದೆ.

ಸೆಪ್ಟೆಂಬರ್ 25 ರಂದು ನೀಡಲಾದ 7,616 ರೂ.ಗಳ ಚೆಕ್, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, 'Saven Thursday Six Harendra Sixtey' ಎಂದು ಬರೆದಿದ್ದು, ಸಾರ್ವಜನಿಕರ ಅಪಹಾಸ್ಯಕ್ಕೆ ಗುರಿಯಾಗಿದೆ. ಶಾಲಾ ಪ್ರಾಂಶುಪಾಲರು, ಸಂಬಂಧಪಟ್ಟ ಶಿಕ್ಷಕರು ಮತ್ತು ಈ ತಪ್ಪಿಗೆ ಕಾರಣರಾದ ಅಧಿಕಾರಿಗಳಿಂದ ಗಮನಿಸಿ, ನಿರ್ದೇಶನಾಲಯ ವಿವರಣೆ ಕೋರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾಂಶುಪಾಲರು ಮತ್ತು ಶಿಕ್ಷಕರು ಶನಿವಾರ ಶಾಲಾ ಶಿಕ್ಷಣ ನಿರ್ದೇಶಕ ಆಶಿಶ್ ಕೊಹ್ಲಿ ಅವರ ಮುಂದೆ ವೈಯಕ್ತಿಕವಾಗಿ ಹಾಜರಾಗುವಂತೆ ಸೂಚಿಸಲಾಗಿದೆ. ವಿಚಾರಣೆಯ ಸಮಯದಲ್ಲಿ, ಸಿಂಗ್ ಸರಿಯಾದ ಶ್ರದ್ಧೆಯ ಕೊರತೆಯಿಂದಾಗಿ ಅಜಾಗರೂಕತೆಯಿಂದ ತಪ್ಪು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಅದನ್ನು ನಿರ್ದೇಶಕರು ಸ್ವೀಕರಿಸಿಲ್ಲ.

Representational image
ಉತ್ತರ ಪ್ರದೇಶ: ಶಿಕ್ಷಕಿ ಮುಖಕ್ಕೆ ಆಸಿಡ್ ಎರಚಿದ ವ್ಯಕ್ತಿಯ ಬಂಧನ

"ಇಲಾಖೆಯ ಪ್ರತಿಷ್ಠೆಗೆ ಕಳಂಕ ತರುವಂತಹ ಯಾವುದೇ ನಿರ್ಲಕ್ಷ್ಯ, ಆಕಸ್ಮಿಕತೆ, ಅಧಿಕೃತ ಜವಾಬ್ದಾರಿಗಳ ನಿರ್ಲಕ್ಷ್ಯವು ನಿಯಮಗಳ ಪ್ರಕಾರ ಕಠಿಣ ಶಿಸ್ತು ಕ್ರಮಕ್ಕೆ ಕಾರಣವಾಗುತ್ತದೆ" ಎಂದು ಕೊಹ್ಲಿ ಎಚ್ಚರಿಸಿದ್ದಾರೆ.

ಸದರಿ ಶಿಕ್ಷಕರ ವಿರುದ್ಧ ಕೇಂದ್ರ ನಾಗರಿಕ ಸೇವೆಗಳ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1965 ರ ಅಡಿಯಲ್ಲಿ ಶಿಸ್ತು ಕ್ರಮಗಳನ್ನು ಕೈಗೊಳ್ಳಲು ಮತ್ತು ಈ ನಿರ್ದೇಶನಾಲಯಕ್ಕೆ ಕ್ರಮ ಕೈಗೊಂಡ ವರದಿಯನ್ನು ಆದಷ್ಟು ಬೇಗ ಸಲ್ಲಿಸಲು ನಿರ್ದೇಶನಾಲಯವು ಶಾಲಾ ಶಿಕ್ಷಣದ ಉಪ ನಿರ್ದೇಶಕ (ಪ್ರಾಥಮಿಕ) ಸಿರ್ಮೌರ್ ಅವರಿಗೆ ನಿರ್ದೇಶನ ನೀಡಿದೆ. ಹಣಕಾಸಿನ ವಿಷಯಗಳು ಸೇರಿದಂತೆ ಅಧಿಕೃತ ದಾಖಲೆಗಳನ್ನು ಸಿದ್ಧಪಡಿಸುವಾಗ ಮತ್ತು ನೀಡುವಾಗ ನಿಖರತೆ, ಜವಾಬ್ದಾರಿ ಮತ್ತು ಆಡಳಿತಾತ್ಮಕ ಔಚಿತ್ಯದ ಅತ್ಯುನ್ನತ ಮಾನದಂಡಗಳನ್ನು ಕಾಯ್ದುಕೊಳ್ಳಬೇಕು ಎಂದು ನಿರ್ದೇಶನಾಲಯವು ಪ್ರತಿಪಾದಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com