ಮೌಂಟ್‌ ಎವರೆಸ್ಟ್‌ನಲ್ಲಿ ಭಾರಿ ಹಿಮಪಾತ: 1 ಸಾವಿರ ಪರ್ವತಾರೋಹಿಗಳ ರಕ್ಷಣಾ ಕಾರ್ಯ ಪ್ರಗತಿಯಲ್ಲಿ! Video

ಪರ್ವತ ಪ್ರದೇಶವನ್ನು ತಲುಪುವ ಹಾದಿಯೂ ಹಿಮದಿಂದ ಮುಚ್ಚಿದ್ದು, ತೆರವಿಗೆ ನೂರಾರು ಸ್ಥಳೀಯರು ಮತ್ತು ರಕ್ಷಣಾ ತಂಡಗಳು ಕಾರ್ಯಾಚರಣೆಯಲ್ಲಿ ತೊಡಗಿವೆ. ಈಗಾಗಲೇ ಹಲವು ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ
1,000 trekkers in the Karma valley near Mount Everest's eastern face in Tibet.
ಮೌಂಟ್‌ ಎವರೆಸ್ಟ್‌ನಲ್ಲಿ ಹಿಮಪಾತ
Updated on

ಟಿಬೆಟ್: ಜಗತ್ತಿನ ಅತಿ ಎತ್ತರದ ಪರ್ವತ ಮೌಂಟ್‌ ಎವರೆಸ್ಟ್‌ನಲ್ಲಿ ತೀವ್ರ ಹಿಮಪಾತವಾದ ಕಾರಣ ಟಿಬೆಟಿಯನ್‌ ಇಳಿಜಾರಿನ ಶಿಬಿರಗಳಲ್ಲಿ ಸುಮಾರು ಒಂದು ಸಾವಿರ ಪರ್ವತಾರೋಹಿಗಳು ಸಿಲುಕಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪರ್ವತ ಪ್ರದೇಶವನ್ನು ತಲುಪುವ ಹಾದಿಯೂ ಹಿಮದಿಂದ ಮುಚ್ಚಿದ್ದು, ತೆರವಿಗೆ ನೂರಾರು ಸ್ಥಳೀಯರು ಮತ್ತು ರಕ್ಷಣಾ ತಂಡಗಳು ಕಾರ್ಯಾಚರಣೆಯಲ್ಲಿ ತೊಡಗಿವೆ. ಈಗಾಗಲೇ ಹಲವು ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ ಎಂದು ಸ್ಥಳೀಯ ಮಾಧ್ಯಮದ ವರದಿ ಉಲ್ಲೇಖಿಸಿ ಬಿಬಿಸಿ ವರದಿ ತಿಳಿಸಿದೆ.

ಪರ್ವತಾರೋಹಿಗಳ ನೆಚ್ಚಿನ ಪ್ರದೇಶವಾದ ಟಿಬೆಟ್‌ನ ಮೌಂಟ್ ಎವರೆಸ್ಟ್‌ನ ಪೂರ್ವ ಇಳಿಜಾರುಗಳಲ್ಲಿ ಶುಕ್ರವಾರ ಸಂಜೆಯಿಂದ ಭಾರಿ ಹಿಮಪಾತ ಪ್ರಾರಂಭವಾಗಿದೆ. 4,900 ಮೀಟರ್ (16,000 ಅಡಿ) ಗಿಂತ ಹೆಚ್ಚು ಎತ್ತರದಲ್ಲಿರುವ ಪ್ರದೇಶದ ಪ್ರವೇಶ ಮಾರ್ಗಗಳನ್ನು ತೆರವುಗೊಳಿಸಲು ನೂರಾರು ಸ್ಥಳೀಯ ಗ್ರಾಮಸ್ಥರು ಮತ್ತು ತುರ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಸ್ಥಳೀಯ ವರದಿಗಳ ಪ್ರಕಾರ, ಹತ್ತಿರದ ಕುಡಾಂಗ್ ಪಟ್ಟಣದಲ್ಲಿ ಸುಮಾರು 350 ಮಂದಿಯನ್ನು ಇಲ್ಲಿಯವರೆಗೆ ರಕ್ಷಿಸಲಾಗಿದೆ ಮತ್ತು ಸುರಕ್ಷಿತ ಸ್ಥಳಕ್ಕೆ ತರಲಾಗಿದೆ. ಟಿಬೆಟ್‌ನ ಬ್ಲೂ ಸ್ಕೈ ತಂಡದ ಬೆಂಬಲದೊಂದಿಗೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಹವಾಮಾನ ವೈಪರೀತ್ಯದ ಹಿನ್ನೆಲೆ ಎವರೆಸ್ಟ್‌ ಪರ್ವತಾರೋಹಣಕ್ಕೆ ಟಿಕೆಟ್‌ ಕಾಯ್ದಿರಿಸುವಿಕೆಯನ್ನೂ ಸ್ಥಗಿತಗೊಳಿಸಲಾಗಿದೆ. ನೆರೆಯ ನೇಪಾಳದಲ್ಲೂ ಭಾರಿ ಮಳೆ ಸುರಿಯುತ್ತಿದ್ದು, ಈಗಾಗಲೇ 52 ಮಂದಿ ಮೃತಪಟ್ಟಿದ್ದು ಹಲವಾರು ಸೇತುವೆಗಳು ಕೊಚ್ಚಿಹೋಗಿವೆ ಎಂದು ವರದಿಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com