
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ತಮ್ಮ ಹಲವಾರು ಡೀಪ್‌ಫೇಕ್ ವಿಡಿಯೋಗಳನ್ನು ನೋಡಿರುವುದಾಗಿ ಹೇಳಿಕೊಂಡಿದ್ದು, ಜನರ ನಂಬಿಕೆ ಉಳಿಸಿಕೊಳ್ಳಲು ಸೈಬರ್ ಭದ್ರತೆ ಬಲಪಡಿಸುವಂತೆ ಕರೆ ನೀಡಿದ್ದಾರೆ.
ಮುಂಬೈನಲ್ಲಿ ನಡೆದ ವಾರ್ಷಿಕ ಗ್ಲೋಬಲ್ ಫಿನ್‌ಟೆಕ್ ಫೆಸ್ಟ್‌ನಲ್ಲಿ ಮಾತನಾಡಿದ ಸೀತಾರಾಮನ್ ಅವರು, ಕೃತಕ ಬುದ್ಧಿಮತ್ತೆ, ಹಣಕಾಸು, ಆಡಳಿತ ಮತ್ತು ದೈನಂದಿನ ಜೀವನವನ್ನು ಪರಿವರ್ತಿಸುತ್ತಿದೆ ಎಂದು ಹೇಳಿದರು.
"ನಾವೀನ್ಯತೆಗೆ ಶಕ್ತಿ ತುಂಬುವ ಅದೇ ಸಾಧನಗಳನ್ನು ವಂಚನೆಗಾಗಿ ಅಸ್ತ್ರವಾಗಿ ಬಳಸಿಕೊಳ್ಳಬಹುದು. ನಾನು ಅದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುತ್ತಿಲ್ಲ. ಆದರೆ ನನ್ನ ಹಲವಾರು ಡೀಪ್‌ಫೇಕ್ ವಿಡಿಯೋಗಳನ್ನು ಆನ್‌ಲೈನ್‌ನಲ್ಲಿ ಪ್ರಸಾರ ಮಾಡಲಾಗುತ್ತಿದೆ. ಈ ಮೂಲಕ ನಾಗರಿಕರನ್ನು ದಾರಿ ತಪ್ಪಿಸಲು ಮತ್ತು ಸತ್ಯಗಳನ್ನು ವಿರೂಪಗೊಳಿಸಲು ಕುಶಲತೆಯಿಂದ ಬಳಸುವುದನ್ನು ನಾನು ನೋಡಿದ್ದೇನೆ ಎಂದು" ಎಂದು ಅವರು ಹೇಳಿದ್ದಾರೆ.
ಅಂತವರ ವಿರುದ್ಧ ನಾವು ನಮ್ಮ ರಕ್ಷಣೆಯನ್ನು ಹೆಚ್ಚಿಸಬೇಕಾದ "ತುರ್ತು" ಅಗತ್ಯ ಇದೆ. "ಹೊಸ ಪೀಳಿಗೆಯ ವಂಚನೆಯು ಫೈರ್‌ವಾಲ್‌ಗಳನ್ನು ಉಲ್ಲಂಘಿಸುವ ಬಗ್ಗೆ ಅಲ್ಲ. ಇದು ನಂಬಿಕೆಯ ಪ್ರಶ್ನೆ. ಫಿನ್‌ಟೆಕ್ ನಾವೀನ್ಯಕಾರರು, ಹೂಡಿಕೆದಾರರು ಮತ್ತು ನಿಯಂತ್ರಕರು ಸೇರಿದಂತೆ ಇಡೀ ಪರಿಸರ ವ್ಯವಸ್ಥೆಯು ಈ ವಿಷಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದರು.
Advertisement