
ಚಂಡೀಗಢ: ದಲಿತ ಐಪಿಎಸ್ ಅಧಿಕಾರಿ ವೈ.ಪುರಣ್ ಕುಮಾರ್ ಅವರ ಸೂಸೈಡ್ ನೋಟಿನಲ್ಲಿ ಉಲ್ಲೇಖಿಸಿರುವ ಹಿರಿಯ ಅಧಿಕಾರಿಗಳ ವಿರುದ್ಧ ಎಫ್ ಐಆರ್ ದಾಖಲಿಸಿ, ಬಂಧಿಸಬೇಕು ಎಂದು ಹಿರಿಯ ಐಎಎಸ್ ಅಧಿಕಾರಿಯಾಗಿರುವ ಮೃತನ ಪತಿ ಅಮ್ನೀತ್ ಪಿ.ಕುಮಾರ್ ಗುರುವಾರ ಹರಿಯಾಣ ಸಿಎಂ ನಯಾಬ್ ಸಿಂಗ್ ಸೈನಿ ಅವರನ್ನು ಒತ್ತಾಯಿಸಿದ್ದಾರೆ. ತನ್ನ ಕುಟುಂಬಕ್ಕೆ ಭದ್ರತೆ ನೀಡುವಂತೆಯೂ ಅವರು ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿ ಸೈನಿ ಗುರುವಾರ ಅಮ್ನೀತ್ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಹರಿಯಾಣದ ವಿದೇಶಾಂಗ ಸಹಕಾರ ಇಲಾಖೆಯ ಆಯುಕ್ತರು ಹಾಗೂ ಕಾರ್ಯದರ್ಶಿ ಆಗಿರುವ ಅಮ್ನೀತ್, ಜಪಾನ್ ಗೆ ಭೇಟಿ ನೀಡಿದ್ದ ಸಿಎಂ ನೇತೃತ್ವದ ಅಧಿಕೃತ ನಿಯೋಗದ ಭಾಗವಾಗಿದ್ದರು. ಪತಿಯ ಸಾವಿನ ಸುದ್ದಿ ತಿಳಿದ ಅವರು ಬುಧವಾರ ಭಾರತಕ್ಕೆ ಮರಳಿದ್ದರು.
ಪತಿಯ ಮರಣದ 48 ಗಂಟೆಗಳ ನಂತರ "ಗಂಭೀರ ಅನ್ಯಾಯ" ಮತ್ತು "ಆಡಳಿತಾತ್ಮಕ ನಿಷ್ಕ್ರಿಯತೆ" ಯ ಬಗ್ಗೆ ಸಿಎಂಗೆ ಬರೆದಿರುವ ಗೌಪ್ಯ ಪತ್ರದಲ್ಲಿ ಅಮ್ನೀತ್ ದುಃಖ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪುರಣ್ ಕುಮಾರ್ ಒಂಬತ್ತು ಪುಟಗಳ ಸೂಸೈಡ್ ನೋಟ್‌ನಲ್ಲಿ ಕಿರುಕುಳ ಮತ್ತು ಮಾನಸಿಕ ಹಿಂಸೆಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಹೆಸರಿಸಿದ್ದಾರೆ ಎನ್ನಲಾಗಿದೆ.
ರಾಷ್ಟ್ರಪತಿ ಪದಕ ಪುರಸ್ಕೃತರಾದ ತಮ್ಮ ಪತಿಯನ್ನು ಕಳೆದುಕೊಂಡಿದ್ದಕ್ಕಾಗಿ ಅಮ್ನೀತ್ ಸಿಎಂಗೆ ಬರೆದಿರುವ ಪತ್ರದಲ್ಲಿ ತೀವ್ರ ದು:ಖವನ್ನು ತೋಡಿಕೊಂಡಿದ್ದಾರೆ. ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಅಪರಾಧಗಳನ್ನು ಉಲ್ಲೇಖಿಸಿದ್ದು,
ಸೂಸೈಡ್ ನೋಟ್ ನ್ನು ಸಾಯುವ ಘೋಷಣೆ ಎಂದು ಪರಿಗಣಿಸಬೇಕು. ಅದರಲ್ಲಿ ಉಲ್ಲೇಖಿಸಿರುವ ಎಲ್ಲ ವ್ಯಕ್ತಿಗಳ ವಿರುದ್ಧ ತಕ್ಷಣವೇ ಎಫ್‌ಐಆರ್ ದಾಖಲಿಸಬೇಕು, ಸಾಕ್ಷ್ಯಾಧಾರಗಳನ್ನು ಹಾಳು ಮಾಡುವುದನ್ನು ತಡೆಯಲು ಆರೋಪಿಗಳನ್ನು ಸೇವೆಯಿಂದ ಅಮಾನತುಗೊಳಿಸಬೇಕು ಮತ್ತು ಬಂಧಿಸಬೇಕು ಎಂದು ಸಿಎಂಗೆ ಅಮ್ನೀತ್ ಒತ್ತಾಯಿಸಿದ್ದಾರೆ.
ಈ ಮಧ್ಯೆ ಕುಮಾರ್ ಅವರ ಮೃತ ದೇಹವನ್ನು ಸರ್ಕಾರಿ ವೈದ್ಯಕೀಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸೆಕ್ಟರ್ 16 ರ ಶವಾಗಾರದಲ್ಲಿ ಇರಿಸಲಾಗಿದೆ. ಕುಟುಂಬದಿಂದ ಕಾರ್ಯವಿಧಾನದ ಅನುಮತಿಯನ್ನು ಪಡೆದ ನಂತರ ವೈದ್ಯರ ಮಂಡಳಿಯಿಂದ ಶವಪರೀಕ್ಷೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement