ಹಿರಿಯ ಪತ್ರಕರ್ತ TJS George ನಿಧನ: ಪ್ರಧಾನಿ ಮೋದಿ ಸಂತಾಪ

ಟಿಜೆಎಸ್ ಎಂಬ ಸಂಕ್ಷಿಪ್ತ ರೂಪದಿಂದ ಜನಪ್ರಿಯರಾಗಿದ್ದ ಮತ್ತು ಭಾರತೀಯ ಪತ್ರಿಕೋದ್ಯಮದ ಭೀಷ್ಮ ಎಂದು ಪರಿಗಣಿಸಲ್ಪಟ್ಟಿದ್ದ ಜಾರ್ಜ್, ಮೊನ್ನೆ ಅಕ್ಟೋಬರ್ 3 ರಂದು ಬೆಂಗಳೂರಿನಲ್ಲಿ ತಮ್ಮ 97 ನೇ ವಯಸ್ಸಿನಲ್ಲಿ ನಿಧನರಾದರು.
TJS George
ಟಿಜೆಎಸ್ ಜಾರ್ಜ್
Updated on

ಬೆಂಗಳೂರು/ನವದೆಹಲಿ: ಖ್ಯಾತ ಪತ್ರಕರ್ತ ಮತ್ತು ಅಂಕಣಕಾರ ಥೈಲ್ ಜೋಸೆಫ್ ಸೋನಿ ಜಾರ್ಜ್(TJS George) ಅವರ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

ಟಿಜೆಎಸ್ ಅವರನ್ನು ಅವರ ಸಮಕಾಲೀನರು, ಹಿರಿ-ಕಿರಿಯ ಸಹೋದ್ಯೋಗಿಗಳು ಅವರ ಕೆಲಸದ ಗುರುತಿನಿಂದ ಗೌರವಿಸುತ್ತಿದ್ದರು. ಅವರ ಪುಸ್ತಕಗಳು ಮತ್ತು ಪತ್ರಿಕೋದ್ಯಮ ಕೆಲಸದ ಪರಂಪರೆಯು ಕಿರಿಯ ಪತ್ರಕರ್ತರಿಗೆ ದೃಷ್ಟಿಕೋನ ಮತ್ತು ಮಾರ್ಗದರ್ಶನವನ್ನು ನೀಡುತ್ತಲೇ ಇರುತ್ತದೆ ಎಂದು ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಹೇಳಿದ್ದಾರೆ.

ಟಿಜೆಎಸ್ ಎಂಬ ಸಂಕ್ಷಿಪ್ತ ರೂಪದಿಂದ ಜನಪ್ರಿಯರಾಗಿದ್ದ ಮತ್ತು ಭಾರತೀಯ ಪತ್ರಿಕೋದ್ಯಮದ ಭೀಷ್ಮ ಎಂದು ಪರಿಗಣಿಸಲ್ಪಟ್ಟಿದ್ದ ಜಾರ್ಜ್, ಮೊನ್ನೆ ಅಕ್ಟೋಬರ್ 3 ರಂದು ಬೆಂಗಳೂರಿನಲ್ಲಿ ತಮ್ಮ 97 ನೇ ವಯಸ್ಸಿನಲ್ಲಿ ನಿಧನರಾದರು. ಅವರ ಅಂತ್ಯಕ್ರಿಯೆಯನ್ನು ಅಕ್ಟೋಬರ್ 5 ರಂದು ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಯಿತು.

ಪ್ರಧಾನಿ ಮೋದಿ ಬರೆದ ಸಂತಾಪ ಪತ್ರ
ಪ್ರಧಾನಿ ಮೋದಿ ಬರೆದ ಸಂತಾಪ ಪತ್ರ

ಜಾರ್ಜ್ ಅವರ ಪುತ್ರ, ಬರಹಗಾರರೂ ಆಗಿರುವ ಜೀತ್ ಥೈಲ್ ಅವರನ್ನು ಉದ್ದೇಶಿಸಿ ಅಕ್ಟೋಬರ್ 6 ರಂದು ಬರೆದ ತಮ್ಮ ಶೋಕ ಪತ್ರದಲ್ಲಿ ನರೇಂದ್ರ ಮೋದಿಯವರು, ಥೈಲ್ ಜಾಕೋಬ್ ಸೋನಿ ಜಾರ್ಜ್ ಅವರ ನಿಧನದ ಸುದ್ದಿ ಕೇಳಿ ತೀವ್ರ ದುಃಖಿತನಾಗಿದ್ದೇನೆ. ಪತ್ರಿಕೋದ್ಯಮ ವಲಯದಲ್ಲಿ ಟಿಜೆಎಸ್ ಎಂದು ಪರಿಚಿತರಾಗಿದ್ದ ಅವರನ್ನು ಪತ್ರಕರ್ತ ಮತ್ತು ಸಂಪಾದಕರಾಗಿ ಅವರ ಕೆಲಸಕ್ಕಾಗಿ ಅವರ ಗೆಳೆಯರು ಮತ್ತು ಕಿರಿಯ ಸಹೋದ್ಯೋಗಿಗಳು ಗೌರವಿಸುತ್ತಿದ್ದರು ಎಂದು ಬರೆದಿದ್ದಾರೆ.

ಮಗುವಿನ ಜೀವನದಲ್ಲಿ ತಂದೆಯೇ ಅತ್ಯಂತ ಬಲವಾದ ಆಧಾರಸ್ತಂಭ. ಮತ್ತು ಜಾರ್ಜ್ ಅವರೊಡನೆ ಕಳೆದ ಇಷ್ಟು ವರ್ಷಗಳು ನಿಮಗೆ ಆಳವಾದ ರಕ್ಷಣೆಯ ಭಾವನೆಯನ್ನು ತುಂಬುತ್ತದೆ. ಜೀವನದ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಲು ಶಕ್ತಿ ಮತ್ತು ಧೈರ್ಯವನ್ನು ನೀಡುತ್ತದೆ. ಅವರೊಂದಿಗೆ ಕಳೆದ ಸಮಯದ ನೆನಪುಗಳು ಈ ಕಷ್ಟದ ಸಮಯದಲ್ಲಿ ನಿಮಗೆ ಸಾಂತ್ವನ ನೀಡುತ್ತದೆ ಎಂದು ಬರೆದಿದ್ದಾರೆ.

ತಮ್ಮ ಸಂತಾಪ ಸೂಚಿಸಿದ ಮೋದಿ, ಈ ದುಃಖವನ್ನು ಸಹಿಸಿಕೊಳ್ಳುವ ಶಕ್ತಿ ಮತ್ತು ಧೈರ್ಯವನ್ನು ಕುಟುಂಬವು ಸಂಗ್ರಹಿಸಲಿ. ಅಗಲಿದ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದ್ದಾರೆ.

TJS George
ಹಿರಿಯ ಪತ್ರಕರ್ತ ಟಿಜೆಎಸ್ ಜಾರ್ಜ್ ಪಂಚಭೂತಗಳಲ್ಲಿ ಲೀನ; ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com