ಗಾಯಕ ಜುಬೀನ್ ಗಾರ್ಗ್ ಸಾವು ಪ್ರಕರಣ: ಇಬ್ಬರು ವೈಯಕ್ತಿಕ ಭದ್ರತಾ ಸಿಬ್ಬಂದಿ ಬಂಧಿಸಿದ SIT

ಗಾರ್ಗ್ ಅವರ ವೈಯಕ್ತಿಕ ಭದ್ರತಾ ಅಧಿಕಾರಿಗಳಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದ ನಂದೇಶ್ವರ್ ಬೋರಾ ಮತ್ತು ಪರೇಶ್ ಬೈಶ್ಯ ಅವರನ್ನು SIT ವಶಕ್ಕೆ ತೆಗೆದುಕೊಂಡಿದೆ.
 Zubeen Garg
ಜುಬೀನ್ ಗಾರ್ಗ್
Updated on

ಸಿಂಗಾಪುರದಲ್ಲಿ ದಿವಂಗತ ಗಾಯಕ ಜುಬೀನ್ ಗಾರ್ಗ್ ನಿಧನಕ್ಕೆ ಸಂಬಂಧಿಸಿದಂತೆ ಅಸ್ಸಾಂ ಪೊಲೀಸರ ಅಪರಾಧ ತನಿಖಾ ವಿಭಾಗದ ವಿಶೇಷ ತನಿಖಾ ತಂಡ ಅವರ ಇಬ್ಬರು ವೈಯಕ್ತಿಕ ಭದ್ರತಾ ಅಧಿಕಾರಿಗಳನ್ನು ಬಂಧಿಸಿದೆ.

ಖ್ಯಾತ ಗಾಯಕ ಜುಬೀನ್ ಗಾರ್ಗ್ ಸೆಪ್ಟೆಂಬರ್ 19 ರಂದು ಸಿಂಗಾಪುರದಲ್ಲಿ ನಿಧನರಾದರು, ಈಶಾನ್ಯ ಭಾರತ ಉತ್ಸವದಲ್ಲಿ ಪ್ರದರ್ಶನ ನೀಡಲು ನಿಗದಿಪಡಿಸಲಾಗಿದ್ದ ಒಂದು ದಿನ ಮೊದಲು. ಗಾರ್ಗ್ ಅವರ ವೈಯಕ್ತಿಕ ಭದ್ರತಾ ಅಧಿಕಾರಿಗಳಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದ ನಂದೇಶ್ವರ್ ಬೋರಾ ಮತ್ತು ಪರೇಶ್ ಬೈಶ್ಯ ಅವರನ್ನು SIT ವಶಕ್ಕೆ ತೆಗೆದುಕೊಂಡಿದೆ.

ಸಿಂಗಾಪುರದಲ್ಲಿ ಸಾವಿಗೀಡಾದ ಅಸ್ಸಾಂನ ಖ್ಯಾತ ಗಾಯಕ ಜುಬೀನ್ ಗಾರ್ಗ್ ಸಾವು ಪ್ರಕರಣ ದಿನಕ್ಕೊಂದು ರೋಚಕ ತಿರುವು ಪಡೆಯುತ್ತಿದ್ದು, ಸೋದರ ಸಂಬಂಧಿ, ಸಹ ಗಾಯಕರು, ಬ್ಯಾಂಡ್‌ಮೇಟ್‌ಗಳು, ಕಾರ್ಯಕ್ರಮ ಸಂಘಟಕರ ಬಂಧನದ ನಂತರ ಈಗ ಜುಬೀನ್ ಗಾರ್ಗ್ ಅವರ ಭದ್ರತಾ ಸಿಬ್ಬಂದಿಯನ್ನು ಸಹ ಅಸ್ಸಾಂನ ವಿಶೇಷ ತನಿಖಾ ತಂಡ ಬಂಧಿಸಿದೆ.

ಜುಬೀನ್ ಗಾರ್ಗ್‌ ಸಾವಿನ ಬಗ್ಗೆ ವಿಚಾರಣೆ ನಡೆಸುತ್ತಿರುವ ತನಿಖಾ ತಂಡ ನಿನ್ನೆಯಷ್ಟೆ ಜುಬೀನ್ ಅವರ ಸೋದರ ಸಂಬಂಧಿ ಸಂದೀಪನ್ ಗಾರ್ಗ್‌ನನ್ನು ಬಂಧಿಸಿದ್ದರು. ಸಂದೀಪನ್ ಅವರು ಅಸ್ಸಾಂ ಪೊಲೀಸ್ ಸರ್ವಿಸ್‌ನಲ್ಲಿ ಉದ್ಯೋಗದಲ್ಲಿದ್ದು, ಕಮ್ರಾಪ್‌ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದರು.

 Zubeen Garg
ಗಾಯಕ ಜುಬೀನ್ ಜತೆ ದೋಣಿಯಲ್ಲಿದ್ದವರು ತನಿಖೆಗೆ ಗೈರಾದರೆ ಕಠಿಣ ಕ್ರಮ: ಅಸ್ಸಾಂ ಸಿಎಂ

ಜುಬೀನ್ ಗಾರ್ಗ್‌ ಸಾವಿನ ಬಗ್ಗೆ ವಿಚಾರಣೆ ನಡೆಸುತ್ತಿರುವ ತನಿಖಾ ತಂಡ ನಿನ್ನೆಯಷ್ಟೆ ಜುಬೀನ್ ಅವರ ಸೋದರ ಸಂಬಂಧಿ ಸಂದೀಪನ್ ಗಾರ್ಗ್‌ನನ್ನು ಬಂಧಿಸಿದ್ದರು. ಸಂದೀಪನ್ ಅವರು ಅಸ್ಸಾಂ ಪೊಲೀಸ್ ಸರ್ವಿಸ್‌ನಲ್ಲಿ ಉದ್ಯೋಗದಲ್ಲಿದ್ದು, ಕಮ್ರಾಪ್‌ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದರು.

ಇಬ್ಬರನ್ನೂ ಇಂದು SIT/CID ತಂಡ ಬಂಧಿಸಿದೆ. ಬಂಧಿತ ವ್ಯಕ್ತಿಗಳನ್ನು ವಿಚಾರಣೆಗಾಗಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (CJM) ನ್ಯಾಯಾಲಯದ ಮುಂದೆ ಕರೆತರಲಾಗಿದೆ" ಎಂದು ಹೇಳಿದರು.

ತನಿಖೆಯು ಈ ಇಬ್ಬರು ವ್ಯಕ್ತಿಗಳೊಂದಿಗೆ 1 ಕೋಟಿ ರೂ.ಗೂ ಹೆಚ್ಚು ಮೊತ್ತದ ಮಹತ್ವದ ಹಣಕಾಸಿನ ವಹಿವಾಟುಗಳನ್ನು ಬಹಿರಂಗಪಡಿಸಿದೆ, ಬೋರಾ ಅವರ ಖಾತೆಗೆ 70 ಲಕ್ಷ ರೂ. ಮತ್ತು ಬೈಶ್ಯ ಅವರ ಖಾತೆಯಲ್ಲಿ ಸುಮಾರು 40-45 ಲಕ್ಷ ರೂ. ಜಮಾ ಮಾಡಲಾಗಿದೆ.

ಈ ಪ್ರಕರಣದಲ್ಲಿಈಗಾಗಲೇ ಹಲವರನ್ನು ಬಂಧಿಸಲಾಗಿದೆ. ಜುಬೀನ್ ಗಾರ್ಗ್ ಅವರ ಮ್ಯಾನೇಜರ್ ಸಿದ್ಧಾರ್ಥ್‌ ಶರ್ಮಾ, ಸಿಂಗಾಪುರದಲ್ಲಿ ಈಶಾನ್ಯ ಭಾರತ ಉತ್ಸವ ಆಯೋಜಿಸಿದ್ದ ಸಂಘಟಕ ಶ್ಯಾಮಕಾನು ಮಹಂತಾ ಅವರನ್ನು ಎರಡು ವಾರಗಳ ಹಿಂದೆಯೇ ದೆಹಲಿಯಲ್ಲಿ ತನಿಖಾ ತಂಡ ಬಂಧಿಸಿದೆ. ಇವರ ಬಂಧನದ ನಂತರ ಜುಬೀನ್‌ ಗಾರ್ಗ್ ಅವರ ಬ್ಯಾಂಡ್‌ ಮೇಟ್ ಗಾಯಕ ಶೇಕರ್ ಜ್ಯೋತಿ ಗೋಸ್ವಾಮಿ ಹಾಗೂ ಸಹ ಗಾಯಕ ಅಮೃತ್‌ಪ್ರವಾ ಮಹಂತಾ ಎಂಬುವವರನ್ನು ಪೊಲೀಸರು ಬಂಧಿಸಿದ್ದರು. ಈಗ ವೈಯಕ್ತಿಕ ಭದ್ರತಾ ಸಿಬ್ಬಂದಿಯನ್ನು ಕೂಡ ಬಂಧಿಸಿದ್ದು, ಹೀಗಾಗಿ ಈ ಪ್ರಕರಣದಲ್ಲಿ ಬಂಧಿತರಾದವರ ಸಂಖ್ಯೆ 7ಕ್ಕೆ ಏರಿಕೆ ಆಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com