
ನವದೆಹಲಿ: ಆಪರೇಷನ್ ಸಿಂಧೂರ್ ಸಮಯದಲ್ಲಿ ಪಾಕಿಸ್ತಾನ ಗಮನಾರ್ಹ ಮಿಲಿಟರಿ ನಷ್ಟವನ್ನು ಅನುಭವಿಸಿತು, ನಿಯಂತ್ರಣ ರೇಖೆಯಲ್ಲಿ (LoC) 100 ಕ್ಕೂ ಹೆಚ್ಚು ಸೈನಿಕರು ಸಾವನ್ನಪ್ಪಿದರು ಎಂದು ಭಾರತೀಯ ಸೇನೆಯ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕ (DGMO) ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಮಂಗಳವಾರ ಹೇಳಿದ್ದಾರೆ. ಸಾವುನೋವುಗಳಿಗೆ ಸಾಕ್ಷಿಯಾಗಿ ಪಾಕಿಸ್ತಾನದ ಮರಣೋತ್ತರ ಮಿಲಿಟರಿ ಪ್ರಶಸ್ತಿಗಳ ಪಟ್ಟಿಯನ್ನು ಜನರಲ್ ಉಲ್ಲೇಖಿಸಿದ್ದಾರೆ.
ಸೈನಿಕರ ನಷ್ಟಗಳ ಜೊತೆಗೆ, 4 ದಿನಗಳ ಸಂಘರ್ಷದ ಸಮಯದಲ್ಲಿ ಪಾಕಿಸ್ತಾನ ಕನಿಷ್ಠ 12 ವಿಮಾನಗಳನ್ನು ಕಳೆದುಕೊಂಡಿದೆ ಎಂದು ಲೆಫ್ಟಿನೆಂಟ್ ಜನರಲ್ ಘಾಯ್ ದೃಢಪಡಿಸಿದ್ದಾರೆ. ಇದು ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ ಪಿ ಸಿಂಗ್ ಹಂಚಿಕೊಂಡ ಹಿಂದಿನ ವಿವರಗಳನ್ನು ಪ್ರತಿಧ್ವನಿಸಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತ ಪಾಕಿಸ್ತಾನ ನಿಯಂತ್ರಿತ ಪ್ರದೇಶದಲ್ಲಿ 9 ಭಯೋತ್ಪಾದಕ ಮೂಲಸೌಕರ್ಯ ತಾಣಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂಧೂರ್ ನ್ನು ಪ್ರಾರಂಭಿಸಿತ್ತು. ಆ ಬಳಿಕ ಮೇ 7-10 ರಂದು ಯುದ್ಧದ ವಾತಾವರಣ ಉಂಟಾಗಿತ್ತು.
ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ಮೀರಿ ದಾಳಿ ನಡೆಸುವುದು ಭಾರತದ ಆರಂಭಿಕ ಉದ್ದೇಶವಾಗಿರಲಿಲ್ಲವಾದರೂ, ಪಾಕಿಸ್ತಾನ ತಕ್ಷಣವೇ ಗಡಿಯಾಚೆಗಿನ ಗುಂಡಿನ ದಾಳಿಯನ್ನು ನಡೆಸಿತು ಎಂದು ಲೆಫ್ಟಿನೆಂಟ್ ಜನರಲ್ ಘಾಯ್ ಹೇಳಿದರು.
"ನಾವು ಭಯೋತ್ಪಾದಕರನ್ನು ಬೆನ್ನಟ್ಟಿದೆವು, ಗುರಿ ಸಾಧಿಸಿದ ಬಳಿಕ ಅದನ್ನು ಹೆಚ್ಚಿಸುವುದು ನಮ್ಮ ಉದ್ದೇಶವಾಗಿರಲಿಲ್ಲ. ಪಾಕಿಸ್ತಾನದಿಂದ ಗಡಿಯಾಚೆಗಿನ ಗುಂಡಿನ ದಾಳಿಯೂ ನಡೆಯಿತು" ಎಂದು ಘಾಯ್ ಹೇಳಿದ್ದಾರೆ.
"ಆಗಸ್ಟ್ 14 ರಂದು ಪಾಕಿಸ್ತಾನ ತಮ್ಮ ಪ್ರಶಸ್ತಿಗಳ ಪಟ್ಟಿಯನ್ನು ತಿಳಿಯದೆಯೇ ಬಿಡುಗಡೆ ಮಾಡಿರಬಹುದು ಮತ್ತು ಅವರು ನೀಡಿದ ಮರಣೋತ್ತರ ಪ್ರಶಸ್ತಿಗಳ ಸಂಖ್ಯೆ ಈಗ ಎಲ್‌ಒಸಿಯಲ್ಲಿ ಅವರ ಸಾವುನೋವುಗಳು 100 ಕ್ಕಿಂತ ಹೆಚ್ಚಿವೆ ಎಂದು ನಮಗೆ ಸೂಚಿಸುತ್ತದೆ" ಎಂದು ಲೆಫ್ಟಿನೆಂಟ್ ಜನರಲ್ ಘಾಯ್ ಹೇಳಿದ್ದಾರೆ.
ಮಿಲಿಟರಿ ಮಾತುಕತೆಗಳ ನಂತರವೂ "ವಿವಿಧ ಡ್ರೋನ್‌ಗಳನ್ನು" ಉಡಾಯಿಸಿದ್ದರೂ, ಭಾರತದ ವಿರುದ್ಧ ಡ್ರೋನ್‌ಗಳನ್ನು ಬಳಸುವ ಪಾಕಿಸ್ತಾನದ ಪ್ರಯತ್ನಗಳು "ದಯನೀಯ ವೈಫಲ್ಯ" ಕಂಡವು ಎಂದು ಡಿಜಿಎಂಒ ಹೇಳಿದ್ದಾರೆ. ಈ ವೈಫಲ್ಯ, ಮೇ 9-10 ರ ರಾತ್ರಿ ಪಾಕಿಸ್ತಾನಿ ಮಿಲಿಟರಿ ಸ್ಥಾಪನೆಗಳ ಮೇಲೆ ಭಾರತೀಯ ವಾಯುಪಡೆಯ (ಐಎಎಫ್) ನಿಖರ ದಾಳಿಗೆ ಕಾರಣವಾಯಿತು ಎಂದು ಅವರು ಹೇಳಿದ್ದಾರೆ.
"ನಾವು ಅವರ 11 ವಾಯುನೆಲೆಗಳನ್ನು ಹೊಡೆದಿದ್ದೇವೆ, ಈ ದಾಳಿಗಳು ಎಂಟು ವಾಯುನೆಲೆಗಳು, ಮೂರು ಹ್ಯಾಂಗರ್‌ಗಳು ಮತ್ತು ನಾಲ್ಕು ರಾಡಾರ್‌ಗಳನ್ನು ಹಾನಿಗೊಳಿಸಿದವು, ನೆಲದ ಮೇಲಿನ ಪಾಕಿಸ್ತಾನಿ ವಾಯು ಆಸ್ತಿಗಳನ್ನು ನಾಶಪಡಿಸಿದವು ಎಂದು ಘಾಯ್ ತಿಳಿಸಿದ್ದಾರೆ.
ಲೆಫ್ಟಿನೆಂಟ್ ಜನರಲ್ ಘಾಯ್ ಪ್ರಕಾರ, ಹಾನಿಗಳ ಪೈಕಿ ಸಿ -130 ವರ್ಗದ ಸಾರಿಗೆ ವಿಮಾನ, ಒಂದು ವಾಯುಗಾಮಿ ಆರಂಭಿಕ ಎಚ್ಚರಿಕೆ ಮತ್ತು ನಿಯಂತ್ರಣ (ಎಇಡಬ್ಲ್ಯೂ ಮತ್ತು ಸಿ) ವೇದಿಕೆ ಮತ್ತು ನಾಲ್ಕರಿಂದ ಐದು ಯುದ್ಧ ವಿಮಾನಗಳು ಸೇರಿವೆ.
"ವಿಶ್ವದ ಅತಿ ಉದ್ದದ ನೆಲದಿಂದ ಆಕಾಶಕ್ಕೆ ನಡೆದ ದಾಳಿ 300 ಕಿಲೋಮೀಟರ್‌ಗಳಿಗಿಂತ ಹೆಚ್ಚು ದೂರದಲ್ಲಿತ್ತು ಮತ್ತು ಐದು ಹೈಟೆಕ್ ಯುದ್ಧವಿಮಾನಗಳನ್ನು (ಹೊಡೆಯಲಾಯಿತು) ಎಂದು ನಮಗೆ ಈಗ ತಿಳಿದಿದೆ." ಘಾಯ್ ಮಾಹಿತಿ ಹಂಚಿಕೊಂಡಿದ್ದಾರೆ.
Advertisement