
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ಬುಧವಾರ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.
ಕಣಿವೆಯ ಬುದ್ಗಮ್ ಕ್ಷೇತ್ರಕ್ಕೆ ಅಗಾ ಸೈಯದ್ ಮೊಹ್ಸಿನ್ ಮತ್ತು ಜಮ್ಮುವಿನ ನಾಗ್ರೋಟಾ ಸ್ಥಾನದಿಂದ ದೇವಯಾನಿ ರಾಣಾ ಅವರನ್ನು ಬಿಜೆಪಿ ಅಭ್ಯರ್ಥಿಗಳಾಗಿ ಕಣಕ್ಕಿಳಿಸಿದೆ.
ಎರಡು ಕಡೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಬುದ್ಗಮ್ ಕ್ಷೇತ್ರಕ್ಕೆ ರಾಜೀನಾಮೆ ನೀಡಿ ಗಂಡರ್‌ಬಾಲ್ ಸ್ಥಾನವನ್ನು ಉಳಿಸಿಕೊಂಡಿದ್ದರು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಹಾಲಿ ಬಿಜೆಪಿ ಶಾಸಕ ದೇವೇಂದರ್ ಸಿಂಗ್ ರಾಣಾ ಅವರ ನಿಧನರಾದ ನಂತರ ಜಮ್ಮುವಿನ ನಾಗ್ರೋಟಾ ಸ್ಥಾನ ತೆರವಾಗಿತ್ತು. ತೆರವಾಗಿದ್ದ ಈ ಎರಡೂ ಕ್ಷೇತ್ರಗಳಿಗೆ ಈಗ ಚುನಾವಣೆ ನಡೆಯುತ್ತಿದೆ.
ದೇವಯಾನಿ ಅವರು ದೇವೇಂದರ್ ರಾಣಾ ಅವರ ಪುತ್ರಿಯಾಗಿದ್ದು, ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.
2024ರ ವಿಧಾನಸಭಾ ಚುನಾವಣೆಯಲ್ಲಿ, ಬುದ್ಗಮ್ ಕ್ಷೇತ್ರದಲ್ಲಿ ಒಮರ್ ಅಬ್ದುಲ್ಲಾ ಅವರು ಪಿಡಿಪಿಯ ಅಗಾ ಸೈಯದ್ ಮುಂತಜಿರ್ ಮೆಹದಿ ಅವರ ವಿರುದ್ಧ 18,485 ಮತಗಳಿಂದ ಗೆಲುವು ಸಾಧಿಸಿದ್ದರು.
Advertisement