
ನವದೆಹಲಿ: ದೋಹಾದಿಂದ ಹಾಂಗ್‌ಕಾಂಗ್‌ಗೆ ತೆರಳುತ್ತಿದ್ದ ಕತಾರ್ ಏರ್‌ವೇಸ್ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ನಂತರ ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಮಧ್ಯಾಹ್ನ ಸರ್ದಾರ್ ವಲ್ಲಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೂರ್ಣ ಪ್ರಮಾಣದ ತುರ್ತು ಪರಿಸ್ಥಿತಿ ಘೋಷಿಸಲಾಯಿತು.
QR816 ವಿಮಾನ ದೋಹಾದಿಂದ ಇಂದು ಬೆಳಗ್ಗೆ 9.01ಕ್ಕೆ(ಸ್ಥಳೀಯ ಸಮಯ) ಹೊರಟಿತು ಎಂದು ವಿಮಾನ ಟ್ರ್ಯಾಕಿಂಗ್ ಪ್ಲಾಟ್‌ಫಾರ್ಮ್, ಫ್ಲೈಟ್‌ಅವೇರ್ ಹೇಳುತ್ತದೆ. ಮಾರ್ಗ ಮಧ್ಯದಲ್ಲಿ ತಾಂತ್ರಿಕ ದೋಷ ಕಂಡುಬಂದ ನಂತರ, ಅಹಮದಾಬಾದ್‌ನಲ್ಲಿರುವ ವಾಯು ಸಂಚಾರ ನಿಯಂತ್ರಣ ಕೊಠಡಿಗೆ ಸಂಪರ್ಕಿಸಿ ತುರ್ತು ಲ್ಯಾಂಡಿಂಗ್ ಗೆ ಅನುಮತಿ ಕೇಳಲಾಗಿದೆ.
"ದೋಹಾದಿಂದ ಹಾಂಗ್‌ಕಾಂಗ್‌ಗೆ ತೆರಳುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ, ವಿಮಾನ ಇಳಿಯಲು ಅನುವು ಮಾಡಿಕೊಡಲು ಮಧ್ಯಾಹ್ನ 2.12ಕ್ಕೆ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಪೂರ್ಣ ತುರ್ತು ಪರಿಸ್ಥಿತಿ ಘೋಷಿಸಲಾಯಿತು ಎಂದು ಅಹಮದಾಬಾದ್ ವಿಮಾನ ನಿಲ್ದಾಣದ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಮಾನ ಮಧ್ಯಾಹ್ನ 2.32ಕ್ಕೆ ಸುರಕ್ಷಿತವಾಗಿ ಇಳಿಯಿತು ಮತ್ತು ಮಧ್ಯಾಹ್ನ 2.38 ಕ್ಕೆ ಪೂರ್ಣ ತುರ್ತು ಪರಿಸ್ಥಿತಿಯನ್ನು ಹಿಂತೆಗೆದುಕೊಳ್ಳಲಾಯಿತು. ವಿಮಾನ ನಿಲ್ದಾಣದ ಕಾರ್ಯಾಚರಣೆ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ" ಎಂದು ಹೇಳಿದ್ದಾರೆ.
"ಅಕ್ಟೋಬರ್ 14 ರಂದು ದೋಹಾದಿಂದ ಹಾಂಗ್ ಕಾಂಗ್‌ಗೆ ಹೋಗುತ್ತಿದ್ದ QR816 ವಿಮಾನವನ್ನು ತಾಂತ್ರಿಕ ಸಮಸ್ಯೆಯಿಂದಾಗಿ ಅಹಮದಾಬಾದ್‌ಗೆ ತಿರುಗಿಸಲಾಯಿತು. ಈ ಮಾರ್ಗ ಬದಲಾವಣೆ ಪ್ರಮಾಣಿತ ಮುನ್ನೆಚ್ಚರಿಕೆ ಕ್ರಮವಾಗಿತ್ತು ಮತ್ತು ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಯಿತು" ಎಂದು ಕತಾರ್ ಏರ್‌ವೇಸ್ ಪ್ರಕಟಣೆಯಲ್ಲಿ ತಿಳಿಸಿದೆ.
Advertisement