TVK ಮುಖ್ಯಸ್ಥ ನಟ ವಿಜಯ್ ತಡವಾಗಿ ಬಂದಿದ್ದೇ ಕರೂರ್ ಕಾಲ್ತುಳಿತಕ್ಕೆ ಕಾರಣ: ಸಿಎಂ ಸ್ಟಾಲಿನ್

ಈ ವಿಷಯದ ಬಗ್ಗೆ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡ ಸಿಎಂ, ಟಿವಿಕೆ ಸಂಸ್ಥಾಪಕರು ಸಭೆಗೆ ಏಳು ಗಂಟೆ ತಡವಾಗಿ ಬಂದರು.
M K Stalin
ಸಿಎಂ ಎಂ ಕೆ ಸ್ಟಾಲಿನ್
Updated on

ಚೆನ್ನೈ: ಕರೂರ್ ಕಾಲ್ತುಳಿತದ ಘಟನೆ ನಿನ್ನೆ ಬುಧವಾರ ತಮಿಳುನಾಡು ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು, ಸೆಪ್ಟೆಂಬರ್ 27 ರಂದು ವೇಲುಸಾಮಿಪುರಂನಲ್ಲಿ ನಡೆದ ಪಕ್ಷದ ರ್‍ಯಾಲಿಗೆ ನಟ-ರಾಜಕಾರಣಿ ವಿಜಯ್ ಅವರು ತಡವಾಗಿ ಆಗಮಿಸಿದ್ದೇ ಕಾಲ್ತುಳಿತಕ್ಕೆ ಕಾರಣ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕಾರಣ ಎಂದು ಆರೋಪಿಸಿದರು. ವಿರೋಧ ಪಕ್ಷಗಳಾದ ಎಐಎಡಿಎಂಕೆ ಮತ್ತು ಬಿಜೆಪಿ ಸಿಎಂ ಹೇಳಿಕೆಯ ವಿರುದ್ಧ ಸಭಾತ್ಯಾಗ ಮಾಡಿದವು.

ಸಿಎಂ ಸ್ಟಾಲಿನ್ ಆರೋಪವೇನು?

ಈ ವಿಷಯದ ಬಗ್ಗೆ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡ ಸಿಎಂ, ಟಿವಿಕೆ ಸಂಸ್ಥಾಪಕರು ಸಭೆಗೆ ಏಳು ಗಂಟೆ ತಡವಾಗಿ ಬಂದರು. ಕಾಯುತ್ತಿದ್ದ ಜನಸಮೂಹಕ್ಕೆ ನೀರು, ಆಹಾರ ಮತ್ತು ಇತರ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಂಘಟಕರು ಯಾವುದೇ ವ್ಯವಸ್ಥೆ ಮಾಡಲಿಲ್ಲ. ಜನರು ಚದುರಲು ಸಾಧ್ಯವಾಗುವಂತೆ ವಿಜಯ್ ಅವರು ಮೊದಲು ಭಾಷಣ ಮಾಡಬೇಕೆಂಬ ಪೊಲೀಸರ ಮನವಿಯನ್ನು ಸಹ ಕೇಳಲಿಲ್ಲ ಎಂದು ಹೇಳಿದರು.

ಜನಸಂದಣಿಯಿಂದ ಕೆಲವೇ ಮೀಟರ್‌ಗಳ ಮುಂದೆ ವಿಜಯ್ ಅವರ ವಾಹನವನ್ನು ನಿಲ್ಲಿಸುವಂತೆ ಪೊಲೀಸರ ವಿನಂತಿಯನ್ನು ಟಿವಿಕೆ ಸಂಘಟಕರು ನಿರ್ಲಕ್ಷಿಸಿದರು. ವಾಹನವು ಅಕ್ಷಯ ಆಸ್ಪತ್ರೆಯಿಂದ ಸುಮಾರು 30-35 ಮೀಟರ್ ದೂರ ಹೋದಾಗ, ಎರಡೂ ಬದಿಗಳಲ್ಲಿ ದಟ್ಟವಾದ ಜನಸಮೂಹ ಸೇರಿ ಗದ್ದಲಕ್ಕೆ ಕಾರಣವಾಯಿತು.

ಜನರಲ್ಲಿ ಭೀತಿ, ಉಸಿರುಗಟ್ಟುವಿಕೆ, ಮೂರ್ಛೆ ಮತ್ತು ಅವ್ಯವಸ್ಥೆ ಉಂಟಾಯಿತು, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳಲ್ಲಿ, ಅನೇಕರು ಬಿದ್ದು ತುಳಿದು ಮೃತಪಟ್ಟರು ಎಂದು ವಿಜಯ್ ಅವರ ಹೆಸರನ್ನು ಉಲ್ಲೇಖಿಸದೆ ಮುಖ್ಯಮಂತ್ರಿ ಹೇಳಿದರು.

M K Stalin
ಕರೂರ್ ಕಾಲ್ತುಳಿತ ಪ್ರಕರಣ ಸಿಬಿಐಗೆ ವರ್ಗಾಯಿಸಿದ ಸುಪ್ರೀಂ ಕೋರ್ಟ್

ಯಾರನ್ನೂ ದೂಷಿಸುವುದು ನಮ್ಮ ಉದ್ದೇಶವಲ್ಲ, ಆದರೆ ಸತ್ಯ ತಿಳಿಸಬೇಕು

ನಂತರ, ಸಿಎಂ ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿ, ಇಲ್ಲಿ ಯಾರನ್ನೂ ದೂಷಿಸುವುದು ನಮ್ಮ ಉದ್ದೇಶವಲ್ಲ. ಆದರೆ ಕೆಲವರು ಉದ್ದೇಶಪೂರ್ವಕವಾಗಿ ಸರ್ಕಾರದ ವಿರುದ್ಧ ಸುಳ್ಳುಗಳನ್ನು ಹರಡಿದಾಗ, ಸತ್ಯಗಳನ್ನು ಸ್ಪಷ್ಟಪಡಿಸುವುದು ನಮ್ಮ ಕರ್ತವ್ಯವಾಗುತ್ತದೆ ಎಂದು ಹೇಳಿದರು.

ಸಂಚಾರ ದಟ್ಟಣೆಯ ಬಗ್ಗೆ ಮತ್ತು ಸುರಕ್ಷತಾ ಕಾರಣಗಳಿಂದಾಗಿ ಹಲವಾರು ಸ್ಥಳಗಳಲ್ಲಿ ಸಭೆ ನಡೆಸಬೇಕೆಂಬ ಟಿವಿಕೆಯ ವಿನಂತಿಗಳನ್ನು ನಿರಾಕರಿಸಲಾಗಿದೆ ಎಂದು ಸಿಎಂ ಹೇಳಿದರು. ವೇಲುಸಾಮಿಪುರಂನಲ್ಲಿ ಸಭೆ ನಡೆಸಲು 11 ಷರತ್ತುಗಳೊಂದಿಗೆ ಅನುಮತಿ ನೀಡಲಾಗಿದೆ ಎಂದರು.

ಟಿವಿಕೆ ಸಭೆಗೆ ಒಬ್ಬ ಎಸ್‌ಪಿ, 3 ಎಎಸ್‌ಪಿಗಳು, 6 ಡಿಎಸ್‌ಪಿಗಳು, 20 ಇನ್ಸ್‌ಪೆಕ್ಟರ್‌ಗಳು, 83 ಎಸ್‌ಐಗಳು ಮತ್ತು ಸಶಸ್ತ್ರ ಪೊಲೀಸ್ ಸಿಬ್ಬಂದಿ ಸೇರಿದಂತೆ 606 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ರಾಜಕೀಯ ಸಭೆಗಳಿಗೆ ಸಾಮಾನ್ಯ ನಿಯೋಜನೆಗಿಂತ ಇದು ಗಮನಾರ್ಹವಾಗಿ ಹೆಚ್ಚಾಗಿದೆ ಎಂದರು.

10,000 ಜನರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂದು ಸಂಘಟಕರು ಹೇಳಿದ್ದರು, ಆದರೆ ಅಲ್ಲಿ ಇನ್ನಷ್ಟು ಜನರು ಸೇರಿದ್ದರು. ಸಭೆ ಮಧ್ಯಾಹ್ನ 3 ಗಂಟೆಗೆ ನಿಗದಿಯಾಗಿದ್ದರೂ, ಪಕ್ಷದ ಮುಖಂಡರು ಮಧ್ಯಾಹ್ನ ಆಗಮಿಸುತ್ತಾರೆ ಎಂಬ ಘೋಷಣೆಯಿಂದ ಜನಸಮೂಹ ಆಗಮಿಸಿತ್ತು, ಆದರೆ ವಿಜಯ್ ಬಂದಿದ್ದು ಸಂಜೆ 7 ಗಂಟೆಗೆ ಎಂದರು.

ಟಿವಿಕೆ ಸಭೆಗೆ ಕೇವಲ ಎರಡು ದಿನಗಳ ಮೊದಲು, ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿ ಸೆಪ್ಟೆಂಬರ್ 25 ರಂದು ಅದೇ ಸ್ಥಳದಲ್ಲಿ ಪ್ರಚಾರ ಸಭೆ ನಡೆಸಿದ್ದರು, ಆಗ ದುರ್ಘಟನೆಯಾಗಿರಲಿಲ್ಲವಲ್ಲ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com