
ನವದೆಹಲಿ: ಭಾರತದ ಪ್ರವಾಸದಲ್ಲಿರುವ ಶ್ರೀಲಂಕಾದ ಪ್ರಧಾನಿ ಹರಿಣಿ ಅಮರಸೂರ್ಯ ಅವರು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ಮಾಡಿದರು.
ಹರಿಣಿ ಅಮರಸೂರ್ಯ ಅವರು ಇಂದು ಪ್ರಧಾನಿ ಮೋದಿ ಅವರನ್ನು ದೆಹಲಿಯಲ್ಲಿರುವ ಅವರ ಅಧಿಕೃತ ನಿವಾಸದಲ್ಲಿ ಭೇಟಿಯಾದರು.
ಶ್ರೀಲಂಕಾ ಪ್ರಧಾನಿ ಹರಿಣಿ ಅವರೊಂದಿಗೆ ಅಭಿವೃದ್ಧಿ ಸಹಕಾರ ಮತ್ತು ಭಾರತೀಯ ಮೀನುಗಾರರ ಕಲ್ಯಾಣದಂತಹ ಹಲವಾರು ವಿಷಯಗಳ ಕುರಿತು ಚರ್ಚಿಸಿದೆ ಎಂದು ಪ್ರಧಾನಿ ಮೋದಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
"ಶ್ರೀಲಂಕಾದ ಪ್ರಧಾನಿ ಶ್ರೀಮತಿ ಹರಿಣಿ ಅಮರಸೂರ್ಯ ಅವರನ್ನು ಸ್ವಾಗತಿಸಲು ಸಂತೋಷವಾಯಿತು. ನಮ್ಮ ಚರ್ಚೆಗಳು ಶಿಕ್ಷಣ, ಮಹಿಳಾ ಸಬಲೀಕರಣ, ನಾವೀನ್ಯತೆ, ಅಭಿವೃದ್ಧಿ ಸಹಕಾರ ಮತ್ತು ನಮ್ಮ ಮೀನುಗಾರರ ಕಲ್ಯಾಣ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಲಾಯಿತು" ಎಂದು ಮೋದಿ X ನಲ್ಲಿ ತಿಳಿಸಿದ್ದಾರೆ.
Advertisement