'75 ಗಂಟೆಯಲ್ಲಿ 303 ನಕ್ಸಲರ ಶರಣಾಗತಿ: ಭಯೋತ್ಪಾದನೆ ಮುಕ್ತ ದೀಪಾವಳಿ; ವಿಶ್ವದ ಮುಂದೆ ಮೊದಲ ಬಾರಿ ನನ್ನ ನೋವು ಹೇಳಿಕೊಳ್ತಿದ್ದೀನಿ'

ಛತ್ತೀಸ್‌ಗಢದಲ್ಲಿ ಗುರುವಾರ ಒಂದೇ ದಿನ 170 ನಕ್ಸಲರು ಶರಣಾಗಿದ್ದಾರೆ. ಇವರು ಸಾಮಾನ್ಯ ಜನರಾಗಿರಲಿಲ್ಲ. ಇವರ ತಲೆಗೆ ಬಹುಮಾನ ನಿಗದಿ ಮಾಡಲಾಗಿತ್ತು. ಈಗ ಅವರೇ ಮುಕ್ತವಾಗಿ ಶರಣಾಗಿದ್ದು, ಅವರಿಂದ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳನ್ನ ವಶಪಡಿಸಿಕೊಳ್ಳಲಾಗಿದೆ
PM Narendra Modi
ಪ್ರಧಾನಿ ನರೇಂದ್ರ ಮೋದಿ
Updated on

ನವದೆಹಲಿ: ಕಳೆದ 24 ಗಂಟೆಗಳಲ್ಲಿ 300 ಕ್ಕೂ ಹೆಚ್ಚು ಮಾವೋವಾದಿಗಳು ಶರಣಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಒಂದು ಕಾಲದಲ್ಲಿ ಬಾಂಬ್‌ ಸ್ಫೋಟಿಸಿ ಹತ್ಯೆಗೈಯುತ್ತಿದ್ದ ಸ್ಥಳದಲ್ಲಿ ಈಗ ಒಲಿಂಪಿಕ್ಸ್‌ ಕ್ರೀಡಾಕೂಟದ ತಯಾರಿ ನಡೆಯುತ್ತಿದೆ. ಇದು ಅತಿದೊಡ್ಡ ಬೆಳವಣಿಗೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯ ಪಟ್ಟಿದ್ದಾರೆ.

NDTV ವಿಶ್ವ ಶೃಂಗಸಭೆ ಯಲ್ಲಿ ಮಾತನಾಡಿದ ಅವರು, ಮಾವೋವಾದಿಗಳು ಕಳೆದ 50-55 ವರ್ಷಗಳಲ್ಲಿ ಸಾವಿರಾರು ಜನರನ್ನ ಕೊಂದಿದ್ದಾರೆ. ಅಲ್ಲದೇ ಶಾಲೆಗಳನ್ನಾಗಲಿ, ಆಸ್ಪತ್ರೆಗಳನ್ನಾಗಲಿ ನಿರ್ಮಿಸಲು ಬಿಡಲಿಲ್ಲ. ವೈದ್ಯರನ್ನ ಚಿಕಿತ್ಸಾಲಯಗಳಿಗೆ ಹೋಗದಂತೆ ತಡೆದರು. ಹಲವು ಸಂಸ್ಥೆಗಳ ಮೇಲೆ ದಾಳಿ ಮಾಡಿದ್ದರು. ಮಾವೋವಾದಿಗಳ ಭಯೋತ್ಪಾದನೆಯಿಂದ ಯುವಜನರಿಗೆ ಅನ್ಯಾಯವಾಗಿತ್ತು. ಇದೇ ಮೊದಲ ಬಾರಿಗೆ ಜಗತ್ತಿನ ಮುಂದೆ ನನ್ನ ನೋವನ್ನ ಹೇಳಿಕೊಳ್ಳುತ್ತಿದ್ದೇನೆ ಎಂದು ಭಾವುಕರಾದರು.

ನಮ್ಮ ಸರ್ಕಾರ ಅನ್ಯಾಯಕ್ಕೆ ಒಳಗಾದ ಹಾಗೂ ದಾರಿ ತಪ್ಪಿದ ಯುವಜನರನ್ನ ತಲುಪಿ, ಮತ್ತೆ ಅವರನ್ನ ಮುಖ್ಯವಾಹಿನಿಗೆ ತರಲು ವಿಶೇಷ ಪ್ರಯತ್ನಗಳನ್ನ ನಡೆಸಿದೆ. ಇಡೀ ದೇಶ ಇಂದು ಈ ಪ್ರಯತ್ನಗಳ ಫಲಿತಾಂಶ ನೋಡುತ್ತಿದೆ. ಈಗ 303 ನಕ್ಸಲರು ಶರಣಾಗಿದ್ದಾರೆ.

ಛತ್ತೀಸ್‌ಗಢದಲ್ಲಿ ಗುರುವಾರ ಒಂದೇ ದಿನ 170 ನಕ್ಸಲರು ಶರಣಾಗಿದ್ದಾರೆ. ಇವರು ಸಾಮಾನ್ಯ ಜನರಾಗಿರಲಿಲ್ಲ. ಇವರ ತಲೆಗೆ ಬಹುಮಾನ ನಿಗದಿ ಮಾಡಲಾಗಿತ್ತು. ಈಗ ಅವರೇ ಮುಕ್ತವಾಗಿ ಶರಣಾಗಿದ್ದು, ಅವರಿಂದ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.

PM Narendra Modi
ಛತ್ತೀಸ್‌ಗಢ: ಒಂದೇ ದಿನ 110 ಮಹಿಳಾ ನಕ್ಸಲರು ಸೇರಿ 208 ಮಾವೋವಾದಿಗಳು ಶರಣು!

ಸಾಮೂಹಿಕ ಶರಣಾಗತಿಯ ಪರಿಣಾಮವಾಗಿ ನಕ್ಸಲ್‌ ಪೀಡಿತ ಜಿಲ್ಲೆಗಳ ಸಂಖ್ಯೆ ಇಳಿಕೆಯಾಗಿದೆ. ಹಿಂದೆ 125 ಇದ್ದ ನಕ್ಸಲ್‌ ಪೀಡಿತ ಜಿಲ್ಲೆಗಳು ಈಗ 11ಕ್ಕೆ ಇಳಿಕೆಯಾಗಿದೆ. ನಕ್ಸಲ್‌ ಚಟುವಟಿಕೆಗಳನ್ನ ತಡೆಯುವಲ್ಲಿ ನಮ್ಮ ಸರ್ಕಾರ ಯಶಸ್ವಿಯಾಗಿದೆ.

ಈ ಹಿಂದೆ ಬಸ್ತಾರ್‌ನಲ್ಲಿ (ತೀವ್ರವಾಗಿ ಬಾಧಿತವಾದ ಜಿಲ್ಲೆ) ಮಾವೋಗಳು ವಾಹನಗಳನ್ನ ಸ್ಫೋಟಿಸಿ ಭದ್ರತಾ ಸಿಬ್ಬಂದಿಗಳನ್ನ ಹತ್ಯೆಗೈದಿದ್ದರು. ಇಂದು ಅಲ್ಲಿನ ಯುವಕರು ʻಬಸ್ತಾರ್‌ ಒಲಿಂಪಿಕ್ಸ್‌ʼ ಆಯೋಜಿಸುತ್ತಿದ್ದಾರೆ. ಇದು ಅತಿದೊಡ್ಡ ಬದಲಾವಣೆ. ಈಗ ಶಾಂತಿಯ ದೀಪಾವಳಿ ಆಚರಿಸಲು ಸಾಧ್ಯವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತ ಪಡಿಸಿದರು.

ಕಾಂಗ್ರೆಸ್‌ ಅವರನ್ನ ಗಮನಿಸಲಿಲ್ಲ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ, ಈ ಪರಿಸರ ವ್ಯವಸ್ಥೆಯ ಕುರಿತು ಚರ್ಚೆಸೋದನ್ನೇ ಸಂಪೂರ್ಣವಾಗಿ ನಿಗ್ರಹಿಸಲಾಗಿತ್ತು ಎಂದು ವಾಗ್ದಾಳಿ ನಡೆಸಿದರು.

ಬಹಳ ದೊಡ್ಡ ಸೆನ್ಸಾರ್‌ಶಿಪ್ ಕಾರ್ಯವಿಧಾನವು ಕಾರ್ಯನಿರ್ವಹಿಸುತ್ತಿತ್ತು... ಕಾಂಗ್ರೆಸ್ ಆಳ್ವಿಕೆಯಲ್ಲಿ ಪ್ರವರ್ಧಮಾನಕ್ಕೆ ಬಂದವರು, ಸಂಸ್ಥೆಗಳನ್ನು ವಶಪಡಿಸಿಕೊಂಡು ತಮ್ಮನ್ನು ನಗರ ನಕ್ಸಲರು ಎಂದು ಕರೆದುಕೊಂಡಿದ್ದರು ಎಂದು ಪ್ರಧಾನಿ ಮೋದಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com