
ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಸೀಟು ಹಂಚಿಕೆಯಲ್ಲಿ ತಮ್ಮ ಎಲ್‌ಜೆಪಿ(ರಾಮ್ ವಿಲಾಸ್) ಸೇರಿದಂತೆ ಸಣ್ಣ ಎನ್‌ಡಿಎ ಪಾಲುದಾರರಿಗೆ ಅವಕಾಶ ನೀಡುವಲ್ಲಿ "ದೊಡ್ಡ ಹೃದಯ" ತೋರಿಸಿದ್ದಕ್ಕಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿ(ಯು) ಮತ್ತು ಬಿಜೆಪಿಗೆ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಶನಿವಾರ ಧನ್ಯವಾದ ಅರ್ಪಿಸಿದ್ದಾರೆ.
ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ನಡೆಯುವ ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ಪ್ರಮುಖ ಕ್ಷೇತ್ರಗಳನ್ನು ಭದ್ರಪಡಿಸಿಕೊಳ್ಳುವ ಕಾರ್ಯತಂತ್ರಗಳ ಕುರಿತು ಚರ್ಚಿಸಲು ಚಿರಾಗ್ ಪಾಸ್ವಾನ್ ಅವರು ಇಂದು ಪಾಟ್ನಾದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದರು.
ಬಳಿಕ ಮಾತನಾಡಿದ ಪಾಸ್ವಾನ್ ಅವರು, ಎನ್‌ಡಿಎ "ಐತಿಹಾಸಿಕ ಗೆಲುವು" ಸಾಧಿಸುತ್ತದೆ ಎಂದು ಪ್ರತಿಪಾದಿಸಿದರು.
ಆಂತರಿಕ ಘರ್ಷಣೆಗಳಿಂದ ಬಳಲುತ್ತಿರುವ ಇಂಡಿಯಾ ಒಕ್ಕೂಟವು ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ರಾಜ್ಯ ವಿಧಾನಸಭೆ ಚುನಾವಣೆಗೂ ಮುನ್ನ ಜನರು ಅಂತಹ ನಾಯಕತ್ವವನ್ನು ಒಪ್ಪುವುದಿಲ್ಲ ಎಂದು ಎಚ್ಚರಿಸಿದರು.
"ತೇಜಸ್ವಿ ಯಾದವ್ ಅವರೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಮೈತ್ರಿಕೂಟವೇ ಬಹಿರಂಗವಾಗಿ ಹೇಳುತ್ತಿಲ್ಲ. ಜನರು ಅವರನ್ನು ಸ್ವೀಕರಿಸುವುದಿಲ್ಲ. ಇಷ್ಟೊಂದು ಆಂತರಿಕ ಘರ್ಷಣೆಗಳನ್ನು ಹೊಂದಿರುವ ಮೈತ್ರಿಕೂಟವು ಬಿಹಾರವನ್ನು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ" ಎಂದು ವಾಗ್ದಾಳಿ ನಡೆಸಿದರು.
Advertisement