ಧನ್ತೇರಸ್ ಅಂಗವಾಗಿ 60 ಟನ್ ಚಿನ್ನ ಆಭರಣ ಮಾರಾಟ; ದೀಪಾವಳಿ ಮುಕ್ತಾಯಕ್ಕೂ ಮುನ್ನ ವಹಿವಾಟು 1 ಲಕ್ಷ ಕೋಟಿ ದಾಟುವ ನಿರೀಕ್ಷೆ!

ರಡು ದಿನಗಳಲ್ಲಿ ಬಲವಾದ ಬೇಡಿಕೆಯು ಅಂದಾಜು 85,000 ಕೋಟಿ ರೂ.ಗಳಿಗೆ ಚಿನ್ನದ ಮಾರಾಟವನ್ನು ಹೆಚ್ಚಿಸಿದೆ ಎಂದು ಅಖಿಲ ಭಾರತ ರತ್ನ ಮತ್ತು ಆಭರಣ ಮಂಡಳಿ (GJC) ತಿಳಿಸಿದೆ.
Jewellery market (file pic)
ಮಹಿಳೆಯೊಬ್ಬರು ಆಭರಣ ಮಳಿಗೆಯಲ್ಲಿ ಚಿನ್ನದ ಸರ ನೋಡುತ್ತಿರುವುದು (ಸಂಗ್ರಹ ಚಿತ್ರ)online desk
Updated on

ನವದೆಹಲಿ: ಈ ವರ್ಷ ಭಾರತದಾದ್ಯಂತ ಆಭರಣ ಮಾರುಕಟ್ಟೆಗಳು ಧನ್ತೇರಸ್‌ ಅಂಗವಾಗಿ ಭರ್ಜರಿ ವಹಿವಾಟು ಕಂಡಿವೆ. ಎರಡು ದಿನಗಳಲ್ಲಿ ಬಲವಾದ ಬೇಡಿಕೆಯು ಅಂದಾಜು 85,000 ಕೋಟಿ ರೂ.ಗಳಿಗೆ ಚಿನ್ನದ ಮಾರಾಟವನ್ನು ಹೆಚ್ಚಿಸಿದೆ ಎಂದು ಅಖಿಲ ಭಾರತ ರತ್ನ ಮತ್ತು ಆಭರಣ ಮಂಡಳಿ (GJC) ತಿಳಿಸಿದೆ.

ಜಿಜೆಸಿ ಅಧ್ಯಕ್ಷ ರಾಜೇಶ್ ರೋಕ್ಡೆ ಮಾತನಾಡಿ, "ಭಾರತದಾದ್ಯಂತ, ಧನ್ತೇರಸ್‌ನ ಎರಡು ದಿನಗಳಲ್ಲಿ ಸುಮಾರು 50 ರಿಂದ 60 ಟನ್ ಆಭರಣಗಳು ಮಾರಾಟವಾಗಿದೆ. ಇದರ ಮೌಲ್ಯ ಸುಮಾರು 85 ಸಾವಿರ ಕೋಟಿ ರೂ.ಗಳಷ್ಟಾಗಿದ್ದು. ಪ್ರತಿಕ್ರಿಯೆ ಅದ್ಭುತವಾಗಿದೆ, ಎಲ್ಲಾ ವರ್ಗದ ಆಭರಣಗಳು ಬಲವಾದ ಬೇಡಿಕೆಯನ್ನು ಕಂಡಿವೆ. ಕಳೆದ ವರ್ಷದಷ್ಟೇ ಪ್ರಮಾಣದಲ್ಲಿ ಈ ಬಾರಿಯೂ ಚಿನ್ನಾಭರಣಗಳು ಮಾರಾಟವಾಗಿದೆ. ಆದರೆ ಮೌಲ್ಯದ ವಿಷಯದಲ್ಲಿ, ನಾವು ಶೇಕಡಾ 35-40 ರಷ್ಟು ಗಮನಾರ್ಹ ಬೆಳವಣಿಗೆಯನ್ನು ಕಂಡಿದ್ದೇವೆ." ಎಂದು ಹೇಳಿದ್ದಾರೆ.

Jewellery market (file pic)
ಚಿನ್ನ vs ಬೆಳ್ಳಿ: ಹೂಡಿಕೆ ಮಾಡಲು ಯಾವುದು ಉತ್ತಮ? ತಜ್ಞರು ಹೇಳುವುದೇನು?

ಚಿನ್ನದ ಜೊತೆಗೆ ಇತ್ತೀಚಿನ ದಿನಗಳಲ್ಲಿ ಬೆಳ್ಳಿಗೂ ಬೇಡಿಕೆ ಹೆಚ್ಚಾಗತೊಡಗಿದೆ. ಗ್ರಾಹಕರು ಚಿನ್ನದ ಬೆಲೆಗಳು ಏರುತ್ತಿರುವುದರಿಂದ ಹೆಚ್ಚು ಕೈಗೆಟುಕುವ ಆಯ್ಕೆಗಳತ್ತ ಗಮನ ಹರಿಸಿದ್ದರಿಂದ ಬೆಳ್ಳಿ ಮಾರಾಟವು ಬಹುತೇಕ ದ್ವಿಗುಣಗೊಂಡಿದೆ. ಧನ್ತೇರಸ್ ಆಚರಣೆಯ ಅಂಗವಾಗಿ ಜನರು ಮುಗಿಬಿದ್ದು ಚಿನ್ನಾಭರಣಗಳನ್ನು ಖರೀದಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com