
ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿಯಿರುವಂತೆಯೇ RJD ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರ ನಿವಾಸದ ಹೊರಗೆ ಭಾನುವಾರ ಹೈಡ್ರಾಮವೇ ನಡೆಯಿತು.
ಟಿಕೆಟ್ ವಂಚಿತ ಆರ್ ಜೆಡಿ ಮುಖಂಡರೊಬ್ಬರು ಬಟ್ಟೆ ಹರಿದುಕೊಂಡು, ಗೋಳಾಡುತ್ತಾ, ರಸ್ತೆಯಲ್ಲಿ ಹೊರಳಾಡಿದರು. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ.
ಅಂದಹಾಗೆ, ಹೀಗೆ ವೈರಲ್ ಆದವರು ಮದನ್ ಸಾಹ್. ಅವರು ದೀರ್ಘಕಾಲದಿಂದ ಆರ್ ಜೆಡಿ ಪಕ್ಷದಲ್ಲಿದ್ದರು. 2020 ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಕಡಿಮೆ ಅಂತರದಲ್ಲಿ ಪರಾಜಿತರಾಗಿದ್ದ ಮದನ್ ಸಾಹ್, ಮಧುಬಾನ್ ಕ್ಷೇತ್ರದಿಂದ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ ಈ ಬಾರಿ ಟಿಕೆಟ್ ಸಿಗದೆ ತುಂಬಾ ಹತಾಶೆಗೊಳಗಾಗಿದ್ದಾರೆ.
ನನಗೆ ರೂ. 2.7 ಕೋಟಿ ಕೇಳಲಾಯಿತು. ನನ್ನ ಮಕ್ಕಳ ಮದುವೆಯನ್ನು ತಡೆಹಿಡಿಯುವ ಅಷ್ಟು ಹಣವನ್ನು ಹೇಗೊ ಕೊಟ್ಟಿದೆ. ಈಗ ನನ್ನ ಕಥೆ ಮುಗಿಸಲಾಗಿದೆ. ಕನಿಷ್ಠ ಪಕ್ಷ ನನ್ನ ಹಣವನ್ನಾದರೂ ವಾಪಸ್ ಮಾಡಲಿ ಎಂದು ಅವರು ಕಣ್ಣೀರಿಟ್ಟರು.
ಆಕಾಂಕ್ಷಿಯಿಂದ ಹಣದ ಬೇಡಿಕೆಯಿಟ್ಟಿರುವ ಆರೋಪದ ಬಗ್ಗೆ ಪಕ್ಷದ ಮುಖಂಡರು ತುಟ್ಟಿ ಬಿಚಿಲ್ಲ. ಸೋಮವಾರ ನಾಮಪತ್ರ ಸಲ್ಲಿಕೆ ಮುಕ್ತಾಯವಾಗಲಿದ್ದು, ಈ ಕ್ಷೇತ್ರದಿಂದ ಮತ್ತೆ ಆರ್‌ಜೆಡಿ ಸ್ಪರ್ಧಿಸಲಿದ್ದೆಯೇ ಅಥವಾ ಅದರ ಮಿತ್ರ ಪಕ್ಷ ಸ್ಪರ್ಧಿಸಲಿದೆಯೇ ಎಂಬುದು ತಿಳಿದಿಲ್ಲ.
Advertisement