
ಪಾಟ್ನಾ: ಮಾಜಿ ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಆರ್.ಕೆ. ಸಿಂಗ್ ಅವರು ಪಕ್ಷದ ಪ್ರಮುಖ ಅಭ್ಯರ್ಥಿ ಹಾಗೂ ಬಿಹಾರ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರಿಗೆ ಮತ ಹಾಕಬೇಡಿ ಎಂದು ಬಿಹಾರದ ಜನತೆಗೆ ಒತ್ತಾಯಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಭಾನುವಾರ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಸಿಂಗ್ ಅವರು, "ನಿಮ್ಮ ಜಾತಿಗೆ ಸೇರಿದವರಾಗಿದ್ದರೂ ಸಹ" ಅಪರಾಧ ಹಿನ್ನೆಲೆ ಹೊಂದಿರುವ ಯಾವುದೇ ಅಭ್ಯರ್ಥಿಗಳಿಗೆ ಯಾವುದೇ ಕಾರಣಕ್ಕೂ ಮತ ಹಾಕಬೇಡಿ ಎಂದು ಜನರಿಗೆ ಸಲಹೆ ನೀಡಿದರು.
"ಕಳಂಕವಿಲ್ಲದ ಯಾವುದೇ ಅಭ್ಯರ್ಥಿ ಲಭ್ಯವಿಲ್ಲದೆ ಇದ್ದರೆ" ನೋಟಾ ಆಯ್ಕೆ ಮಾಡಿಕೊಳ್ಳುವಂತೆಯೂ ಆರ್.ಕೆ. ಸಿಂಗ್ ಅವರು ಬಿಹಾರ ಜನತೆಗೆ ಮನವಿ ಮಾಡಿದ್ದಾರೆ.
ಆರ್.ಕೆ. ಸಿಂಗ್ ಅವರು ಹೆಸರಿಸಿದ ಕಳಂಕಿತ ಎನ್ ಡಿಎ ಅಭ್ಯರ್ಥಿಗಳಲ್ಲಿ ಡಿಸಿಎಂ ಚೌಧರಿ(ತಾರಾಪುರ) ಮತ್ತು ಮೊಕಾಮಾದ ಜೆಡಿ(ಯು) ಅಭ್ಯರ್ಥಿ ಅನಂತ್ ಸಿಂಗ್ ಸೇರಿದ್ದಾರೆ.
ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಅರಾಹ್ ಕ್ಷೇತ್ರದಲ್ಲಿ ಸೋತ ನಂತರ ರಾಜಕೀಯವಾಗಿ ಅತಂತ್ರರಾಗಿರುವ ಸಿಂಗ್ ಅವರು, ಜಗದೀಶಪುರ ಮತ್ತು ಸಂದೇಶ್‌ನ ಜೆಡಿ(ಯು) ಅಭ್ಯರ್ಥಿಗಳನ್ನು ಸಹ ಹೆಸರಿಸಿದ್ದಾರೆ.
ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರ್‌ಜೆಡಿ ಅಭ್ಯರ್ಥಿಗಳಾದ ದೀಪು ಸಿಂಗ್(ಅರ್ರಾ) ಮತ್ತು ಒಸಾಮಾ ಶಹಾಬ್(ರಘುನಾಥಪುರ) ಅವರ ಹೆಸರುಗಳನ್ನು ಸಿಂಗ್ ಹೆಸರಿಸಿದ್ದಾರೆ.
Advertisement