ಸೌದಿ ಅರೇಬಿಯಾದಲ್ಲಿ ನಿಂತು ಬಲೂಚಿಸ್ತಾನದ ಹೋರಾಟ- ಪಾಕಿಸ್ತಾನದ ಬಗ್ಗೆ ಸಲ್ಮಾನ್ ಖಾನ್ ಅಚ್ಚರಿ ಹೇಳಿಕೆ- ವಿಡಿಯೋ ವೈರಲ್!

ಸೌದಿ ಅರೇಬಿಯಾದ ರಿಯಾದ್‌ನಲ್ಲಿ ನಡೆದ ಜಾಯ್ ಫೋರಮ್ 2025 ರಲ್ಲಿ ಶಾರುಖ್ ಖಾನ್ ಮತ್ತು ಆಮಿರ್ ಖಾನ್ ಸೇರಿದಂತೆ ಇತರ ಬಾಲಿವುಡ್ ಸೂಪರ್‌ಸ್ಟಾರ್‌ಗಳೊಂದಿಗೆ ಭಾಗವಹಿಸಿದ್ದ ಸಲ್ಮಾನ್ ಖಾನ್
Pakistan Army chief- Actor Salman Khan
ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸೀಮ್ ಮುನೀರ್- ಬಾಲಿವುಡ್ ನಟ ಸಲ್ಮಾನ್ ಖಾನ್ online desk
Updated on

ರಿಯಾದ್‌: ಧ್ಯಪ್ರಾಚ್ಯದಲ್ಲಿ ಕೆಲಸ ಮಾಡುತ್ತಿರುವ ವಲಸಿಗ ಸಮುದಾಯಗಳನ್ನು ಉಲ್ಲೇಖಿಸುವಾಗ ನಟ ಸಲ್ಮಾನ್ ಖಾನ್ ಇತ್ತೀಚೆಗೆ ಬಲೂಚಿಸ್ತಾನ್ ಮತ್ತು ಪಾಕಿಸ್ತಾನವನ್ನು ಪ್ರತ್ಯೇಕವಾಗಿ ಉಲ್ಲೇಖಿಸಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದೆ.

ಸೌದಿ ಅರೇಬಿಯಾದ ರಿಯಾದ್‌ನಲ್ಲಿ ನಡೆದ ಜಾಯ್ ಫೋರಮ್ 2025 ರಲ್ಲಿ ಶಾರುಖ್ ಖಾನ್ ಮತ್ತು ಆಮಿರ್ ಖಾನ್ ಸೇರಿದಂತೆ ಇತರ ಬಾಲಿವುಡ್ ಸೂಪರ್‌ಸ್ಟಾರ್‌ಗಳೊಂದಿಗೆ ಭಾಗವಹಿಸಿದ್ದ ಸಲ್ಮಾನ್ ಖಾನ್

ಬಲೂಚಿಸ್ತಾನದ ಇತಿಹಾಸ ದಂಗೆಕೋರ ಪ್ರಯತ್ನಗಳಿಂದ ತುಂಬಿದ್ದು, ಇದನ್ನು ಪಾಕಿಸ್ತಾನ ಸರ್ಕಾರ ಪ್ರಾಂತ್ಯದ ಕೆಲವು ಬುಡಕಟ್ಟು ಮುಖ್ಯಸ್ಥರ ಅಸಮಾಧಾನವೆಂಬಂತೆ ಚಿತ್ರಿಸಲು ಪ್ರಯತ್ನಿಸಿದೆ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ದಕ್ಷಿಣ ಏಷ್ಯಾದ ಸಮುದಾಯಗಳಲ್ಲಿ ಭಾರತೀಯ ಸಿನಿಮಾದ ಹೆಚ್ಚುತ್ತಿರುವ ಜಾಗತಿಕ ಆಕರ್ಷಣೆಯ ಬಗ್ಗೆ ಸಲ್ಮಾನ್ ಖಾನ್ ಈ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

"ಇದೀಗ, ನೀವು ಹಿಂದಿ ಚಿತ್ರವನ್ನು ನಿರ್ಮಿಸಿ ಇಲ್ಲಿ (ಸೌದಿ ಅರೇಬಿಯಾದಲ್ಲಿ) ಬಿಡುಗಡೆ ಮಾಡಿದರೆ, ಅದು ಸೂಪರ್‌ಹಿಟ್ ಆಗುತ್ತದೆ. ನೀವು ತಮಿಳು, ತೆಲುಗು ಅಥವಾ ಮಲಯಾಳಿ ಚಿತ್ರವನ್ನು ಮಾಡಿದರೆ, ಅದು ನೂರಾರು ಕೋಟಿ ವ್ಯವಹಾರವನ್ನು ಮಾಡುತ್ತದೆ ಏಕೆಂದರೆ ಇತರ ದೇಶಗಳಿಂದ ಅನೇಕ ಜನರು ಇಲ್ಲಿಗೆ ಬಂದಿದ್ದಾರೆ. ಬಲೂಚಿಸ್ತಾನದ ಜನರಿದ್ದಾರೆ, ಅಫ್ಘಾನಿಸ್ತಾನದ ಜನರಿದ್ದಾರೆ, ಪಾಕಿಸ್ತಾನದ ಜನರಿದ್ದಾರೆ... ಎಲ್ಲರೂ ಇಲ್ಲಿ ಕೆಲಸ ಮಾಡುತ್ತಿದ್ದಾರೆ." ಎಂದು ಸಲ್ಮಾನ್ ಖಾನ್ ಬಲೂಚಿಸ್ಥಾನ ಹಾಗೂ ಪಾಕಿಸ್ತಾನವನ್ನು ಪ್ರತ್ಯೇಕ ರಾಷ್ಟ್ರಗಳೆಂಬಂತೆ ಉಲ್ಲೇಖಿಸಿದ್ದಾರೆ.

ಸಾಮಾಜಿಕ ಮಾಧ್ಯಮ ಪ್ರತಿಕ್ರಿಯೆ

ಈ ಕ್ಲಿಪ್ ಅತ್ಯಂತ ವೇಗವಾಗಿ ವೈರಲ್ ಆಗತೊಡಗಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಖಾನ್ ಅವರ ಈ ಹೇಳಿಕೆ ಉದ್ದೇಶಪೂರ್ವಕವಾಗಿದೆಯೇ ಅಥವಾ ಬಾಯ್ತಪ್ಪಿನಿಂದಾಗಿದೆಯೇ? ಎಂದು ಚರ್ಚಿಸುತ್ತಿದ್ದಾರೆ

ಪತ್ರಕರ್ತೆ ಸ್ಮಿತಾ ಪ್ರಕಾಶ್ ಈ ಕ್ಲಿಪ್ ನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. "ಇದು ನಾಲಿಗೆಯ ಎಡವಟ್ಟಾಗಿದೆಯೇ ಅಥವಾ ಉದ್ದೇಶಪೂರ್ವಕವಾಗಿಯೇ ಮಾತನಾಡಿರುವುದೇ? ಎಂದು ನನಗೆ ತಿಳಿದಿಲ್ಲ, ಆದರೆ ಇದು ಅದ್ಭುತವಾಗಿದೆ! ಸಲ್ಮಾನ್ ಖಾನ್ "ಬಲೂಚಿಸ್ತಾನದ ಜನರನ್ನು" "ಪಾಕಿಸ್ತಾನದ ಜನರಿಂದ" ನಿಂದ ಬೇರ್ಪಡಿಸಿದ್ದಾರೆ" ಎಂದು ಬರೆದಿದ್ದಾರೆ.

ಸಲ್ಮಾನ್ ಖಾನ್ ತಮ್ಮ ಹೇಳಿಕೆ ಬಲೂಚಿಸ್ತಾನ್ 'ಸ್ವತಂತ್ರ' ಎಂದು ಉದ್ದೇಶಪೂರ್ವಕವಾಗಿ ಸುಳಿವು ನೀಡುತ್ತಿದೆಯೇ? ಇದು ಬಾಯ್ತಪ್ಪಿನಿಂದ ಆಗಿರುವುದೇ? ಅಥವಾ ಜ್ಞಾನದ ಕೊರತೆಯೇ ಅಥವಾ ಅದು ಕೂಡ ಆಮಿರ್ ಖಾನ್ ಮತ್ತು ಶಾರುಖ್ ಅವರೊಂದಿಗೆ ವೇದಿಕೆಯಲ್ಲಿ?" ಎಂದು ಮತ್ತೊಬ್ಬ ಸಾಮಾಜಿಕ ಜಾಲತಾಣ ಗ್ರಾಹಕರು ಬರೆದಿದ್ದಾರೆ.

ಈ ಚರ್ಚೆಗಳ ​​ಹೊರತಾಗಿಯೂ, ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ನಟನನ್ನು ಸಮರ್ಥಿಸಿಕೊಂಡಿದ್ದಾರೆ. ಈ ಕಾಮೆಂಟ್ ಖಾನ್ ಅವರ ಪ್ರಾದೇಶಿಕ ಗುರುತುಗಳ ಬಗ್ಗೆ ಅವರ ಅರಿವನ್ನು ತೋರಿಸುತ್ತದೆ ಎಂದು ಒಂದಷ್ಟು ಮಂದಿ ಹೇಳಿದ್ದಾರೆ.

"@BeingSalmanKhan 'ಬಲೂಚಿಸ್ತಾನ್, ಅಫ್ಘಾನಿಸ್ತಾನ್, ಪಾಕಿಸ್ತಾನ...' ಎಂದು ಹೇಳಿದಾಗ - ಅದು ಬಹಳಷ್ಟು ಅರ್ಥವನ್ನು ನೀಡುತ್ತದೆ. ಬಲೂಚಿಸ್ತಾನ್ ಪಾಕಿಸ್ತಾನಿ ಪ್ರಾಂತ್ಯವಲ್ಲ - ಅದು ಒಂದು ರಾಷ್ಟ್ರ. ಬಲೂಚ್ ನಮ್ಮ ಗುರುತು ಮತ್ತು ನಮ್ಮ ರಾಜ್ಯ" ಎಂದು ಎಕ್ಸ್ ಬಳಕೆದಾರ ಜಾಸ್ಮಿನ್ ಅಹ್ಮದ್ ಬರೆದಿದ್ದಾರೆ.

"ಸಲ್ಮಾನ್ ಖಾನ್ ಕೂಡ ಬಲೂಚಿಸ್ತಾನ್ ಪ್ರತ್ಯೇಕ ದೇಶ ಎಂದು ಒಪ್ಪಿಕೊಂಡಿದ್ದಾರೆ" ಎಂದು ಮತ್ತೊಬ್ಬ ಎಕ್ಸ್ ಬಳಕೆದಾರ ಜಬೀರ್ ಬಲೂಚ್ ಬರೆದಿದ್ದಾರೆ.

ಸಲ್ಮಾನ್ ಖಾನ್ ಅಥವಾ ಅವರ ತಂಡ ಈ ವಿಷಯದ ಬಗ್ಗೆ ಇನ್ನೂ ಯಾವುದೇ ಸ್ಪಷ್ಟೀಕರಣವನ್ನು ನೀಡಿಲ್ಲ.

ಬಲೂಚಿಸ್ತಾನ್‌ನಲ್ಲಿ ದಂಗೆ

ಬಲೂಚಿಸ್ತಾನ್ ಪಾಕಿಸ್ತಾನದ ಅತಿದೊಡ್ಡ ಪ್ರಾಂತ್ಯ ಮತ್ತು ಬೀಜಿಂಗ್‌ನ "ಚೀನಾ-ಪಾಕಿಸ್ತಾನ್ ಆರ್ಥಿಕ ಕಾರಿಡಾರ್" ಎಂದು ಕರೆಯಲ್ಪಡುವ ಪ್ರಮುಖ ಚೆಕ್‌ಪಾಯಿಂಟ್ ಆಗಿದೆ, ಇಲ್ಲಿನ ಗ್ವಾದರ್ ಬಂದರು ಓಮನ್ ಕೊಲ್ಲಿಗೆ ಹತ್ತಿರದಲ್ಲಿದೆ. ಇದು ಪಾಕಿಸ್ತಾನದ ಅನಿಲ ಉತ್ಪಾದನೆಯ ಶೇಕಡಾ 40 ರಷ್ಟನ್ನು ಹೊಂದಿದೆ. ಇದರ ಕಾರ್ಯತಂತ್ರದ ಮಹತ್ವದ ಹೊರತಾಗಿಯೂ, ಈ ಪ್ರದೇಶವನ್ನು ಪಾಕಿಸ್ತಾನದ ಕೇಂದ್ರ ನಾಯಕತ್ವ ನಿರ್ಲಕ್ಷಿಸಿದೆ, ಇದು 1948 ರಲ್ಲಿ ಪಾಕಿಸ್ತಾನಕ್ಕೆ ಸೇರಿದಾಗಿನಿಂದ ಪ್ರಾರಂಭವಾದ ಸ್ವಾತಂತ್ರ್ಯ ಚಳುವಳಿಗೆ ಕಾರಣವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com