ಶಿಮ್ಲಾದಲ್ಲಿ ಪಂಚಾಯತ್ ಮುಖ್ಯಸ್ಥನಿಂದ ಬಾಲಕಿ ಮೇಲೆ ಅತ್ಯಾಚಾರ!

ದೂರಿನ ಪ್ರಕಾರ, ಕಿಶೋರಿ ಲಾಲ್ ಎಂದು ಗುರುತಿಸಲಾದ ಆರೋಪಿಯು, ಅಕ್ಟೋಬರ್ 15 ಮತ್ತು 17 ರಂದು ಬಾಲಕಿಯನ್ನು ತನ್ನ ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
 Representational image
ಸಾಂದರ್ಭಿಕ ಚಿತ್ರ
Updated on

ಶಿಮ್ಲಾ: ಶಿಮ್ಲಾದಲ್ಲಿ ಮಾಟ-ಮಂತ್ರದ ನೆಪದಲ್ಲಿ 13 ವರ್ಷದ ಬಾಲಕಿಯ ಮೇಲೆ ತಾಂತ್ರಿಕ ಪಂಚಾಯತ್ ಮುಖ್ಯಸ್ಥರೊಬ್ಬರು ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ದೂರಿನ ಪ್ರಕಾರ, ಕಿಶೋರಿ ಲಾಲ್ ಎಂದು ಗುರುತಿಸಲಾದ ಆರೋಪಿಯು, ಅಕ್ಟೋಬರ್ 15 ಮತ್ತು 17 ರಂದು ಬಾಲಕಿಯನ್ನು ತನ್ನ ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ಆರೋಪಿಯ ವಿರುದ್ಧ ಬಿಎನ್‌ಎಸ್ ಸೆಕ್ಷನ್ 65 ಮತ್ತು ಪೋಕ್ಸೊ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಅತ್ಯಾಚಾರದ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 Representational image
ಕೋಲ್ಕತಾದಲ್ಲಿ ಮತ್ತೋರ್ವ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಸಹಪಾಠಿ ಬಂಧನ

ಸೆಪ್ಟೆಂಬರ್ 21 ರಂದು ಸಂತ್ರಸ್ತೆ ಬಾಲಕಿ ಶಾಲೆಗೆ ಹೋಗುತ್ತಿದ್ದಾಗ ಕಿಶೋರಿ ಲಾಲ್ ಆಕೆಯನ್ನು ತಡೆದು ಆಕೆ ಧರಿಸಿದ್ದ 'ರುದ್ರಾಕ್ಷ ಮಾಲೆ' ಬಗ್ಗೆ ಕೇಳಿದ್ದಾನೆ. ಕಿಶೋರಿ ಲಾಲ್ ಹಾರವನ್ನು ಮುಟ್ಟಿದಾಗ ಹುಡುಗಿ 'ಆಘಾತ' ಅನುಭವಿಸಿದಳು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆರೋಪಿಯು ತನಗೆ 'ಮಾಟ-ಮಂತ್ರ' ಗೊತ್ತಿದ್ದು, ಆ ಹಾರವನ್ನು ಮಂತ್ರಗಳಿಂದ ಪವಿತ್ರಗೊಳಿಸಬೇಕು. ಇಲ್ಲದಿದ್ದರೆ ನಿಮ್ಮ ಕುಟುಂಬ ಸದಸ್ಯರು ಸಾಯುತ್ತಾರೆ ಎಂದು ಹೇಳಿದ್ದಾನೆ.

ಬಳಿಕ ಕುತಂತ್ರದಿಂದ, ಬಾಲಕಿಯನ್ನು ತನ್ನ ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಅಕ್ಟೋಬರ್ 17 ರಂದು ಮತ್ತೆ ಬಾಲಕಿಯನ್ನು ತನ್ನ ಮನೆಗೆ ಕರೆದೊಯ್ದು ಮತ್ತೆ ಅದೇ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com