ಮಲಿನಗೊಂಡ ಯಮುನಾ ನದಿ ನೀರು ಕುಡಿದ ಬಿಜೆಪಿ ನಾಯಕ; ಹೇಳಿದ್ದೇನು?

ಮುಖ್ಯಮಂತ್ರಿ ರೇಖಾ ಗುಪ್ತಾ ನೇತೃತ್ವದಲ್ಲಿ 8 ತಿಂಗಳ ಬಿಜೆಪಿ ಸರ್ಕಾರ ಯಮುನಾವನ್ನು ಸ್ವಚ್ಛಗೊಳಿಸಲು ಮಾಡಿದ ಬದ್ಧ ಪ್ರಯತ್ನಗಳ ಪರಿಣಾಮವಾಗಿ ನದಿ ನೀರು ಸ್ನಾನ ಮಾಡಲು ಮಾತ್ರವಲ್ಲ, ಕುಡಿಯುವುದಕ್ಕೂ ಸಹ ಯೋಗ್ಯವಾಗಿದೆ ಎಂದು ಅವರು ಹೇಳಿದರು.
Yamuna water Cleaning
ಯಮುನಾ ನದಿ ಶುದ್ದೀಕರಣದ ಚಿತ್ರ
Updated on

ದೆಹಲಿ ಭಾರತೀಯ ಜನತಾ ಪಕ್ಷದ ನಾಯಕ ಅನಿಲ್ ಗುಪ್ತಾ ಗುರುವಾರ ಯಮುನಾ ನದಿಯ ನೀರನ್ನು ಸೇವಿಸಿದ್ದಾರೆ. ಕಳೆದ ಎಂಟು ತಿಂಗಳುಗಳಲ್ಲಿ ಪಕ್ಷದ ಸರ್ಕಾರದ ಪ್ರಯತ್ನಗಳಿಂದಾಗಿ ನದಿ ತನ್ನ ತೀವ್ರ ಮಾಲಿನ್ಯ ಸ್ಥಿತಿಯಿಂದ ಚೇತರಿಸಿಕೊಳ್ಳುವ ಹಾದಿಯಲ್ಲಿದೆ ಎಂದು ಹೇಳಿದ್ದಾರೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಯಮುನಾ ನದಿಯಲ್ಲಿ ಸ್ನಾನ ಮಾಡಿದ್ದ ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ, ಯಮುನಾ ಮಾಲಿನ್ಯದ ಬಗ್ಗೆ ಅಂದಿನ ಎಎಪಿ ಸರ್ಕಾರದ "ನಿರಾಸಕ್ತಿ"ಯ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿ, ನದಿಯ ನೀರು ಈಗ ಬಹುತೇಕ "ಸಾಮಾನ್ಯ"ವಾಗಿದೆ ಎಂದು ಹೇಳಿದ್ದಾರೆ.

Yamuna water Cleaning
ಗುಣಮಟ್ಟ ಪರೀಕ್ಷೆಯಲ್ಲಿ 23 ಕಡೆ ಯಮುನಾ ನದಿ ನೀರು ವಿಫಲ: ಸಂಸದೀಯ ಸಮಿತಿ ವರದಿ

"ಅಕ್ಟೋಬರ್ 25, 2024 ರಂದು, ನಾನು ಐಟಿಒ ಘಾಟ್‌ನಲ್ಲಿ ಯಮುನಾ ನದಿಯಲ್ಲಿ ಸ್ನಾನ ಮಾಡಿ ಅದರ ಶೋಚನೀಯ ಸ್ಥಿತಿಯನ್ನು ಬಹಿರಂಗಪಡಿಸಿದಾಗ, ನನ್ನನ್ನು ಆಸ್ಪತ್ರೆಗೆ ದಾಖಲಿಸಬೇಕಾಯಿತು" ಎಂದು ಅವರು ಈಗ ಹೇಳಿದ್ದಾರೆ.

ಮುಖ್ಯಮಂತ್ರಿ ರೇಖಾ ಗುಪ್ತಾ ನೇತೃತ್ವದಲ್ಲಿ 8 ತಿಂಗಳ ಬಿಜೆಪಿ ಸರ್ಕಾರ ಯಮುನಾವನ್ನು ಸ್ವಚ್ಛಗೊಳಿಸಲು ಮಾಡಿದ ಬದ್ಧ ಪ್ರಯತ್ನಗಳ ಪರಿಣಾಮವಾಗಿ ನದಿ ನೀರು ಸ್ನಾನ ಮಾಡಲು ಮಾತ್ರವಲ್ಲ, ಕುಡಿಯುವುದಕ್ಕೂ ಸಹ ಯೋಗ್ಯವಾಗಿದೆ ಎಂದು ಅವರು ಹೇಳಿದರು.

"dissolved oxygen ಈಗ ಯಾವುದೇ ದುರ್ವಾಸನೆ ಇಲ್ಲ, ಕರಗಿದ ಆಮ್ಲಜನಕದ ಮಟ್ಟ 4.5 ರಿಂದ 5.5 ರ ನಡುವೆ ಇದೆ ಮತ್ತು pH ಮಟ್ಟ 7.5 ಆಗಿದೆ - ಇದು ಸಾಮಾನ್ಯಕ್ಕೆ ಹತ್ತಿರದಲ್ಲಿದೆ" ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com