ಮುಂದಿನ ವಾರ '10-15 ರಾಜ್ಯಗಳೊಂದಿಗೆ' ಅಖಿಲ ಭಾರತ SIR ಆರಂಭ ಸಾಧ್ಯತೆ

2026 ರಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ಅಸ್ಸಾಂ, ತಮಿಳುನಾಡು, ಪುದುಚೇರಿ, ಕೇರಳ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ 10-15 ರಾಜ್ಯಗಳಲ್ಲಿ ಮುಂದಿನ ವಾರ ಮತದಾರರ ಪಟ್ಟಿಯ ಶುದ್ಧೀಕರಣ ಕಾರ್ಯ ಆರಂಭವಾಗಲಿದೆ.
Election Commission of India
ಚುನಾವಣಾ ಆಯೋಗ
Updated on

ನವದೆಹಲಿ: ಚುನಾವಣಾ ಆಯೋಗವು ಮುಂದಿನ ವಾರ "10 ರಿಂದ 15 ರಾಜ್ಯಗಳು" ಸೇರಿದಂತೆ ಮತದಾರರ ಪಟ್ಟಿಯ ಮೊದಲ ಪ್ಯಾನ್-ಇಂಡಿಯಾ ವಿಶೇಷ ಸಮಗ್ರ ಪರಿಷ್ಕರಣೆ(SIR)ಯನ್ನು ಜಾರಿಗೆ ತರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

2026 ರಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ಅಸ್ಸಾಂ, ತಮಿಳುನಾಡು, ಪುದುಚೇರಿ, ಕೇರಳ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ 10-15 ರಾಜ್ಯಗಳಲ್ಲಿ ಮುಂದಿನ ವಾರ ಮತದಾರರ ಪಟ್ಟಿಯ ಶುದ್ಧೀಕರಣ ಕಾರ್ಯ ಆರಂಭವಾಗಲಿದೆ.

ಚುನಾವಣಾ ಪ್ರಾಧಿಕಾರವು ಮುಂದಿನ ವಾರದ ಮಧ್ಯದಲ್ಲಿ SIR ನ ಮೊದಲ ಹಂತವನ್ನು ಘೋಷಿಸುವ ಸಾಧ್ಯತೆಯಿದ್ದ, ಇದರಲ್ಲಿ "10 ರಿಂದ 15 ರಾಜ್ಯಗಳು" ಸೇರಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Election Commission of India
ಬಿಹಾರ ಆಯ್ತು, ಈಗ ದೇಶಾದ್ಯಂತ SIR: ಸೆಪ್ಟೆಂಬರ್ 30 ರೊಳಗೆ ಸನ್ನದ್ದರಾಗಿ; ರಾಜ್ಯಗಳಿಗೆ ಕೇಂದ್ರ ಚುನಾವಣಾ ಆಯೋಗ ಸೂಚನೆ

ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಡೆಯುತ್ತಿರುವ ರಾಜ್ಯಗಳಲ್ಲಿ EC ಮತದಾರರ ಪಟ್ಟಿ ಶುದ್ಧೀಕರಣ ಕಾರ್ಯವನ್ನು ನಡೆಸುವುದಿಲ್ಲ. ಏಕೆಂದರೆ ತಳಮಟ್ಟದ ಚುನಾವಣಾ ಯಂತ್ರವು ಅದರಲ್ಲಿ ನಿರತವಾಗಿದೆ. ಹೀಗಾಗಿ SIR ಮೇಲೆ ಗಮನಹರಿಸಲು ಸಾಧ್ಯವಾಗದಿರಬಹುದು. ಅಂತಹ ರಾಜ್ಯಗಳಲ್ಲಿ SIR ಅನ್ನು ನಂತರದ ಹಂತಗಳಲ್ಲಿ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.

ಬಿಹಾರದಲ್ಲಿ ಮತದಾರರ ಪಟ್ಟಿಯ ಶುದ್ಧೀಕರಣ ಕಾರ್ಯವು ಮುಕ್ತಾಯಗೊಂಡಿದೆ. ಸೆಪ್ಟೆಂಬರ್ 30 ರಂದು ಸುಮಾರು 7.42 ಕೋಟಿ ಹೆಸರುಗಳನ್ನು ಹೊಂದಿರುವ ಅಂತಿಮ ಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ.

ಬಿಹಾರದಲ್ಲಿ ನವೆಂಬರ್ 6 ಮತ್ತು ನವೆಂಬರ್ 11 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ನವೆಂಬರ್ 14 ರಂದು ಫಲಿತಾಂಶ ಪ್ರಕಟವಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com