

ಚೆನ್ನೈ: ಕರೂರ್ ಕಾಲ್ತುಳಿತ ದುರಂತ ನಡೆದು ಒಂದು ತಿಂಗಳ ನಂತರ, ಅಕ್ಟೋಬರ್ 27 ರಂದು ಚೆನ್ನೈ ಬಳಿಯ ಮಹಾಬಲಿಪುರಂನಲ್ಲಿ ಸಂತ್ರಸ್ತ ಕುಟುಂಬಗಳನ್ನು ನಟ-ರಾಜಕಾರಣಿ ವಿಜಯ್ ಭೇಟಿ ಮಾಡುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈ ಸಂಬಂಧ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ(ಟಿವಿಕೆ), ರೆಸಾರ್ಟ್‌ನಲ್ಲಿ ಸಭೆ ಏರ್ಪಡಿಸಿದ್ದು, ಅಲ್ಲಿ ಪಕ್ಷವು 50 ಕೊಠಡಿಗಳನ್ನು ಕಾಯ್ದಿರಿಸಿದೆ. ವಿಜಯ್ ಅವರು ದುಃಖಿತ ಕುಟುಂಬಗಳನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಸಂತಾಪ ಸೂಚಿಸಲಿದ್ದಾರೆ ಎನ್ನಲಾಗಿದೆ.
ರೆಸಾರ್ಟ್‌ಗೆ ತೆರಳಲು ಅವರು ನಮಗೆ ಬಸ್ ವ್ಯವಸ್ಥೆ ಮಾಡಿದ್ದಾರೆ. ನಮ್ಮಲ್ಲಿ ಹಲವರು ಹೋಗುತ್ತಿದ್ದೇವೆ ಎಂದು ಸಂತ್ರಸ್ತರ ಕುಟುಂಬ ಸದಸ್ಯರಲ್ಲಿ ಒಬ್ಬರು ಕರೂರಿನಲ್ಲಿ ವರದಿಗಾರರಿಗೆ ತಿಳಿಸಿದ್ದಾರೆ.
ಸೆಪ್ಟೆಂಬರ್ 27 ರಂದು ವಿಜಯ್ ಅವರ ಟಿವಿಕೆ ಕಾರ್ಯಕ್ರಮದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 41 ಜನ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 60ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.
ತನ್ನ ಅಪ್ರಾಪ್ತ ಹೆಣ್ಣು ಮಕ್ಕಳನ್ನು ಕಳೆದುಕೊಂಡ ವೇಲುಸಾಮಿಪುರಂನ ಪೆರುಮಾಳ್ ಅವರು, ವರದಿಗಾರರೊಂದಿಗೆ ಮಾತನಾಡಿ, ಸಂತ್ರಸ್ತ ಕುಟುಂಬಗಳು ರೆಸಾರ್ಟ್‌ಗೆ ಹೋಗಿ ಟಿವಿಕೆ ನಾಯಕನನ್ನು ಭೇಟಿ ಮಾಡುವುದು ಸೂಕ್ತವಲ್ಲ. ಅವರೇ ಸಂತ್ರಸ್ತರ ಮನೆಗೆ ಭೇಟಿ ನೀಡಬೇಕು" ಎಂದು ಹೇಳಿದ್ದಾರೆ.
Advertisement