ಖಾಸಗಿ ಉದ್ಯೋಗಿಗಳ ಕೆಲಸದ ಅವಧಿ 9 ರಿಂದ 10 ಗಂಟೆಗೆ ಹೆಚ್ಚಿಸಲು ಮಹಾರಾಷ್ಟ್ರ ಸಚಿವ ಸಂಪುಟ ಅಸ್ತು

ಈಗಾಗಲೇ ಕರ್ನಾಟಕ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ ಮತ್ತು ತ್ರಿಪುರದಂತಹ ಇತರ ರಾಜ್ಯಗಳು ಸಹ ಇದೇ ರೀತಿಯ ಬದಲಾವಣೆಗಳನ್ನು ಜಾರಿಗೆ ತಂದಿವೆ.
Maharashtra CM Devendra Fadnavis
ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್
Updated on

ಮುಂಬೈ: ಪ್ರಮುಖ ಕಾರ್ಮಿಕ ಸುಧಾರಣಾ ಕ್ರಮದಲ್ಲಿ, ಮಹಾರಾಷ್ಟ್ರ ಸಚಿವ ಸಂಪುಟವು ಖಾಸಗಿ ವಲಯದ ಉದ್ಯೋಗಿಗಳ ದೈನಂದಿನ ಕೆಲಸದ ಸಮಯವನ್ನು 9 ರಿಂದ 10 ಗಂಟೆಗಳವರೆಗೆ ಹೆಚ್ಚಿಸಲು ಅನುಮೋದಿಸಿದೆ.

ಈಗಾಗಲೇ ಕರ್ನಾಟಕ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ ಮತ್ತು ತ್ರಿಪುರದಂತಹ ಇತರ ರಾಜ್ಯಗಳು ಸಹ ಇದೇ ರೀತಿಯ ಬದಲಾವಣೆಗಳನ್ನು ಜಾರಿಗೆ ತಂದಿದ್ದು, ಇದೀಗ ಮಹಾರಾಷ್ಟ್ರದಲ್ಲೂ ಖಾಸಗಿ ಉದ್ಯೋಗಿಗಳ ಕೆಲಸದ ಅವಧಿಯವನ್ನು 9 ರಿಂದ 10 ಗಂಟೆಗೆ ಹೆಚ್ಚಿಸಲಾಗಿದೆ.

1948ರ ಕಾರ್ಖಾನೆಗಳ ಕಾಯ್ದೆ ಮತ್ತು 2017ರ ಮಹಾರಾಷ್ಟ್ರ ಅಂಗಡಿ ಮತ್ತು ಕಂಪನಿಗಳ ಕಾಯ್ದೆಗೆ ತಿದ್ದುಪಡಿ ಮಾಡಲಾಗುತ್ತಿದೆ.

Maharashtra CM Devendra Fadnavis
ಕೆಲಸದ ಅವಧಿ ದಿನಕ್ಕೆ 8 ಗಂಟೆ ಬದಲು 10 ಗಂಟೆಗೆ ವಿಸ್ತರಣೆ: ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದೇನು?

ಈ ತಿದ್ದುಪಡಿಯು ಗರಿಷ್ಠ ಬೇಡಿಕೆ ಅಥವಾ ಕಾರ್ಮಿಕರ ಕೊರತೆಯ ಸಮಯದಲ್ಲಿ ಕೈಗಾರಿಕೆಗಳು ಯಾವುದೇ ಅಡೆತಡೆಯಿಲ್ಲದೆ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ ಮತ್ತು ಕಾರ್ಮಿಕರು ಸರಿಯಾದ ಅಧಿಕಾವಧಿ ಪರಿಹಾರ ಪಡೆಯುವುದನ್ನು ಖಚಿತಪಡಿಸುತ್ತದೆ.

ಇದರೊಂದಿಗೆ, ಕೈಗಾರಿಕೆಗಳಲ್ಲಿ ದೈನಂದಿನ ಕೆಲಸದ ಸಮಯದ ಮಿತಿ ಒಂಬತ್ತರಿಂದ 12 ಗಂಟೆಗಳವರೆಗೆ ಹೆಚ್ಚಾಗುತ್ತದೆ. ಆದರೆ ಐದು ಗಂಟೆಗಳ ಬದಲಿಗೆ ಆರು ಗಂಟೆಗಳ ನಂತರ ವಿಶ್ರಾಂತಿ ವಿರಾಮಕ್ಕೆ ಅನುಮತಿಸಲಾಗುತ್ತದೆ.

ಈ ಬದಲಾವಣೆಯು 20 ಅಥವಾ ಅದಕ್ಕಿಂತ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಸಂಸ್ಥೆಗಳಿಗೆ ಮಾತ್ರ ಅನ್ವಯಿಸುತ್ತದೆ. 20ಕ್ಕಿಂತ ಕಡಿಮೆ ಕಾರ್ಮಿಕರನ್ನು ನೇಮಿಸಿಕೊಂಡಿರುವ ಸಂಸ್ಥೆಗಳಿಗೆ ಇನ್ನು ಮುಂದೆ ನೋಂದಣಿ ಪ್ರಮಾಣಪತ್ರಗಳ ಅಗತ್ಯವಿರುವುದಿಲ್ಲ. ಆದರೆ ಸರಳ ಮಾಹಿತಿ ಪ್ರಕ್ರಿಯೆಯ ಮೂಲಕ ಅಧಿಕಾರಿಗಳಿಗೆ ತಿಳಿಸಬೇಕು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com