
ಇಂದೋರ್: 161 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ದೆಹಲಿ-ಇಂದೋರ್ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಎಂಜಿನ್‌ನಲ್ಲಿ ಎಂಜಿನ್ ದೋಷ ಕಾಣಿಸಿಕೊಂಡು ತುರ್ತು ಸ್ಥಿತಿಯಾಗಿ ಆದರೆ ಪೈಲಟ್ ಗೆ ಯಾವುದೇ ಹಾನಿಯಿಲ್ಲ ಎಂದು ಸೂಚಿಸಲು ಪೈಲಟ್ ಪ್ಯಾನ್-ಪ್ಯಾನ್ ಕರೆ ಮಾಡಿದ ಘಟನೆ ನಡೆಯಿತು. 20 ನಿಮಿಷಗಳ ನಂತರ ವಿಮಾನವು ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಮಾನವು ಇಂದೋರ್‌ನ ದೇವಿ ಅಹಲ್ಯಾಬಾಯಿ ಹೋಳ್ಕರ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದ್ದು ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ.
ದೆಹಲಿಯಿಂದ ಇಂದೋರ್‌ಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಒಂದು ಎಂಜಿನ್‌ನಲ್ಲಿ ತಾಂತ್ರಿಕ ದೋಷದ ಬಗ್ಗೆ ಮಾಹಿತಿ ಪಡೆದ ನಂತರ, ನಾವು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡೆವು. ವಿಮಾನವು ಬೆಳಗ್ಗೆ 9.55 ಕ್ಕೆ ಇಂದೋರ್ ವಿಮಾನ ನಿಲ್ದಾಣದಲ್ಲಿ ಇಳಿಯಿತು.
ವೇಳಾಪಟ್ಟಿಯ ಪ್ರಕಾರ, ಅದು ಬೆಳಗ್ಗೆ 9.35 ಕ್ಕೆ ಇಂದೋರ್ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು ಎಂದು ದೇವಿ ಅಹಲ್ಯಾಬಾಯಿ ಹೋಳ್ಕರ್ ವಿಮಾನ ನಿಲ್ದಾಣದ ನಿರ್ದೇಶಕ ವಿಪಿಂಕಾಂತ್ ಸೇಠ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ವಿಮಾನ ಸಂಖ್ಯೆ IX 1028 ಹೊಂದಿರುವ ಈ ವಿಮಾನದ ಸಿಬ್ಬಂದಿ ಮತ್ತು ಅದರಲ್ಲಿದ್ದ ಎಲ್ಲಾ 161 ಪ್ರಯಾಣಿಕರು ಸಂಪೂರ್ಣವಾಗಿ ಸುರಕ್ಷಿತವಾಗಿದ್ದಾರೆ ಎಂದು ಅವರು ಹೇಳಿದರು.
ವಿಮಾನದ ಪೈಲಟ್ ವಾಯು ಸಂಚಾರ ನಿಯಂತ್ರಣ (ATC) ಗೆ 'PAN-PAN' ಸಂಕೇತವನ್ನು ಕಳುಹಿಸಿದರು, ನಂತರ ವಿಮಾನ ನಿಲ್ದಾಣದಲ್ಲಿ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನ (SOP) ಪ್ರಕಾರ ಅಗ್ನಿಶಾಮಕ ಮತ್ತು ವೈದ್ಯಕೀಯ ವ್ಯವಸ್ಥೆಗಳನ್ನು ಮಾಡಲಾಯಿತು ಎಂದು ಸೇಥ್ ಹೇಳಿದರು.
ಏನಿದು PAN-PAN' ಕರೆ?
'PAN-PAN' ಎಂಬುದು ಸಮುದ್ರ ಮತ್ತು ವಾಯು ರೇಡಿಯೋ ಸಂವಹನದಲ್ಲಿ ಬಳಸಲಾಗುವ ಅಂತಾರಾಷ್ಟ್ರೀಯವಾಗಿ ಮಾನ್ಯವಾದ ಸಂಕೇತವಾಗಿದೆ. ವಾಯುಯಾನದಲ್ಲಿ, ಇದು ಸಹಾಯದ ಅಗತ್ಯವಿರುವ ಆದರೆ ತಕ್ಷಣವೇ ಜೀವಕ್ಕೆ ಅಪಾಯಕಾರಿಯಲ್ಲದ ತುರ್ತು ಪರಿಸ್ಥಿತಿಯನ್ನು ಸೂಚಿಸುತ್ತದೆ.
ಪೈಲಟ್ 'PAN-PAN' ಸಂಕೇತವನ್ನು ಕಳುಹಿಸಿದಾಗ, ಸಿಬ್ಬಂದಿಗೆ ವಾಯು ಸಂಚಾರ ನಿಯಂತ್ರಣ ಅಥವಾ 'ತಳ ಸೇವೆ'ಯಿಂದ ತಕ್ಷಣದ ಸಹಾಯದ ಅಗತ್ಯವಿದೆ ಎಂದರ್ಥ.
Advertisement