'ಧೈರ್ಯ ತೋರಿಸಿ, ಅಮೆರಿಕದ ಆಮದುಗಳ ಮೇಲೆ ಶೇ. 75 ರಷ್ಟು ಸುಂಕ ವಿಧಿಸಿ': ಪ್ರಧಾನಿ ಮೋದಿಗೆ ಕೇಜ್ರಿವಾಲ್ ಸವಾಲು

ಜವಳಿ ಉದ್ಯಮವನ್ನು ಬೆಂಬಲಿಸಲು ಮತ್ತು ಇನ್ಪುಟ್ ವೆಚ್ಚವನ್ನು ಕಡಿಮೆ ಮಾಡಲು ಭಾರತ ಪ್ರಸ್ತುತ ಈ ವರ್ಷ ಡಿಸೆಂಬರ್ 31 ರವರೆಗೆ ಕಚ್ಚಾ ಹತ್ತಿಗೆ ಆಮದು ಸುಂಕ ವಿನಾಯಿತಿಯನ್ನು ಹೊಂದಿದೆ.
Delhi Exit polls
ಮೋದಿ ಮತ್ತು ಅರವಿಂದ್ ಕೇಜ್ರಿವಾಲ್online desk
Updated on

ರಾಜ್ ಕೋಟ್: ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು "ಸ್ವಲ್ಪ ಧೈರ್ಯ ತೋರಿಸಿ" ಮತ್ತು ಭಾರತೀಯ ರಫ್ತಿನ ಮೇಲೆ ಶೇಕಡಾ 50 ರಷ್ಟು ಸುಂಕ ವಿಧಿಸಲು ಪ್ರತಿಕ್ರಿಯೆಯಾಗಿ ಅಮೆರಿಕದಿಂದ ಆಮದು ಮಾಡಿಕೊಳ್ಳುವ ಮೇಲೆ ಶೇಕಡಾ 75 ರಷ್ಟು ಸುಂಕ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ.

ಗುಜರಾತ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್, ಡಿಸೆಂಬರ್ 31, 2025 ರವರೆಗೆ ಅಮೆರಿಕದಿಂದ ಹತ್ತಿ ಆಮದಿನ ಮೇಲೆ ಶೇಕಡಾ 11 ರಷ್ಟು ಸುಂಕ ವಿನಾಯಿತಿ ನೀಡುವ ಕೇಂದ್ರದ ನಿರ್ಧಾರ ಭಾರತೀಯ ಹತ್ತಿ ರೈತರಿಗೆ ಹಾನಿ ಮಾಡುತ್ತದೆ ಎಂದು ಹೇಳಿದ್ದಾರೆ. ಇದು ಅಮೆರಿಕದ ರೈತರನ್ನು ಶ್ರೀಮಂತರನ್ನಾಗಿ ಮತ್ತು ಗುಜರಾತ್ ಬೆಳೆಗಾರರನ್ನು ಬಡವರನ್ನಾಗಿ ಮಾಡುತ್ತದೆ ಎಂದು ಅವರು ಆರೋಪಿಸಿದ್ದಾರೆ.

ಜವಳಿ ಉದ್ಯಮವನ್ನು ಬೆಂಬಲಿಸಲು ಮತ್ತು ಇನ್ಪುಟ್ ವೆಚ್ಚವನ್ನು ಕಡಿಮೆ ಮಾಡಲು ಭಾರತ ಪ್ರಸ್ತುತ ಈ ವರ್ಷ ಡಿಸೆಂಬರ್ 31 ರವರೆಗೆ ಕಚ್ಚಾ ಹತ್ತಿಗೆ ಆಮದು ಸುಂಕ ವಿನಾಯಿತಿಯನ್ನು ಹೊಂದಿದೆ.

"ಪ್ರಧಾನ ಮಂತ್ರಿ ಧೈರ್ಯ ತೋರಿಸಬೇಕೆಂದು ನಾವು ಒತ್ತಾಯಿಸುತ್ತೇವೆ, ಇಡೀ ದೇಶವು ನಿಮ್ಮ ಬೆನ್ನಿಗೆ ನಿಂತಿದೆ. ಅಮೆರಿಕ ಭಾರತದಿಂದ ರಫ್ತಿನ ಮೇಲೆ ಶೇಕಡಾ 50 ರಷ್ಟು ಸುಂಕ ವಿಧಿಸಿದೆ. ನೀವು ಅಮೆರಿಕದಿಂದ ಬರುವ ಆಮದುಗಳ ಮೇಲೆ ಶೇಕಡಾ 75 ರಷ್ಟು ಸುಂಕ ವಿಧಿಸಿ, ದೇಶವು ಅದನ್ನು ಭರಿಸಲು ಸಿದ್ಧವಾಗಿದೆ. ಹೆಚ್ಚು ಸುಂಕ ವಿಧಿಸಿ. ನಂತರ ಟ್ರಂಪ್ ತಲೆಬಾಗುತ್ತಾರೋ ಇಲ್ಲವೋ ಎಂದು ನೋಡಿ." ಕೇಜ್ರಿವಾಲ್ ಹೇಳಿದ್ದಾರೆ.

ಅಮೆರಿಕದಿಂದ ಆಮದು ಮಾಡಿಕೊಳ್ಳುವ ಹತ್ತಿಯ ಮೇಲೆ ಶೇ. 11 ರಷ್ಟು ಸುಂಕ ವಿಧಿಸಬೇಕು, ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು ಮತ್ತು 20 ಕೆಜಿಗೆ ರೂ. 2,100 ಹತ್ತಿ ಖರೀದಿ ಮಾಡಬೇಕು, ಜೊತೆಗೆ ಭಾರತೀಯ ರೈತರಿಗೆ ಸಹಾಯ ಮಾಡಲು ರಸಗೊಬ್ಬರಗಳು ಮತ್ತು ಬೀಜಗಳ ಮೇಲೆ ಸಬ್ಸಿಡಿ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಭಾರತದ ಮೇಲೆ ಅಮೆರಿಕ ವಿಧಿಸಿರುವ ಶೇ. 50 ರಷ್ಟು ಸುಂಕವು ವಜ್ರ ಕಾರ್ಮಿಕರ ಮೇಲೂ ಪರಿಣಾಮ ಬೀರಿದೆ ಏಕೆಂದರೆ ಮೋದಿ ಸರ್ಕಾರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದೆ "ಮೊಣಕಾಲೂರಿದೆ" ಎಂದು ದೆಹಲಿಯ ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ.

ಹತ್ತಿಯ ಮೇಲಿನ ಆಮದು ಸುಂಕ ವಿನಾಯಿತಿಯನ್ನು ಡಿಸೆಂಬರ್ 31 ರವರೆಗೆ ವಿಸ್ತರಿಸುವ ನಿರ್ಧಾರವು ರಫ್ತು ಮಾರುಕಟ್ಟೆಗಳಲ್ಲಿ ಭಾರತದ ಸ್ಥಾನವನ್ನು ಬಲಪಡಿಸುತ್ತದೆ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಹಾಗೂ ರಫ್ತು-ಆಧಾರಿತ ಘಟಕಗಳಿಗೆ ಆದೇಶಗಳನ್ನು ಪುನರುಜ್ಜೀವನಗೊಳಿಸುತ್ತದೆ ಎಂದು ಕೇಂದ್ರವು ಕಳೆದ ತಿಂಗಳು ಹೇಳಿದೆ.

ಅಮೆರಿಕ ಭಾರತೀಯ ಸರಕುಗಳ ಮೇಲೆ ವಿಧಿಸಿರುವ ಶೇ.50 ರಷ್ಟು ಸುಂಕಗಳು ಜಾರಿಗೆ ಬರುವ ಸಮಯದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ, ಅಮೆರಿಕ ದೇಶದ ಜವಳಿ ಮತ್ತು ಉಡುಪು ರಫ್ತಿಗೆ ಅತಿದೊಡ್ಡ ರಫ್ತು ಮಾರುಕಟ್ಟೆಯಾಗಿದೆ.

Delhi Exit polls
Watch | ನಮ್ಮ ಸ್ನೇಹ ಎಂದಿಗೂ ಇರುತ್ತದೆ: ಟ್ರಂಪ್; ನಿಮ್ಮ ಭಾವನೆ ಗೌರವಿಸುತ್ತೇನೆ: ಮೋದಿ

ಸುರೇಂದ್ರನಗರ ಜಿಲ್ಲೆಯ ಚೋಟಿಲಾದಲ್ಲಿ 'ಕಿಸಾನ್ ಮಹಾಪಂಚಾಯತ್'ನಲ್ಲಿ ಭಾಗವಹಿಸಲು ಕೇಜ್ರಿವಾಲ್ ಗುಜರಾತ್‌ , ಇದನ್ನು ಭಾರೀ ಮಳೆಯಿಂದಾಗಿ ಮುಂದೂಡಲಾಯಿತು.

ಟ್ರಂಪ್ ಭಾರತದ ಮೇಲೆ ಶೇ. 50 ರಷ್ಟು ಸುಂಕ ವಿಧಿಸಿದಾಗ, ಮೋದಿ ಪ್ರತಿಯಾಗಿ ಅದನ್ನು ಹೆಚ್ಚಿಸಲಿಲ್ಲ, ಬದಲಿಗೆ (ಅಮೆರಿಕದಿಂದ ಹತ್ತಿ ಆಮದಿನ ಮೇಲೆ) ಶೇ. 11 ರಷ್ಟು ಕಡಿಮೆ ಮಾಡಿದರು? ಪ್ರಧಾನಿ ಏಕೆ "ಬಾಗಿದರು, ದುರ್ಬಲರಾದರು ಎಂದು ಕೇಜ್ರಿವಾಲ್ ಪ್ರಶ್ನಿಸಿದರು.

ಭಾರತ ವಿಶ್ವದ ಅತಿದೊಡ್ಡ ಮಾರುಕಟ್ಟೆಯಾಗಿದೆ ಮತ್ತು ಇಲ್ಲಿನ ಜನರು ಮೋದಿಯ ಹಿಂದೆ ನಿಂತಿದ್ದಾರೆ ಎಂದು ಎಎಪಿ ನಾಯಕ ಗಮನಸೆಳೆದರು.

"ಇಡೀ ದೇಶ ಮೋದಿಜಿಯ ಹಿಂದೆ ನಿಂತಿದೆ. ಅವರು (ಟ್ರಂಪ್) ಶೇ. 50 ರಷ್ಟು ಸುಂಕ ವಿಧಿಸಿದರು, ಮೋದಿಜಿ ಹತ್ತಿಯ ಮೇಲೆ ಶೇ. 100 ರಷ್ಟು ಸುಂಕ ವಿಧಿಸಬೇಕಿತ್ತು. ಟ್ರಂಪ್ ತಲೆಬಾಗಬೇಕಾಗಿತ್ತು. ಟ್ರಂಪ್ ಒಬ್ಬ ಹೇಡಿ, ಅಂಜುಬುರುಕ ವ್ಯಕ್ತಿ. ಅವರನ್ನು ಧಿಕ್ಕರಿಸಿದ ಎಲ್ಲಾ ದೇಶಗಳಿಗೆ ಅವರು ತಲೆಬಾಗಬೇಕಾಗಿತ್ತು. ನಾಲ್ಕು ಅಮೇರಿಕನ್ ಕಂಪನಿಗಳನ್ನು ಮುಚ್ಚಿ, ಅವರು ತೊಂದರೆಯಲ್ಲಿ ಸಿಲುಕುತ್ತಾರೆ" ಎಂದು ಅವರು ಹೇಳಿದರು.

ಟ್ರಂಪ್ ಸುಂಕ ವಿಧಿಸಿದ ಇತರ ದೇಶಗಳು ಬಲವಾಗಿ ಪ್ರತಿಕ್ರಿಯಿಸಿದವು ಮತ್ತು ಅಮೆರಿಕದ ಅಧ್ಯಕ್ಷರು "ಬಾಗಿ" ಸುಂಕವನ್ನು ತೆಗೆದುಹಾಕಬೇಕಾಯಿತು, ಆದರೆ ಭಾರತ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com